ತುಮಕೂರು ಲೋಕಸಭಾ ಸದಸ್ಯ ವಿ ಸೋಮಣ್ಣ ಅವರು ಇಂದು ರಾತ್ರಿ ನಡೆಯುವ ಪ್ರಧಾನ ಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿ ಮಂತ್ರಿಯಾಗುವ ಯೋಗ ಲಭಿಸಿದೆ ಏನ್ನಲಾಗುತ್ತಿದೆ.
ವಿ ಸೋಮಣ್ಣನವರು ಮಾಜಿ ಲೋಕಸಭಾ ಸದಸ್ಯ ಎಸ್ ಪಿ ಮುದ್ದಮ್ಮೇಗೌಡ ಅವರನ್ನು 1,75,000 ಮತಗಳ ಅಂತರದಿಂದ ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋಮಣ್ಣನವರು ಗೋವಿಂದರಾಜ ನಗರ ಬಿಟ್ಟು ವರಣ ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಿಂತು ಸೋತಿದ್ದರು.
ಸೋತ ನಂತರ ವಿ. ಸೋಮಣ್ಣನವರು ಪಕ್ಷ ನನಗೆ ದ್ರೋಹ ಬಗೆದಿದೆ ಎಂದು ಪಕ್ಷ ಬಿಡಲು ಮುಂದಾಗಿದ್ದರು, ಆದರೆ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರು ಸೋಮಣ್ಣನವರಿಗೆ ಒಳ್ಳೆಯ ಸ್ಥಾನಮಾನ ನೀಡುವುದಾಗಿ ವಾಗ್ದಾನ ಮಾಡಿದ್ದರು.
ತುಮಕೂರು ಲೋಕಸಭೆ ಟಿಕೆಟ್ ನೀಡಿ ಗೆದ್ದು ಬರುವಂತೆ ಅವರಿಗೆ ತಿಳಿಸಿದರು, ಇದೀಗ ವಿ. ಸೋಮಣ್ಣನವರು ಅಚ್ಚರಿಯ ಫಲಿತಾಂಶವನ್ನು ಪಡೆದು ಸುಮಾರು 1,75,000 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿರುವುದರಿಂದ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಹಿಂದಿಕ್ಕಿ ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕರಿಸುತ್ತಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಸೋಮಣ್ಣನವರಿಗೆ ದೂರವಾಣಿ ಕರೆ ಬಂದಿದ್ದು ಪ್ರಧಾನ ಮಂತ್ರಿ ಪ್ರಮಾಣವಚನ ಸಮಾರಂಭದಲ್ಲಿ ಉಪಸ್ಥಿತಿರುವಂತೆ ಸೂಚಿಸಲಾಗಿದೆ.
ಇದರಿಂದ ವಿ ಸೋಮಣ್ಣನವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ.
ವಿ.ಸೋಮಣ್ಣನವರು ಸಚಿವ ಸಂಪುಟಕ್ಕೆ ಸೇರ್ಪಡೆಯಾದಲ್ಲಿ 25 ವರ್ಷಗಳ ನಂತರ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದ ಸಚಿವ ಸ್ಥಾನ ದೊರೆತಂತಾಗುತ್ತದೆ.