ತುಮಕೂರು: ಒಳ ಮೀಸಲಾತಿ ಹೋರಾಟಗಾರ ಸಿ.ಎಸ್.ಪಾರ್ಥಸಾರಥಿ ರವರ ನುಡಿನಮನ ಕಾರ್ಯಕ್ರಮವನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಟೌನ್ಹಾಲ್ನಲ್ಲಿರುವ ಐಎಂಎ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ನುಡಿನಮನದ ಅಧ್ಯಕ್ಷತೆಯನ್ನು ಪ್ರೊ.ಕೆ.ದೊರೈರಾಜ್ ವಹಿಸಿಕೊಳ್ಳಲಿದ್ದು. ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ್ ಭೀಮಪ್ಪ, ಬಾಬುರಾವ್ ಮುಡಬಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಗೋಖಲೆ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಅಂತರಾಷ್ಟ್ರೀಯ ಚಿತ್ರ ಕಲಾವಿದ ಸಿ.ಚಂದ್ರಶೇಖರ್, ಕುವೆಂಪು ವಿವಿ ಪ್ರೊ.ಕೆಳಗಿನಮನಿ, ಸಾಹಿತಿ ಪ್ರೊ.ಹೆಚ್.ಗೋವಿಂದಯ್ಯ, ಜಿ.ಪಂ.ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿ.ಪಂ.ಮಾಜಿ ಸದಸ್ಯ ಕೆಂಚಮಾರಯ್ಯ, ಡಾ.ಬಸವರಾಜು, ದಲಿತ ಮುಖಂಡ ಕುಂದೂರು ತಿಮ್ಮಯ್ಯ, ಹೈಕೋರ್ಟ್ ವಕೀಲ ಹೆಚ್.ವಿ.ಮಂಜುನಾಥ್ ನುಡಿನಮನವನ್ನು ಸಲ್ಲಿಸಲಿದ್ದಾರೆ.