ಬುದ್ಧ ಬರಲಿ ನಮ್ಮೂರಿಗೆ

ಬುದ್ಧನ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ ಎಂದು ನಾನು ತುಮಕೂರಿಗೆ ಓದಲು ಬಂದ ಮೇಲೆಯೇ ತಿಳಿದದ್ದು, ಮೊದಲ ಬಾರಿಗೆ 1989ರಲ್ಲಿ ಕವಿ ಕೆ.ಬಿ.ಸಿದ್ದಯ್ಯನವರ ಬಕಾಲ ಕಾಂಪೌಂಡ್‍ನಲ್ಲಿ ಬುದ್ಧ ಬರಲಿ ನಮ್ಮೂರಿಗೆ ಎಂಬ ಸಣ್ಣ ಹೊತ್ತಿಗೆಯನ್ನು ಬುದ್ಧಗುರು ಕೆ.ಎಂ.ಶಂಕರಪ್ಪ ಬರೆದಿರುವುದನ್ನು ಬಿಡುಗಡೆ ಮಾಡಿ, ಬುದ್ಧನ ಕೆಲ ಪ್ರವಚನಗಳನ್ನು ಅಲ್ಲಿರುವವರಿಗೆ ಸರಳ ರೀತಿಯಲ್ಲಿ ಹೇಳಿದರು.

ಅದರಲ್ಲಿ ಒಂದು ಹೀಗೆದೆ ವೈಶಾಲಿಗೆ ಸಮೀಪದ ಹಳ್ಳಿಯೊಂದರಲ್ಲಿ ತಂಗಿದ್ದ ಬುದ್ಧನ ಆಶೀರ್ವಚನ ಕೇಳಲು ಬಂದಿದ್ದ ವ್ಯಾಪಾರಿಯೊಬ್ಬ ಬುದ್ಧನಿಗೆ ನೀವು ದಿನಾ ಪ್ರವಚನ ನೀಡುತ್ತೀರಲ್ಲ, ಅದರಲ್ಲಿ ಎಷ್ಟು ಜನ ನಿಮ್ಮ ಪ್ರವಚನವನ್ನು ಚಾಚು ತಪ್ಪದೇ ಪಾಲಿಸುತ್ತಾರೆ ಎಂದು ಕೇಳುತ್ತಾನೆ.

ಆಗ ಬುದ್ಧನು ನಸು ನಕ್ಕು ನೀನೊಬ್ಬ ವ್ಯಾಪಾರಿಯಂತೆ ಕಾಣುತ್ತೀಯ, ನಿನ್ನನ್ನು ವೈಶಾಲಿಗೆ ದಾರಿ ಯಾವುದು ಎಂದು ಸಾವಿರಾರು ಜನ ಕೇಳಿರಬಹುದು, ಹಾಗೆ ಕೇಳಿದ ಎಷ್ಟು ಜನ ವೈಶಾಲಿ ಪಟ್ಟಣಕ್ಕೆ ಹೋಗಿದ್ದಾರೆ ಎಂದು ಲೆಕ್ಕವಿಟ್ಟಿರುವೆಯಾ ಎಂದು ಬುದ್ಧ ಕೇಳೀದಾಗ, ಇಲ್ಲಾ ನಾನು ಏಕೆ ಮತ್ತೆ ಅವರನ್ನು ಹುಡುಕಿ ವೈಶಾಲಿಗೆ ಹೋಗಿದ್ದೀರಾ, ಇಲ್ಲವೆ ಎಂದು ಕೇಳಲಿ ಎಂದು ಹೇಳುತ್ತಾನೆ.

ಆಗ ಬುದ್ಧ ಪ್ರವಚನ ನೀಡುವುದು ನನ್ನ ದಿನ ನಿತ್ಯದ ಕೆಲಸ, ಅದನ್ನು ಯಾರು ಕೇಳಿದರು, ಅನುಸರಿಸಿದರು ಎಂದು ತಿಳಿದುಕೊಳ್ಳುವುದು ನನ್ನ ಧರ್ಮವಲ್ಲ, ದಾರಿ ತೋರಿಸಬಹುದೇ ವಿನಃ ಕೈ ಹಿಡಿದು ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಏಕೆಂದರೆ ಪ್ರತಿಯೊಬ್ಬರಿಗೂ ಅವರದೇ ಆದ ಕೆಲಸ, ಕಾರ್ಯ, ದುಃಖ, ಸಂತೋಷವಿರುತ್ತವೆ ಅವುಗಳನ್ನೆಲ್ಲಾ ಆತ ಒಂದು ತಹಬದಿಗೆ ತರಲು ಹೆಣಗುತ್ತಿರುವಾಗ ವೈಶಾಲಿಗೆ ಯಾರು ಹೋದರು, ಪ್ರವಚನ ಎಷ್ಟು ಜನ ಕೇಳಿ ಅನುಸರಿಸಿದರು ಎಂಬುದಕ್ಕಿಂತ ದುಃಖ ಕಡಿಮೆಯಾಯಿತೆ ಎಂಬುದಷ್ಟೇ ನಮ್ಮ ಚಿತ್ತ ಎಂದು ನಗುತ್ತಾರೆ.

ವ್ಯಾಪಾರಿಯು ಬುದ್ಧನಿಗ ನಮಸ್ಕರಿಸಿ ಇಂದು ನನಗೆ ಬೆಳಕು ಕಾಣಿಸಿತು ಎಂದು ಹೊರಡುತ್ತಾನೆ.

ಇದು ನಮ್ಮ ಬುದ್ಧಗುರು ಕೆ.ಎಂ.ಶಂಕರಪ್ಪನವರು ಹೇಳಿದ ನಮ್ಮ ದುಃಖವನ್ನು ಗುಲಗಂಜಿಯಷ್ಟಾದರೂ ಕಡಿಮೆ ಮಾಡಿಕೊಳ್ಳುವ ಕತೆ ಇದ್ದಾಗಿದ್ದರೂ ಆಗಿರಬಹುದು.

ಮನುಷ್ಯನ ದುಃಖ, ತಾಕಲಾಟ, ಹುಟ್ಟು, ಸಾವುಗಳ ಬಗ್ಗೆ ಈ ಜಗತ್ತಿನಲ್ಲಿ ಬುದ್ಧ ಮಾತ್ರ ಮಾತನಾಡಿದ್ದಾನೆ, ಎಲ್ಲಿಯವರೆಗೆ ಮನುಷ್ಯನಿಗೆ ಲೋಭ ಮತ್ತು ಲಾಭದ ಬಗ್ಗೆ ಯೋಚಿಸುತ್ತಿರುತ್ತಾನೋ ಅಲ್ಲಿಯವರೆಗೆ ಆತನಿಗೆ ದುಃಖ ಇದ್ದೇ ಇರುತ್ತದೆ ಎಂದು ಬುದ್ಧ ಹೇಳಿದ್ದಾನೆ.

ಬುದ್ಧಗುರು ಕೆ.ಎಂ.ಶಂಕರಪ್ಪ ಬರೆದ ಬುದ್ಧ ಬರಲಿ ನಮ್ಮೂರಿಗೆ ಪುಸ್ತಕವನ್ನು ಮತ್ತೊಮ್ಮೆ ತುಮಕೂರಿನ ಬೋಧಿ ಮಂಡಲ, ಹಳೇಹಟ್ಟಿ ಸಖೀಗೀತ ಪ್ರಕಾಶನದ ಸಹಯೋಗದಲ್ಲಿ ಮೇ 23ರಂದು ಸಂಜೆ 6ಗಂಟೆಗೆ ತುಮಕೂರಿನ ವಿಜಯನಗರದ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಬಿಡುಗಡೆ ಮಾಡಲಿದ್ದಾರೆ.

ಕೃತಿ ಕುರಿತು ಡಾ.ಜಿ.ವಿ.ಆನಂದಮೂರ್ತಿ ಮಾತನಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೆ.ಎಂ.ಶಂಕರಪ್ಪನವರ ಮಗಳು ಕೆ.ಎಸ್.ಸ್ನೇಹಲತಾ, ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾಬಸವರಾಜು, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ||ಹೆಚ್.ವಿ.ರಂಗಸ್ವಾಮಿ ಅವರುಗಳು ಭಾಗವಹಿಸಲಿದ್ದು, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರು ಹಾಗೂ ಚಿಂತಕರಾದ ಪ್ರೊ.ಕೆ.ದೊರೈರಾಜ್ ಅವರು ವಹಿಸಲಿದ್ದಾರೆ.

Leave a Reply

Your email address will not be published. Required fields are marked *