ಯೋಗಕ್ಕೆ ಯಾವುದೇ ಧರ್ಮ, ಜಾತಿ ಲಿಂಗದ ತಾರತಮ್ಯವಿಲ್ಲ

ತುಮಕೂರು: ಯೋಗವು ಭಾರತೀಯರ ಆತ್ಮವಾಗಿದೆ. ಯೋಗಕ್ಕೆ ಯಾವುದೇ ಧರ್ಮ, ಜಾತಿ ಹಾಗೂ ಲಿಂಗದ ತಾರತಮ್ಯವಿರುವುದಿಲ್ಲ ಎಂದು ಹಿರಿಯ ಯೋಗ ಸಾಧಕ ಜಿ.ವಿ.ವಿ. ಶಾಸ್ತಿç ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ‘21 ದಿನಗಳ ಯೋಗ ಸರ್ಟಿಫಿಕೇಟ್ ಕೋರ್ಸ್ನಲ್ಲಿ ಭಾಗವಹಿಸಿದ್ದ ಯೋಗ ಸಾಧಕರಿಗೆ ಪ್ರಮಾಣ ಪತ್ರ ವಿತರಣಾ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿ, ಪೂಜ್ಯ ಮತ್ತು ಪರಮಾತ್ಮ ಒಂದಕ್ಕೊ0ದು ಪೂರಕವಾಗಿರುವಂಥವು. ಜಗತ್ತಿಗೆ ಯೋಗವನ್ನು ಕೊಟ್ಟ ದೇಶ ನಮ್ಮದು. ಯೋಗವು ಸರ್ವ ರೋಗಗಳಿಗೂ ಮದ್ದಾಗಿದ್ದು ವಿದ್ಯಾರ್ಥಿಗಳು ಯೋಗದಿಂದ ಅದ್ಭುತ ಲಾಭವನ್ನು ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಈ 21 ದಿನಗಳ ಯೋಗ ಕೋರ್ಸ್ನಲ್ಲಿ ಎಲ್ಲಾ ವಯಸ್ಸಿನವರು ಭಾಗವಹಿಸಿದ್ದಾರೆ. ವಿಶ್ವಕ್ಕೆ ವಿದ್ಯೆ ಹಾಗೂ ಜ್ಞಾನವನ್ನು ಕಲ್ಪಿಸುವ ಜವಾಬ್ದಾರಿ ವಿಶ್ವವಿದ್ಯಾನಿಲಯಗಳದ್ದು. ಮಾನಸಿಕವಾಗಿ, ಬೌದ್ಧಿಕವಾಗಿ ಚೈತನ್ಯದಿಂದ ಇರಲು ಯೋಗ ಸಹಕಾರಿಯಾಗಿದೆ. ಸಂಸ್ಕಾರವ0ತರು ಸಮಾಜವನ್ನು ಬದಲಿಸಬಲ್ಲರು. ಮುಂದಿನ ದಿನಗಳಲ್ಲಿ ಯೋಗಕ್ಕೆ ಸಂಬ0ಧಿಸಿದ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ವಿವಿಯ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಯೋಗಾಭ್ಯಾಸದಿಂದ ನಮ್ಮಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಯೋಗವು ಪರಮಾತ್ಮನಿಗೆ ಸಮ. ಯೋಗಭ್ಯಾಸ ಇಲ್ಲಿಗೆ ನಿಲ್ಲದೆ ಮುನ್ನಡೆಯಲಿ ಎಂದು ಹೇಳಿದರು.

ಯೋಗ ಗುರು ಡಾ. ನಾಗರಾಜರಾವ್ ಮಾತನಾಡಿ, ಯೋಗದ ಯಶಸ್ಸಿನ ರಹಸ್ಯ ಇರುವುದು ಸತತ ಅಭ್ಯಾಸದಲ್ಲಿ. ಯಶಸ್ಸು ಪಡೆಯಲು ಯೋಗವು ಉತ್ತಮವಾದ ದಾರಿಯಾಗಿದೆ. ಕುಲಪತಿಗಳ ದೃಢ ನಿರ್ಧಾರದಿಂದ ನಮ್ಮ ಕೋರ್ಸ್ ಯಶಸ್ವಿಯಾಗಿದೆ ಎಂದು ಹೇಳಿದರು.

ಜೂನ್ 21ರಿಂದ ಪ್ರತಿ ದಿನ ಬೆಳಗ್ಗೆ 6 ಗಂಟೆಯಿAದ 7.30ರ ವರೆಗೂ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಮೂರು ವಾರಗಳ (36 ಘಂಟೆಗಳು) ಅವಧಿಯ ಯೋಗ ಸರ್ಟಿಫಿಕೇಟ್ ಕೋರ್ಸ್ನಲ್ಲಿ ಭಾಗವಹಿಸಿ, ಯೋಗಾಭ್ಯಾಸದ ಪರೀಕ್ಷೆಯಲ್ಲಿ ಉತ್ತೀರ್ಣರಾದ 61 ಮಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ತುಮಕೂರು ವಿವಿಯ ಯೋಗ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಯೋಜಕ ಡಾ. ಎ. ಎಂ. ಮಂಜುನಾಥ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *