ತುಮಕೂರು : ಪ್ರಸಕ್ತ ಲೋಕಸಭೆ ಚುನಾವಣೆಯ ರಾಜ್ಯದ ಎರಡು ಹಂತದ 28 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ಮುಕ್ತಾಯವಾಗಿದೆ. ಈ ಬಾರಿ ದಾಖಲೆ ಪ್ರಮಾಣದ ಶೇ.69.96ರಷ್ಟು ಮತದಾನವಾಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ಪ್ರಕಾರ, ಕಳೆದ ಎರಡು ಲೋಕಸಭೆ ಚುನಾವಣೆಗಳಿಗಿಂತ ಈ ಬಾರಿಯ 1.76ರಷ್ಟು ಮತದಾನ ಹೆಚ್ಚಾಗಿದೆ ಎಂದು ತಿಳಿಸಿದೆ.
2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶೇ.67.20ರಷ್ಟು ಮತದಾನವಾಗಿದ್ದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಶೇ.68.81ರಷ್ಟು ಮತದಾನವಾಗಿತ್ತು.
ಕಳೆದ ಎರಡು ಚುನಾವಣೆಗೆ ಹೋಲಿಸಿದರೆ ಈ ಬಾರಿ ನಡೆದ ಎರಡು ಹಂತದ ಚುನಾವಣೆಗಳಲ್ಲೂ ಹೆಚ್ಚಿನ ಪ್ರಮಾಣದ ಮತದಾನವಾಗಿದೆ. ರಾಜ್ಯದ ಮೊದಲ ಹಂತದ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಶೇ.69.56ರಷ್ಟು ಮತದಾನವಾಗಿದ್ದರೆ ಉತ್ತರ ಕರ್ನಾಟಕದ ಭಾಗದ 2ನೇ ಹಂತದ 14 ಕ್ಷೇತ್ರಗಳಲ್ಲಿ ಶೇ.70.41ರಷ್ಟು ಮತದಾನವಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಶೇ.73.84ರಷ್ಟು ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಶೇ.72.44ರಷ್ಟು ಮತದಾನವಾಗಿತ್ತು.
ಮತ ಯಂತ್ರಗಳನ್ನು ಆಯಾ ಕ್ಷೇತ್ರದಲ್ಲಿ ನಿಗದಿಪಡಿಸಿದ ಸ್ಟ್ರಾಂಗ್ ರೂಮ್ಗಳಲ್ಲಿ ದಾಸ್ತಾನು ಮಾಡಿದ್ದು, ಸೂಕ್ತ ಪೆÇಲೀಸ್ ಭದ್ರತೆ ಒದಗಿಸಲಾಗಿದೆ. ಜೂ.4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗುವವರೆಗೂ ಈ ಕೇಂದ್ರಗಳಿಗೆ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸಲಾಗುತ್ತದೆ.
ಇದು ಪರಿಷ್ಕರಣೆಯಾಗಲಿದ್ದು, ಸಂಜೆ ವೇಳೆಗೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ಬಾರಿ ಶಾಂತಿಯುತ ಹಾಗೂ ದಾಖಲೆ ಪ್ರಮಾಣದಲ್ಲಿ ಮತದಾನ ಆಗಿರುವುದಕ್ಕೆ ರಾಜ್ಯ ಮುಖ್ಯ ಚುನಾವಣಾಧಿ ಕಾರಿಗಳ ಕಚೇರಿ ಶ್ಲಾಘನೆ ವ್ಯಕ್ತಪಡಿಸಿದೆ. ಹಿರಿಯ ನಾಗರಿಕರು, ವಿಶೇಷ ಚೇತನರು, ಯುವ ಮತದಾರರು ಸೇರಿದಂತೆ ಎಲ್ಲರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರಿಂದ ಇದು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಪ್ರಸಕ್ತ ಲೋಕಸಭೆ ಚುನಾವಣೆಯ ಕ್ಷೇತ್ರಗಳ ಶೇಕಡವಾರು ಮತದಾನ ಇಂತಿದೆ.
ಚಿಕ್ಕೋಡಿ- 76.99,ಬೆಳಗಾವಿ – 71,ಬಾಗಲಕೋಟೆ 71.01,ಬಿಜಾಪುರ 64.71,ಗುಲ್ಬರ್ಗಾ 61.73,ರಾಯಚೂರು 64.1,ಬೀದರ್ 63.55,ಕೊಪ್ಪಳ 69.87,ಬಳ್ಳಾರಿ 72.35,ಹಾವೇರಿ 76.78,ಧಾರವಾಡ 72.53,ಉತ್ತರಕನ್ನಡ 73.52,ದಾವಣಗೆರೆ 76.23,ಶಿವಮೊಗ್ಗ 76.05,ಉಡುಪಿ-ಚಿಕ್ಕಮಗಳೂರು 77.15,ಹಾಸನ 77.68,ದಕ್ಷಿಣ ಕನ್ನಡ 77.56,ಚಿತ್ರದುರ್ಗ 73.30,ತುಮಕೂರು 78.05,ಮಂಡ್ಯ 81.67,ಮೈಸೂರು 70.62,ಚಾಮರಾಜನಗರ 76.81,ಬೆಂಗಳೂರು ಗ್ರಾಮಾಂತರ 68.30.ಬೆಂಗಳೂರು ಉತ್ತರ 54.45,ಬೆಂಗಳೂರು ಕೇಂದ್ರ 54.06,ಬೆಂಗಳೂರು ದಕ್ಷಿಣ 53.17,ಚಿಕ್ಕಬಳ್ಳಾಪು76,ಕೋಲಾರ 78.27 ಮತದಾನವಾಗಿದೆ.
ಉಪಚುನಾವಣೆ: ಸುರಪುರ ಉಪಚುನಾವಣೆಯಲ್ಲಿ ಶೇ.73ರಷ್ಟು ಮತದಾನವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ. 75.67ರಷ್ಟು ಮತದಾನವಾಗಿತ್ತು.