ಶಿಕ್ಷಕರು ಆಮಿಷಗಳಿಗೆ ಒಳಗಾಗಿ ಪಿಂಚಿಣಿ ಬುನಾದಿ ಕಳೆದುಕೊಳ್ಳಬೇಡಿ-ಲೋಕೇಶ್ ತಾಳಿಕಟ್ಟೆ

ತುಮಕೂರು : ಆಗ್ನೇಯ ಶಿಕ್ಷಕರ ಎಲ್ಲಾ ನನ್ನ ಶಿಕ್ಷಕ ಬಂಧುಗಳಿಗೆ ನಮಸ್ಕಾರಗಳು, ಜೂನ್ 3ನೇ ತಾರೀಖು ನಡೆಯುವ ಆಗ್ನೇಯ ಶಿಕ್ಷಕರ ಚುನಾವಣೆಯಲ್ಲಿ ಈಗಿರುವ ಆಡಳಿತ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ ಮತ್ತು ವಿರೋಧ ಪಕ್ಷದ ಬಿಜೆಪಿ ಅಭ್ಯರ್ಥಿ ಇಬ್ಬರೂ ಕೂಡ ಶಿಕ್ಷಕರುಗಳಿಗೆ ಆಸೆ, ಆಮಿಷಗಳನ್ನು ಒಡ್ಡುತ್ತಿದ್ದು ನಿಮ್ಮ ಪಿಂಚಣಿ ಬುನಾದಿಯನ್ನು ಕಳೆದುಕೊಳ್ಳ ಬೇಡಿ ಎಂದು ಆಗ್ನೇಯ ಶಿಕ್ಷಕರ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ.

ಆಡಳಿತ ಪಕ್ಷದಲ್ಲಿರುವವರು ನಾವು ಪಿಂಚಿಣಿ ಮಾಡಿ ಕೊಡುತ್ತೇವೆ, ಎಲ್‍ಪಿಎಸ್‍ನ್ನು ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ, ಟೈಮ್ ಬಾಂಡ್ ಬಗ್ಗೆ ಮಾತನಾಡುತ್ತಿಲ್ಲ, ಕಾಲ್ಪನಿಕ ವೇತನದ ಬಗ್ಗೆ ಮಾತನಾಡುತ್ತಿಲ್ಲ, ಮಿನಿಮಮ್ ಸ್ಟ್ರೆಂತ್ ಬಗ್ಗೆ ಮಾತನಾಡುತ್ತಿಲ್ಲ,ದಾಖಲಾತಿಯ ಬಗ್ಗೆ ಮಾತನಾಡುತ್ತಿಲ್ಲ, ಪಿಂಚಣಿ ಒಂದನ್ನು ಇಟ್ಟುಕೊಂಡು ಮಾತ್ರ ಮಾತನಾಡುತ್ತಿದ್ದಾರೆ.

ಇದು ಸುಳ್ಳು 20ವರ್ಷದಿಂದ ಪಿಂಚಣಿ ಕೊಡುತ್ತೇವೆ ಅಂತ ದೊಡ್ಡ ಸುಳ್ಳನ್ನು ಹೇಳುತ್ತಾ ಮತಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ, ಅದೇ ರೀತಿ ವೈ.ಎ.ನಾರಾಯಣಸ್ವಾಮಿಯವರು ಶಿಕ್ಷಕರ ಹಿತವನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಈ ಪಿಂಚಣಿಯ ಅವ್ಯವಸ್ಥೆಗೆ ನಾರಾಯಣಸ್ವಾಮಿಯವರೇ ಕಾರಣ, ಈಗ ಹೇಳುತ್ತಿದ್ದಾರೆ ಈ ಬಾರಿ ಆರಿಸಿ ಕಳಿಸಿದರೆ ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುತ್ತೇವೆ ಅಂತ ಸುಳ್ಳು ಹೇಳುತ್ತಿದ್ದಾರೆ.

3ಬಾರಿ ಆಯ್ಕೆಯಾಗಿರುವ ನಾರಾಯಣಸ್ವಾಮಿಯವರು ಶಿಕ್ಷಕರ ಯಾವ ಸಮಸ್ಯೆಯನ್ನೂ ಬಗೆ ಹರಿಸಿಲ್ಲ, ಪ್ರಜ್ಞಾವಂತ ಶಿಕ್ಷಕರಾಗಿರುವ ನೀವು, ಇಡೀ ವ್ಯವಸ್ಥೆಗೆ ಶಿಕ್ಷಣ ನೀಡುವ ಶಿಕ್ಷಕರು ಈ ಬಾರಿ ನಿಮ್ಮ ಮತ ನೀಡುವಾಗ ಎಚ್ಚರವಿರಲಿ, ಶಿಕ್ಷಕರಿಗೆ ತೋರಿಸುತ್ತಿರುವ ಆಮಿಷಗಳು ಶಿಕ್ಷಕರ ಬುನಾದಿಯನ್ನೇ ಅಲ್ಲಾಡಿಸುವ ಸಾಧ್ಯತೆಗಳಿವೆ, ಹಾಗಾಗಿ ರುಪ್ಸ ಕರ್ನಾಟಕ ಕಳೆದ 3 ವರ್ಷಗಳಲ್ಲಿ ಯಾವರೀತಿ ಯಶಸ್ಸು ಪಡೆದಿದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ, ಈ ಬಾರಿ ರುಪ್ಸ ಕರ್ನಾಟಕವನ್ನು ಮತ್ತು ಲೋಕೇಶ್ ತಾಳಿಕಟ್ಟೆಯವರ ಕ್ರಮ ಸಂಖ್ಯೆ 11ಕ್ಕೆ ಮೊದಲ ಪ್ರಾಸಶತ್ಯ ಮತ ನೀಡುವ ಮೂಲಕ ಆಯ್ಕೆ ಮಾಡುವಂತೆ ಆಗ್ನೇಯ ಶಿಕ್ಷಕರ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *