ಗೃಹ ಸಚಿವರ ಕ್ಷೇತ್ರದಲ್ಲೇ-ದಲಿತರ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ ತೋರಿರುವ ಡಿವೈಎಸ್‍ಪಿ

ಕೊರಟಗೆರೆ : ಇಂದು ಕೋಳಾಲ ಪೆÇಲೀಸ್ ಠಾಣೆಯಲ್ಲಿ ನಡೆದ ಮಧುಗಿರಿ ಡಿವೈಎಸ್‍ಪಿಯ ದಲಿತ ಮಹಿಳೆ ಮೇಲೆ ಸಿನಿಮಾ ವಿಲನ್ ರೀತಿಯಲ್ಲಿ ದರ್ಪ ತೋರಿಸಿ, ದೌರ್ಜನ್ಯವೆಸಗಿದರು ಎನ್ನಲಾಗಿದೆ.

ಮಧುಗಿರಿ ಡಿ.ವೈ. ಎಸ್.ಪಿ ಗೆ ಜನ ಸಾಮಾನ್ಯರು ಕಾನೂನು ,ನಿಯಮ ಕೇಳಬಾರದು ಎಂದು ದೌರ್ಜನ್ಯದಿಂದ ನಡೆದುಕೊಂಡ ಘಟನೆ ಇಂದು ನಡೆದಿದೆ.

ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ಇರಕಸಂದ್ರ ಕಾಲೋನಿಯ ಗುಡಿಸಲು ವಾಸಿ ದಲಿತರಿಗೆ ನಾಲ್ಕು ತಿಂಗಳಿಂದ ಕುಡಿಯಲು ನೀರು,ವಿದ್ಯುತ್ ನೀಡದ ಕೊರಟಗೆರೆ ತಹಶಿಲ್ದಾರ್ ಮಂಜುನಾಥ್,ತಾಲ್ಲೂಕು ಪಂಚಾಯ್ತಿ ಇಓ ಅಪೂರ್ವ, ನೀಲಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಮಂಜುಳ ಇವರ ವಿರುದ್ದ ದಲಿತರಿಗೆ ಮೂಲಭೂತ ಹಕ್ಕುಗಳಾದ ಕುಡಿಯುವ ನೀರು ವಿದ್ಯುತ್ ನೀಡಲು ಸರ್ಕಾರಿ ಸೇವೆ ನೀಡದೆ ಕರ್ತವ್ಯಲೋಪ ಮಾಡಿರುವ ಕುರಿತು ಈ ದಿನ ಗುಡಿಸಲು ವಾಸಿ ದಲಿತ ರತ್ನಮ್ಮ ಕೋಂ ಮಾರಣ್ಣ ಎಂಬುವರು ಕೋಳಾಲ ಪೆÇಲೀಸ್ ಠಾಣೆಗೆ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ದೂರು ಅರ್ಜಿ ನೀಡಿದ್ದು ಸ್ಥಳಕ್ಕೆ ಬಂದ ಮಧುಗಿರಿ ಡಿವೈಎಸ್‍ಪಿ ನಮ್ಮ ಅರ್ಜಿಗೆ ಎಫ್.ಐ.ಆರ್ ದಾಖಲಿಸಲು ಆಗುವುದಿಲ್ಲ ನೀವು ನನಗೆ ಕಾನೂನು ಹೇಳೊ ಹಾಗೆ ಇಲ್ಲ ಎಂದು ಸರ್ವಾಧಿಕಾರಿಯಂತೆ ದೌರ್ಜನ್ಯದಿಂದ ವರ್ತಿಸಿ ದುರ್ನಡತೆಯಿಂದ ನಡೆದುಕೊಂಡು ದಲಿತರಾದ ನಮ್ಮ ದೂರಿಗೆ ಸ್ಪಂದಿಸದಂತೆ
ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿ ಕೊಳಾಲ ಸಬ್ ಇನ್ಸ್ ಪೆಕ್ಟರ್ ರವರಿಂದ ನಿಮ್ಮ ಅರ್ಜಿಗೆ ಪ್ರಕರಣ ದಾಖಲು ಮಾಡಲು ಬರುವುದಿಲ್ಲ ಎಂದು ಹಿಂಬರಹ ನೀಡಿರುತ್ತಾರೆ.

ಈ ಘಟನೆ ರಾಜ್ಯದ ದಲಿತ ಗೃಹ ಸಚಿವರ ಕೊರಟಗೆರೆ ಕ್ಷೇತ್ರದಲ್ಲಿ ನಡೆದಿದ್ದು ಗೃಹ ಸಚಿವರು ಸಹ ದಲಿತರಾಗಿದ್ದು, ದಲಿತ ಗೃಹ ಸಚಿವರ ಕ್ಷೇತ್ರದಲ್ಲೇ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಎಂದರೆ ಪೆÇಲೀಸ್ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ಜನರ ಪ್ರಶ್ನೆಯಾಗಿದೆ.
ಇರಕಸಂದ್ರ ಕಾಲೋನಿಯ ರತ್ಮಮ್ಮ ಮತ್ತು ಹತ್ತಕ್ಕೂ ಹೆಚ್ಚು ದಲಿತರ ಕುಟುಂಬಗಳು ಡಿವೈಎಸ್ಪಿ ದೌರ್ಜನಕ್ಕೆ ಹೆದರಿ ಜರ್ಜರಿತರಾದ್ದು, ಭಯ ಭೀತರಾಗಿದ್ದಾರೆನ್ನಲಾಗಿದೆ.

Leave a Reply

Your email address will not be published. Required fields are marked *