ತುಮಕೂರು : ಹೇಮಾವತಿ ಎಕ್ಸ್‍ಪ್ರೆಸ್ ಕೆನಾಲ್ ಯೋಜನೆಯಲ್ಲಿ 35.4 ಕಿ.ಮೀ ಉದ್ದದ ಪೈಪ್‍ಲೈನ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಪಕ್ಷತೀತವಾಗಿ ಹಮ್ಮಿಕೊಳ್ಳಲಾಗುವುದು ಎಂದು ನಮ್ಮ ನೀರು-ನಮ್ಮ ಹಕ್ಕು ಹೋರಾಟ ಸಮತಿ ತಿಳಿಸಿತು.

ಮಾಜಿ ಸಚಿವ ಸೊಗಡು ಶಿವಣ್ಣ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಹೆಚ್.ನಿಂಗಪ್ಪ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಪಂಚಾಕ್ಷರಯ್ಯ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎ.ಲಕ್ಷ್ಮೀನಾರಾಯಣಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಭಟನೆಯ ಮುಖ್ಯ ಉದ್ದೇಶವೇನೆಂದರೆ, ತುಮಕೂರು ಜಿಲ್ಲೆಯ ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಜನರಿಗೆ -ಪ್ರಾಣಿಗಳಿಗೆ – ದನ ಕರುಗಳಿಗೆ- ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟು ಮಾಡಲು ಹೊರಟಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ದ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಸೊಗಡು ಶಿವಣ್ಣರವರು ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರುಗಳು ಸೇರಿಕೊಂಡು ತುಮಕೂರು ಜಿಲ್ಲೆಯ ಎಲ್ಲಾ ಮಠ-ಮಾನ್ಯಗಳು ಮಠಾಧೀಶರಗಳು ಪೀಠಾಧಿಪತಿಗಳು, ಹರಗುರು ಚರಮೂರ್ತಿಗಳ ಆರ್ಶೀವಾದದೊಂದಿಗೆ ಬಹೃತ್ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಹೇಮಾವತಿ ಜಲಾಶಯ ಯೋಜನೆಯಡಿ ಬರುವ ಶಾಖಾ ನಾಲೆಯು 0. ಕಿ,ಮೀ ಯಿಂದ 228 ಕಿ.ಮೀ. ಇರುತ್ತದೆ. ಈ ನಾಲೆಯು 191 ಕಿ.ಮೀ ವರೆಗೆ ಮಾಗಡಿ ತಾಲ್ಲೂಕು ಕೆರೆಗಳಿಗೆ ನೀರು ತುಂಬಿಸುವ ಶ್ರೀರಂಗ ಏತ ನೀರಾವತಿ ಯೋಜನೆ ಆಗಿರುತ್ತದೆ ಆದರೆ ರಾಜಕೀಯ ಲಾಭಕ್ಕಾಗಿ ಮೇಲ್ಕಂಡ ಯೋಜನೆಗೆ ಹೆಚ್ಚು ನೀರು ಹರಿಸುವ ಸಲುವಾಗಿ ತುಮಕೂರು ಶಾಖಾ ನಾಲೆಯ 70 ನೇ ಕಿ.ಮೀ. ನಿಂದ 168 ಕಿ.ಮೀ. ನೇರ ಸಂಪರ್ಕ ಕಲ್ಪಿಸುವ ಸುಮಾರು 35.4 ಕಿ.ಮೀ. ಉದ್ದದ ಪೈಪ್‍ಲೈನ್ ಲಿಂಕ್ ಕೆನಾಲ್ (ಎಕ್ಸ್‍ಪ್ರೆಸ್ ಕೆನಾಲ್) ಯೋಜನೆ ಮಾಡಿಸುವ ಮೂಲಕ ಅನಾವಶ್ಯಕವಾಗಿ ಸಾರ್ವಜನಿಕರ ಸಾವಿರಾರು ಕೋಟಿ ತೆರಿಗೆ ಹಣವನ್ನು ಭ್ರಷ್ಠಾ ಹಿತಾಸಕ್ತಿಯಿಂದ, ಕ್ರಿಮಿನಲ್ ಒಳಸಂಚಿನಿಂದ, ದ್ವೇಷದಿಂದ ಸರ್ಕಾರದ ಖಜಾನೆಗೆ ಕನ್ನ ಕೊರೆದು ಶಿಷ್ಠಾಚಾರ ಮೀರಿ ಸರ್ಕಾರದ ನೀತಿ-ನಿರೂಪಣಿಗಳಿಗೆ ವಿರುದ್ದವಾಗಿ ಕರ್ನಾಟಕ ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ತುಮಕೂರು ಶಾಖಾ ನಾಲೆಯ 0.0 ಕಿ.ಮೀ ನಿಂದ 167. ಕಿ.ಮೀ.ವರೆಗೆ ಆಧುನೀಕರಣ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಹಾಲಿ ಇರುವ ನಾಲೆಯ ಮುಖಾಂತರವೇ ಈ ಮೇಲ್ಕಂಡ ಯೋಜನೆಗೆ ನೀರು ಹರಿಸಬಹುದಾಗಿದ್ದರೂ ಸಹ ಪೈಪ್‍ಲೈನ್ ಲಿಂಕ್ ಕೆನಾಲ್ ಕಾಮಗಾರಿಯ ಹೆಸರಿನಲ್ಲಿ ಕಾಂಗ್ರೆಸ್ ನೇತ್ವತ್ವದ ಸರ್ಕಾರ ಬ್ರಹ್ಮಾಂಡ ಭ್ರಷ್ಠಾಚಾರದಲ್ಲಿ ತೊಡಗಿಸಿಕೊಂಡಿರುವುದನ್ನು ಮೇಲ್ನೋಟಕ್ಕೆ ಗುರುತಿಸಬಹುದಾಗಿದೆ ಎಂದರು.
ಈ ಯೋಜನೆಯನ್ನು ಮಾಡಲೇಬೇಕಾದ ಅವಶ್ಯಕತೆ ಇದ್ದರೆ 70 ಕಿ.ಮೀ ನಿಂದ 167. ಕಿ.ಮೀ. ವರೆಗೆ ನಾಲಾ ಆಧುನೀಕರಣ ಮಾಡಿಸಿದ್ದಾದರು ಏಕೆ ? ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಸಲು ಸಾಧ್ಯಾಗುತ್ತಿಲ್ಲವೆಂದು ವರದಿಯಲ್ಲಿ ಹೇಳಿರುವ ಅಧಿಕಾರಿ ವರ್ಗದವರ ನಡೆಯನ್ನು ಸೂಕ್ಮವಾಗಿ ಗಮನಿಸಿದರೆ. ಪೈಪ್‍ಲೈನ್ ಲಿಂಕ್ ಕೆನಾಲ್ ಯೋಜನೆಯಿಂದ ಸಾವಿರಾರು ಕೋಟಿಗಳನ್ನು ಸರ್ಕಾರದ ಬೊಕ್ಕಸಕ್ಕೆ ನಷ್ಠ ಉಂಟು ಮಾಡಿ ಭ್ರಷ್ಠಾಚಾರ ಎಸಗುತ್ತಿದ್ದಾರೆ ಅಂದರೆ ತಪ್ಪಾಗಲಾರದು ಎಂದು ತಿಳಿಸಿದರು.
ತುಮಕೂರು ಶಾಖಾ ನಾಲೆಯ 70 ಕಿ.ಮೀ ನಿಂದ 167 ಕಿ,ಮೀ ವರೆಗೆ ಗುಬ್ಬಿ, ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳಲ್ಲಿ ಸುಮಾರು 23 ಕುಡಿಯುವ ನೀರಿನ ಯೋಜನೆಗಳು ಮತ್ತು ಸುಮಾರು 23 ಅಚ್ಚುಕಟ್ಟಿಗೆ ನೀರುಣಿಸುವ ಉಪ ಕಾಲುವೆಗಳು ಇದ್ದು, ಮೇಲ್ಕಂಡ ಯೋಜನೆ ಕಾರ್ಯಗತವಾದರೆ ಅಚ್ಚುಕಟ್ಟು ಪ್ರದೇಶಗಳು ಹಾಗಿರಲಿ ಐದಾರು ತಾಲ್ಲೂಕುಗಳ ಜನ ಮತ್ತು ಜಾನುವಾರುಗಳು ಹಾಗೂ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗೂ ಸಹ ತುಂಬಾ ಹಾಹಾಕಾರ ಉಂಟಾಗಿ ಶೋಚನೀಯ ಪರಿಸ್ಥಿತಿ ಉದ್ಬವಿಸುತ್ತದೆÉ ಎಂದು ಹೇಳಿದರು.
ಸದರಿ ಯೋಜನೆಯ ಪೈಪ್ ಲೈನ್ ಲಿಂಕ್ ಕೆನಾಲ್ ಉದ್ದ 35.40 ಕಿ.ಮೀ. ಹಾಗೂ ಪೈಪ್ ವ್ಯಾಸ ಸುಮಾರು 3 ಮೀಟರ್ ಇದ್ದು ಊರುಗಳ ಮಧ್ಯೆರಸ್ತೆ ತೋಟಗಳು ಮತ್ತು ಜಮೀನುಗಳಲ್ಲಿ ಹಾದು ಹೋಗುತ್ತಿದ್ದು ರೈತರು ಮತ್ತು ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ.
ರಾಮನಗರ ಜಿಲ್ಲೆಯ ತಾಲ್ಲೂಕಿಗಳಿಗೆ ಎತ್ತಿನ ಹೊಳೆ, ಶಿಂಷಾ ನದಿ, ಕಾವೇರಿ ನದಿ ನೀರಿನ ಮುಖಾಂತರ ನೀರು ಒದಗಿಸಬಹುದಾಗಿರುತ್ತದೆ. ಹೇಮಾವತಿ ನಾಲೆಯ ನೀರನ್ನು ಆಶ್ರಯಿಸಿರುವ ತುಮಕೂರು ಜಿಲ್ಲೆಯ ತಾಲ್ಲೂಕುಗಳಿಗೆ ಅನ್ಯಾಯ ಮಾಡುತ್ತಿರುವುದು ಅಮಾನವೀಯತೆಯ ಸಂಕೇತವಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಹಾಗೂ ಜಲಸಂಪನ್ಮೂಲ ಸಚಿವರ ಒತ್ತಡದ ಮೇರೆಗೆ ಅಧಿಕಾರಿಗಳು ಈ ಯೋಜನೆಯನ್ನು ರೂಪಿಸಿರುವುದು ಜಡ್ಡುಗಟ್ಟಿದ- ತುಕ್ಕು ಹಿಡಿದ ಸರ್ಕಾರದ ಆಡಳಿತ ಯಂತ್ರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಯೋಜನೆಯನ್ನು ಆಳವಾಗಿ ಅಧ್ಯಯನ ಮಾಡಿ ನೋಡುವುದಾದರೆ ಈ ಯೋಜನೆಯು ಬ್ರಹ್ಮಾಂಡ ಭ್ರಷ್ಠಾಚಾರದ ಪ್ರತೀಕವಾಗಿದೆ. ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಲು ನಡೆಸಿರುವ ಹುನ್ನಾರವಾಗಿದೆ ಎಂದು ಆರೋಪಿಸಿದರು.
ಆದ್ದುದರಿಂದ ಈ ಆವೈಜ್ಞಾನಿಕವಾಗಿರುವ ಹಾಗೂ ಅಮಾನವೀಯತೆಯಿಂದ ಕೂಡಿರುವ ಬಹಳಷ್ಟು ಅಡ್ಡ ಪರಿಣಾಮಗಳಿಗೆ ಕಾರಿಣಿಭೂತವಾಗಿರುವ ಈ ಯೋಜನೆಯನ್ನು ತುರ್ತಾಗಿ ನಿಲ್ಲಿಸಬೇಕು. ಮುಂದುವರೆದು ಹಾಲಿ ಇರುವ ನಾಲೆಯಲ್ಲಿಯೇ ನೀರನ್ನು ಹರಿಸಬೇಕು. ಇಲ್ಲದಿದ್ದರೆ ನೈಸರ್ಗಿಕ ಮತ್ತು ಸಾಮಾಜಿಕ ನ್ಯಾಯದ ದೃಷ್ಠಿಯಿಂದ ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ , ಸಮಾನತೆÉಯ ಹಿತದೃಷ್ಠಿಯಿಂದ, ಸವiಭಾವ ಸಮಚಿತ್ತದಿಂದ ಸದರಿ ಕಾಮಗಾರಿಯನ್ನು ತಡೆಯಲು ಮಾಜಿ ಸಚಿವರು ಹಾಗೂ ಮಾಜಿ ಶಾಸಕರುಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ರೈತ ಸಂಘಟನೆಗಳ ಮುಖಂಡರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಸದರಿ ಯೋಜನೆಯಿಂದ :ಡಿ.ರಾಂಪುರ,ಹರಗಲದೇವಿಗುರುಕಾವಲ್,ಬೆಣ್ಣೂರು,ಅತ್ತಿಕಟ್ಟೆ,ಗಂಗಸಂದ್ರ. ಕಳ್Àಶೆಟ್ಟಿಹಳ್ಳಿ.,ರಾಂಪುರ,ಕೊಮ್ಮನಹಳ್ಳಿ ,ಕಡಬ.ಗೊಜೀಹಳ್ಳಿ .ಬೆಂಡಗೆರೆ (ಬ್ಯಾಡಗೆರೆ).ಏಲಚಿಹಳ್ಳಿ ,ವಿ.ಕೋಡಿಹಳ್ಳಿ ,ಕಮ್ಮಸಂದ್ರ,ಹಿಂಡಿಸಗೆರೆ ,ಹುಲ್ಲೆಕೆರೆ,ಸಿ.ಎಸ್.ಪುರ ಕಾವಲ್,ವೀರಣ್ಣನಗುಡಿ.ಅಂಕಳಕೊಪ್ಪ,ಬೋರಪ್ಪನಹಳ್ಳಿ ,ಇಡಗೂರು,ನಾರನಹಳ್ಳಿ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮಗಲಾಗಿವೆ ಎಂದು ತಿಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ದಿಲೀಪ್‍ಕುಮಾರ್, ರೈತ ಮುಖಂಡರುಗಳು ಉಪಸ್ಥಿತರಿದ್ದರು.