ಕನ್ನಡ ಸಾಹಿತ್ಯ ಸಂಪನ್ನಗೊಳಿಸಿದ ತಾಂತ್ರಿಕ ಪದವಿದಾರರು

ತುಮಕೂರು: ತಾಂತ್ರಿಕ ಪದವಿ ಪಡೆದಂತ ಅಥವಾ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯವನ್ನು ಸಂಪನ್ನಗೊಳಿಸುತ್ತಿದ್ದಾರೆ ಎಂದು ಕಥೆಗಾರರು ಕಾದಂಬರಿಕಾರರು ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಅಮರೇಶ್ ನುಗಡೋಣಿ ಅವರು ತಿಳಿಸಿದರು.

ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಕನ್ನಡ ವಿಭಾಗ ಹಾಗೂ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಗುರುವಾರ (ಇಂದು)ಏರ್ಪಡಿಸಲಾಗಿದ್ದ ಡಾ. ಎಚ್ .ಎಮ್ ಗಂಗಾಧರಯ್ಯ ಉಪನ್ಯಾಸ ಮಾಲೆ-17ರಲ್ಲಿ “ಕಥಾ ರಚನೆ- ಒಂದು ಮಾದರಿ ಚಿಂತನೆ’ ವಿಷಯ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.

ಮೊದಲಿನ ದಿನಗಳಲ್ಲಿ ಹಿರಿಯರು ಕಥೆ ಹೇಳುವುದು ರೂಢಿ. ಇದರಿಂದ ಜ್ಞಾನ ,ಅರಿವು, ಒಳ್ಳೆಯ ಸಂದೇಶ ಜೊತೆಗೆ ದಯೆ, ಸಹಾಯ ,ಕರುಣೆಯಂತಹ ಹಲವಾರು ತತ್ವಗಳು ಮಕ್ಕಳ ಬೆಳವಣಿಗೆ ಪೂರವಾಗಿದ್ದವು. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದಕ್ಕೂ ಸಹ ಸಾಹಿತ್ಯ ಮುಖ್ಯ ಪಾತ್ರ ವಹಿಸುತ್ತಿದೆ ಎಂದು ಪ್ರೊ. ಅಮರೇಶ್ ನುಗಡೋಣಿ ಅವರು ಅಭಿಪ್ರಾಯಪಟ್ಟರು.

ಉದಾರೀಕರಣದ ನಂತರ ಕಾಲಘಟ್ಟದಲ್ಲಿ ಕನ್ನಡ ತಾಂತ್ರಿಕ ಬರವಣಿಗೆ ಉತ್ತುಂಗಕ್ಕೆ ತಲುಪಿದೆ. ಸಾಹಿತ್ಯ ಅಧ್ಯಯನ ಮಾಡದ ಇರುವ ಇತರೆ ವಿದ್ಯಾರ್ಥಿಗಳು ಬರವಣಿಗೆ ಮುಂದಾಗುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿರುವುದನ್ನು ನಾವಿಂದು ಕಾಣಬಹುದಾಗಿದೆ. ಸಾಹಿತ್ಯ ರಚನೆಗೆ ಪರಿಕಲ್ಪನೆ ಮುಖ್ಯ. ಅದನ್ನು ಸೃಜನಶೀಲತೆಯಿಂದ ಬಳಸಿ ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನು ಬಳಸಿಕೊಂಡು ಮಾತೃಭಾμÉಯಲ್ಲಿ ಸಾಹಿತ್ಯ ಸೃಷ್ಟಿಸಬಹುದು ಎಂದು ಅವರು ಹೇಳಿದರು.

ತಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಕಲ್ಪನೆಯ ಮೂಲಕ ವಾಸ್ತವಿಕತೆಗೆ ಹತ್ತಿರವಾಗುವಂತ ಕಥೆ- ಸಾಹಿತ್ಯ ರಚನೆ ಮಾಡುವ ಪರಿಯನ್ನು ಉದಾಹರಣೆ ಜೊತೆಗೆ ವಿದ್ಯಾರ್ಥಿಗಳಿಗೆ ತಿಳಿಸಿದ ಕಥೆಗಾರ ಪ್ರೊ. ಅಮರೇಶ್ ನುಗಡೋಣಿ ಅವರು ಕಥೆ ರಂಜನೆಯಷ್ಟೆ ಆಗಬಾರದು. ಅದರಲ್ಲಿ ತಿಳುವಳಿಕೆ, ಅರಿವು, ಜಾಗೃತಿ, ಸಂದೇಶ ಇರಬೇಕು ಎಂದು ಕತೆ ಬರವಣಿಗಾರರಿಗೆ ಸೂಚಿಸಿದರು.

ಪ್ರಾಂಶುಪಾಲರದ ಡಾ. ಹೇಮಲತ ಪಿ ಅವರು, ಪುಸ್ತಕಗಳನ್ನು ನಾವು ಕೇವಲ ಪರೀಕ್ಷೆ ಹಾಗೂ ಅಂಕಗಳ ದೃಷ್ಟಿಕೋನದಿಂದ ಓದದೆ, ಕಥೆಯ ರಚನೆಯನ್ನು ಅರ್ಥಮಾಡಿಕೊಂಡು ಅದನ್ನು ಆಧುನಿಕರಣ ಮಾಡಿ ಹೊಸತನದೊಂದಿಗೆ ಹೇಳಬಹುದಾದ ಸಾದ್ಯತೆಗಳಿವೆ. ನಮ್ಮಲ್ಲಿ ಸೃಜನಶೀಲತೆಯನ್ನು ಬೆಳೆಸಿಕೊಂಡು ಕಥೆ ರಚನೆಯನ್ನು ಪ್ರಾರಂಭಿಸಬೇಕು. ನಮ್ಮನ್ನು ನಾವು ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯದರ್ಶಿಗಳು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ರಮೇಶ್ ಎಂ.ವಿ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್, ಐಕ್ಯೂಎಸಿ ಸಂಯೋಜಕರಾದ ಸಯ್ಯದ್ ಬಾಬು ಎಚ್.ಬಿ, ವೇದಿಕೆಯಲ್ಲಿದ್ದರು. ಕನ್ನಡ ಉಪನ್ಯಾಸಕರಾದ ಆಶಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಮೃದುಲಾ ಪ್ರಾರ್ಥನೆ ನೇರವೇರಿಸಿದರು.

Leave a Reply

Your email address will not be published. Required fields are marked *