ಮಟಮಟ ಅಮಾವಾಸ್ಯೇ ದಿನವೇ ಜೈಲ್ ಪಾಲಾದ ಹೆಚ್.ಡಿ.ರೇವಣ್ಣ-ಕೈ ಹಿಡಿಯದ ನಿಂಬೆ ಹಣ್ಣು

ಬೆಂಗಳೂರು : ಮಟ ಮಟ ಅಮಾವಾಸ್ಯೆಯ ದಿನವೇ ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಪರಪ್ಪ ಅಗ್ರಹಾರ ಜೈಲು ಪಾಲಾಗಿದ್ದಾರೆ.

ಮಾಟ-ಮಂತ್ರ ನಂಬುವ ರೇವಣ್ಣನವರು ಇತ್ತೀಚೆಗಷ್ಟೇ ಹೊಳೆ ನರಸೀಪುರದ ಮನೆಯಲ್ಲಿ ಹೋಮ ಮಾಡಿಸಿ ತಮ್ಮೆಲ್ಲಾ ತಪ್ಪುಗನ್ನು ಹೋಮ ತಿಲಾಂಜಲಿ ಹಾಡಲಿದೆ ಎಂಬುದು ಇದೀಗ ಸುಳ್ಳಾಗಿದ್ದು, ಸದಾ ತಮ್ಮ ಕೈಯಲ್ಲಿಡಿದುಕೊಳ್ಳುತ್ತಿದ್ದ ನಿಂಬೆ ಹಣ್ಣು ಸಹ ಕೈಕೊಟ್ಟಿದ್ದರಿಂದ ಜೈಲು ಪಾಲಾದರೆಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಸಂತ್ರಸ್ಥೆ ಮಹಿಳೆಯೊಬ್ಬರನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಎಸ್‍ಐಟಿ ವಶದಲ್ಲಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ಅವರ ಕಸ್ಟಡಿ ಇಂದು ಅಂತ್ಯವಾಗಿದ್ದು ಈ ಹಿನ್ನಲೆಯಲ್ಲಿ ಅವರು ಜಾಮೀನು ಕೋರಿ 17ನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ರವೀಂದ್ರ ಬಿ.ಕಟ್ಟಿಮನಿ ಇದೀಗ ರೇವಣ್ಣ ಅವರಿಗೆ ಮೇ 14ರ ವರೆಗೆ ಅಂದರೆ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ಹೀಗಾಗಿ ರೇವಣ್ಣ ಪರಪ್ಪನ ಅಗ್ರಹಾರ ಸೇರಬೇಕಿದೆ.

ಮಾಜಿ ಸಚಿವ ರೇವಣ್ಣ ಅವರ ಪರ ಸಿ ವಿ ನಾಗೇಶ್ ವಕಾಲತ್ತು ವಹಿಸಿದ್ದರೆ, ಎಸ್‍ಐಟಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಗದೀಶ್ ವಾದ ಮಂಡಿಸಿದ್ದರು. ಎಸ್‍ಐಟಿ ರೇವಣ್ಣ ವಿಚಾರಣೆಗೆ ಸಹಕರಿಸುತ್ತಿಲ್ಲ. ಅಲ್ಲದೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೇಳಿದ್ದು, ನ್ಯಾಯಾಧೀಶರು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ರೇವಣ್ಣನವರು ಜಾಮೀನು ಸಿಗದೆ ಪರಪ್ಪ ಅಗ್ರಹಾರಕ್ಕೆ ಹೋಗಲು ನ್ಯಾಯಾಲಯದಿಂದ ಹೊರ ಬರುವಾಗ ಕಣ್ಣೀರು ಹಾಕುತ್ತಿದ್ದರನ್ನಲಾಗಿದೆ.

Leave a Reply

Your email address will not be published. Required fields are marked *