ಡಿ.ಟಿ,ಶ್ರಿನಿವಾಸ್ ಪರ ಮುರಳೀಧರ ಹಾಲಪ್ಪ ಮತಯಾಚನೆ

ತುಮಕೂರು: ತುಮಕೂರು ಜಿಲ್ಲೆಯನ್ನು ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಬಿಷಪ್ ಸಾಜೆರ್ಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರನ್ನು ಭೇಟಿ ಮಾಡಿ ಮತಯಾಚನೆ ಮಾಡಿದರು.

ಶಿಕ್ಷಕರಾಗಿ, ಸ್ವತಹಃ ಶಿಕ್ಷಣ ಸಂಸ್ಥೆ ನಡೆಸುತ್ತಾ, ಶಿಕ್ಷಕರ ಎಲ್ಲಾ ಸಮಸ್ಯೆಗಳ ಅರಿವು ಇರುವ ಮತ್ತು ಅವುಗಳಿಗೆ ತನ್ನದೇ ರೀತಿಯಲ್ಲಿಯೇ ಪರಿಹಾರ ಒದಗಿಸಬಲ್ಲ ಚಾಕುಚಕ್ಯತೆ ಮತ್ತು ಚಾಣಾಕ್ಷತನ ಡಿ.ಟಿ.ಶ್ರೀನಿವಾಸ್ ಅವರಿಗೆ ಇದೆ. ಈಗಾಗಲೇ ಶಿಕ್ಷಕ ಹಲವಾರು ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ, ಶಿಕ್ಷಣ ಸಚಿವರೊಂದಿಗೂ ಮಾತನಾಡಿದ್ದಾರೆ. ಅಂತಹವರು ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗುವುದರಿಂದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ಹಾಗಾಗಿ ಡಿ.ಟಿ.ಶ್ರೀನಿವಾಸ್ ಅವರನ್ನು ಶಿಕ್ಷಕರು ಆಯ್ಕೆ ಮಾಡುವಂತೆ, ಮುರುಳೀಧರ ಹಾಲಪ್ಪ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೆವರೆಂಡ್ ಮನೋಜ್ ಕುಮಾರ್, ಪ್ರಾಂಶುಪಾಲರಾದ ಪ್ಲಾರೆನ್ಸ್, ಮುಖಂಡರಾದ ಸಂಜೀವ್, ಸುನೀಲ್, ನಾಗಲಕ್ಷ್ಮಿ, ಶಿವಾಜಿ, ನಟರಾಜು ಹಾಗೂ ಹಲವರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *