ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಬೆರೆಯುವ ಗುಣವನ್ನು ಬೆಳೆಸುತ್ತವೆ : ಕನ್ನಿಕಾ ಪರಮೇಶ್ವರಿ ಅಭಿಮತ

ತುಮಕೂರು : ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್‍ಕಾಲೇಜಿನಕ್ಯಾಂಪಸ್‍ನಲ್ಲಿಏರ್ಪಟ್ಟಿರುವಎರಡು ದಿನಗಳ ಸಾಂಸ್ಕøತಿಕ ಕಾರ್ಯಕ್ರಮಗಳ ಕಲಾವೈಭವ-2024’ಕ್ಕೆ ಇಂದುವಿದ್ಯಕ್ತವಾಗಿ ಚಾಲನೆ ನೀಡಲಾಯಿತು.
ಎಸ್‍ಎಸ್‍ಐಟಿ ಕಾಲೇಜಿನ ಹಸಿರು ಕ್ಯಾಂಪಸ್‍ನ ಬಯಲುಮಂದಿರಲ್ಲಿ ಏರ್ಪಟ್ಟ ಕಾರ್ಯಕ್ರಮಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ ಪಿಎಚ್ಡಿ ಪದವೀಧರರಿಗೆ ಅಭಿನಂದಿಸಿದರು.

ನಂತರ ಮಾತಣಾಡಿದ ಅವರು, ಕಲೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗೆಲುವಿಗಿಂತ ಭಾಗವಹಿಸುವಿಕೆಯತ್ತ ಹೆಚ್ಚು ಗಮನ ಕೊಡಬೇಕು. ಗೆಲುವು ಸಿಗದವರು ಮತ್ತೆ ಗೆಲುವಿನತ್ತ ಮತ್ತು ಗೆದ್ದವರು ತಮ್ಮ ಉನ್ನತೀಕರಣದ ಕಡೆಗೆ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಹೊಂದಾಣಿಕೆ, ನೆಮ್ಮದಿ ಮತ್ತು ಜನರೊಂದಿಗೆ ಬೆರೆಯುವ ಗುಣವನ್ನು ತುಂಬುತ್ತದೆ. ಮುಂದಿನ ವರ್ಷ ಕಲೋತ್ಸವ 25ರ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಪೂರ್ಣ ಸಹಕಾರವಿರುತ್ತದೆ ಎಂದು ಕನ್ನಿಕಾ ಪರಮೇಶ್ವರಿ ತಿಳಿಸಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಕಲಾ ಉತ್ಸವ ನಡೆಯುವುದರಿಂದ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳು ಅನಾವರಣಗೊಳ್ಳುತ್ತವೆ. ವಿದ್ಯಾರ್ಥಿಗಳು ಎಲ್ಲಾ ಕಾರ್ಯಕ್ರಮಗಳಲ್ಲಿ ತಪ್ಪದೆ ಪಾಲ್ಗೊಳ್ಳಬೇಕು.ಗೆಲುವು-ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಸ್ವರ್ಧೆಗಳಲ್ಲಿ ಭಾಗವಹಿಸಿ ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಮುಖ್ಯಅತಿಥಿಯಾಗಿದ್ದ ಸರಿಗಮಪ ಖ್ಯಾತಿಯ ಹಿನ್ನೆಲೆ ಗಾಯಕ ವಿದ್ವಾನ್ ಯಶವಂತ್ ಎಂ.ಜಿ ಮಾತನಾಡಿ, ಶೈಕ್ಷಣಿಕ ಪ್ರಗತಿಯಜೊತೆಗೆ ಸಾಂಸ್ಕøತಿಕಕಲಾರುಚಿಯೂಇರಬೇಕು. ವಿದ್ಯಾರ್ಥಿಗಳು ವಿವಿಧಕಲೆಯಲ್ಲಿತಮ್ಮ ಪ್ರತಿಭೆ ಪ್ರದರ್ಶನ ಮಾಡಿಕೊಳ್ಳಲು ಕಾಲೇಜಿನಲ್ಲಿ ಸೂಕ್ತ ವೇದಿಕೆಗಳಿರುತ್ತವೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಿ ಎಂದು ಪ್ರೋತ್ಸಾಹಿಸಿದರು.

ಯುವ ಸಮುದಾಯದ ಕುರಿತಂತೆ ಇತ್ತೀಚಿನ ಕೆಲ ಕಹಿಘಟನೆಗಳ ಕುರಿತು ಮಾತನಾಡಿದ ಅವರು, ಮನಸ್ಸಿನ ವಿಚಲತೆ ಕೂಡ ಪ್ರಮುಖ ಕಾರಣವಾಗಿದ್ದು, ಸಂಗೀತ ಸಾಹಿತ್ಯದ ಹವ್ಯಾಸಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಾವು ಅದೆಲ್ಲವನ್ನೂ ನಿಯಂತ್ರಿಸಬಹುದು ಎಂದು ಅವರು ಹೇಳಿದರು.

ಸಾಹೇ ವಿವಿಯ ಉಪಕುಲಪತಿಡಾ.ಕೆ.ಬಿ.ಲಿಂಗೇಗೌಡ ಮತನಾಡಿ,ಒಗ್ಗಟ್ಟಿನಲ್ಲಿ ಬಲವಿದೆ. ಒಟ್ಟಾಗಿಇದ್ದಾಗ ಮಾತ್ರ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸಾಧ್ಯ.ವಿದ್ಯಾರ್ಥಿಗಳು ಯಾವುದೇ ದುಷ್ಚಟಗಳಿಗೆ ಬಲಿಯಾಗದೆ ಸಾಧನೆಯಕಡೆಗೆ ಮನಸ್ಸುಮಾಡಬೇಕು. ವಿದ್ಯಾರ್ಥಿಗಳಿಗೆಓದು ಎಷ್ಟು ಮುಖ್ಯವಾಗಿರುತ್ತದೆಯೋಅದೇರೀತಿ ಸಾಂಸ್ಕøತಿಯ ಕಾರ್ಯಕ್ರಮಗಳು ಕೂಡ ಬಹು ಮುಖ್ಯವಾಗಿರುತ್ತವೆಎಂದುಅಭಿಪ್ರಾಯ ಪಟ್ಟರು.

ಇತ್ತಿಚೆಗೆ ಸಾಹೇ ವಿವಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ನೆಟ್ ಬಾಲ್ ಚಾಂಪಿಯನ್ಷಿಪ್ ಅಮೋಘ ಯಶಸ್ಸು ಕಂಡಿತ್ತು, ಅದೇ ರೀತಿ ಮುಂದಿನ ವರ್ಷ ಕಲೋತ್ಸವದ 25ನೇ ವರ್ಷದ ಸಂಭ್ರಮಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಕರೆಸಿ ಇನ್ನಷ್ಟು ಅದ್ದೂರಿಯಾಗಿ ಆಯೋಜಿಸುವ ಯೋಚನೆ ಇದೆ ಎಂದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ಕಲೋತ್ಸವ 2024ರ ಅಧ್ಯಕ್ಷರಾದ ಡಾ. ಎಸ್ ರೇಣುಕಾಲತಾ ಅವರು ಕಲೋತ್ಸವ ವರದಿ ಮಂಡಿಸಿ, ಕಲೋತ್ಸವದಲ್ಲಿ 36 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಹೇ ರಿಜಿಸ್ಟ್ರಾರ್ ಡಾ.ಎಂ ಝಡ್ ಕುರಿಯನ್, ಸಾಹೇ ಕುಲಾಧಿಪತಿಗಳ ಸಲಹೆಗಾರರಾದ ಡಾ. ವಿವೇಕ ವೀರಯ್ಯ, ಎಸ್ ಎಸ್ ಐ ಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ಎಸ್ ರವಿಪ್ರಕಾಶ್ ಸೇರಿದಂತೆ ಎಲ್ಲ ವಿಭಾಗದ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ರಿಜಿಸ್ಟ್ರಾರ್‍ಡಾ.ಎಂ.ಜೆಡ್.ಕುರಿಯನ್, ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್,ಡೀನ್‍ಮತ್ತುಕಲೋತ್ಸವ ಸಮಿತಿಅಧ್ಯಕ್ಷಡಾ.ರೇಣುಕಾಲತಾ, ಕಲೋತ್ಸವಆಚರಣಾ ಸಮಿತಿಯ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳು, ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *