ತುಮಕೂರು: ಮನುಕುಲದ ಒಳಿತಿಗಾಗಿ ತತ್ವ ಸಿದ್ಧಾಂತಗಳನ್ನು ಸಾರಿದ ಶಂಕರಾಚಾರ್ಯರು, ಶಾಂತಿ, ಸೌಹಾರ್ದ ಸಮಾಜಕ್ಕಾಗಿ ಮಾರ್ಗದರ್ಶನ ನೀಡಿದರು. ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ ಮಾದರಿ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಬ್ರಾಹ್ಮಣ ಸಭಾ, ಶ್ರೀ ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಭಾನುವಾರ ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ಶಂಕರಾಚಾರ್ಯರ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಧರ್ಮ ಪರಿಪಾಲನೆ, ಧಾರ್ಮಿಕ ಮನೋಭಾವದ ಮೂಲಕ ಮಾನವ ಬದುಕು ಸುಧಾರಣೆಗೆ ಮಾರ್ಗದರ್ಶನ ನೀಡಿದ ಶಂಕರಾಚಾರ್ಯರು, ಮಠಗಳನ್ನು ಸ್ಥಾಪನೆ ಮಾಡಿ ಧರ್ಮ ರಕ್ಷಣೆ ಮಾಡಿದ ದಾರ್ಶನಿಕರು. ಇಂದಿನ ಸಮಾಜದ ಪ್ರಕ್ಷುಬ್ಧ ಪರಿಸ್ಥಿತಿ, ಮನಸ್ಥಿತಿ, ವಿದ್ರೋಹ ಕೃತ್ಯಗಳ ನಿಯಂತ್ರಣಕ್ಕೆ ಇಂತಹ ಮಹನೀಯರ ಆದರ್ಶ, ಮಾರ್ಗದರ್ಶನ ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಇವರ ವಿಚಾರಧಾರೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಇಂತಹ ಮಹನೀಯರ ಜಯಂತಿ ಆಚರಣೆ ಮಾಡುತ್ತಿದೆ ಎಂದು ತಿಳಿಸಿದರು.
ದೇಶಾದ್ಯಂತ ಸಂಚಾರ ಮಾಡಿದ ಶಂಕರಾಚಾರ್ಯರು ಸಮಾಜದ ಲೋಪದೋಷಗಳನ್ನು ತಿದ್ದುತ್ತಾಮಾನವ ಕಲ್ಯಾಣಕ್ಕಾಗಿ ತಮ್ಮ ತತ್ವ ಸಂದೇಶಗಳನ್ನು ಪ್ರಚಾರ ಮಾಡಿ ಸಮಾಜ ಪರಿವರ್ತನೆಯ ಪ್ರಯತ್ನ ಮಾಡಿದರು. ಇವರ ಆದರ್ಶಗಳನ್ನು ನಾವು ಅನುಸರಿಸಿ, ಮುಂದಿನ ತಲೆಮಾರಿಗೆ ಪರಿಚರಿಸುವ ಕಾರ್ಯ ಆಗಬೇಕಾಗಿದೆ ಎಂದು ಸಿದ್ಧಲಿಂಗಪ್ಪ ಹೇಳಿದರು.
ಶೃಂಗೇರಿ ಶಂಕರ ಮಠದ ಶಂಕರ ತತ್ವ ಪ್ರಚಾರ ಸಂಯೋಜಕರಾದ ಎಂ.ಕೆ.ನಾಗರಾಜರಾವ್ ಮಾತನಾಡಿ, ನಮ್ಮ ಭಾರತದ ಆಧ್ಯಾತ್ಮಿಕತೆ, ಸನಾತನ ಧರ್ಮದ ಮೌಲ್ಯ ಪ್ರಚಾರ ಮಾಡಿ ಉಳಿಸಿ, ಬೆಳೆಸುವ ಪ್ರಯತ್ನ ಮಾಡಿದ ಶಂಕರಾಚಾರ್ಯರು, ಜನರಲ್ಲಿ ಆಧ್ಯಾತ್ಮಿಕ, ಬೌದ್ಧಿಕ ಚಿಂತನೆ, ರಾಷ್ಟ್ರೀಯತೆಯ ಜಾಗೃತಿಮೂಡಿಸುವ ಮೂಲಕ ಮಾರ್ಗದರ್ಶನ ನೀಡಿದಶೇಷ್ಠ ಸಮಾಜ ಚಿಂತಕರು ಎಂದು ಹೇಳಿದರು.
ರಾಜರು, ವಿದ್ವಾಂಸರು, ಜನಸಾಮಾನ್ಯರುನ್ನು ಭೇಟಿ ಮಾಡಿಅವರಿಗೆ ಮಾರ್ಗದರ್ಶನ ಮಾಡಿ ಸಮಾಜ ಸುಧಾರಣೆಗೆ ನೆರವಾದರು. ಎಲ್ಲಾ ವರ್ಗದವರಿಗೂ ತಮ್ಮ ತತ್ವಾದರ್ಶಗಳು ತಲುಪಲು ಸಾಹಿತ್ಯ ರಚನೆ ಮಾಡಿ, ಅದನ್ನು ಸ್ಥಳೀಯ ಭಾಷೆಗಳಲ್ಲಿ ತಲುಪಿಸುವ ಪ್ರಯತ್ನ ಮಾಡಿದರು. ನಮ್ಮ ರಾಷ್ಟ್ರೀಯತೆ, ಗುರು ಪರಂಪರೆಯ ಮೌಲ್ಯಗಳನ್ನು ಸಾರಿಹೇಳಿದ ಶಂಕರಾಚಾರ್ಯರು, ಆಧ್ಯಾತ್ಮಕ ಸಂಪತ್ತು ಬೆಳೆಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಲು ಶ್ರಮಿಸಿದರು ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಹೊಳ್ಳ, ಕನ್ನಡ ಮತ್ತು ಸಂಸ್ಕøತಿಕ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಹಿರಿಯ ವಕೀಲ ಜಿ.ಎಸ್.ನಾರಾಯಣ್, ಶಂಕರ ಸೇವಾ ಸಮಿತಿ ಉಪಾಧ್ಯಕ್ಷ ಹೆಚ್.ಕೆ.ರಮೇಶ್, ಕಂದಾಯ ಇಲಾಖೆ ಸಹಾಯಕ ಆಯುಕ್ತ ಅನಂತರಾಮು, ಶ್ರೀ ಕೃಷ್ಣ ಬ್ಯಾಹ್ಮಣ ಸಭಾ ಅಧ್ಯಕ್ಷ ಹೆಚ್.ಎಸ್.ನಾಗಭೂಷಣ್, ಜಿಲ್ಲಾ ಬ್ರಾಹ್ಮಣ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ರಾಘವೇಂದ್ರ ಮೊದಲಾದವರು ಭಾಗವಹಿಸಿದ್ದರು.