ಅಗಲಿದ ವಾರ್ತಾಧಿಕಾರಿಗೆ ಪತ್ರಕರ್ತರ ಸಂಘದಿ0ದ ಶ್ರದ್ಧಾಂಜಲಿ

ತುಮಕೂರು: ಶುಕ್ರವಾರವಷ್ಟೇ ನಿಧನರಾದ ತುಮಕೂರು ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶ್ರೀಮತಿ ಎಂ.ಆರ್. ಮಮತಾ ರವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೆದುಳು ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀಯುತರು ಶುಕ್ರವಾರ ನಿಧನರಾಗಿದ್ದರು. ಮೃತರ ಗೌರವಾರ್ಥವಾಗಿ ನಗರದ ಪತ್ರಿಕಾಭವನದಲ್ಲಿ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನೆರೆದಿದ್ದ ಪತ್ರಕರ್ತರು ಮಮತಾ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಂತಾಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಾಗಿನಿAದ ಮಮತಾರವರು ಅತ್ಯಂತ ಸ್ನೇಹಪೂರ್ವಕವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರತಿಯೊಬ್ಬರೊಂದಿಗೆ ಪ್ರೀತಿಯಿಂದ ಹಾಗೂ ಆತ್ಮೀಯತೆಯರಾಗಿ ವರ್ತಿಸುತ್ತಾ ತಮ್ಮ ಕೆಲಸ ನಿರ್ವಹಿಸುತ್ತಿದ್ದರು. ಅವರು ಇತ್ತೀಚೆಗೆ ತಮ್ಮ ಅನಾರೋಗ್ಯದ ಬಗ್ಗೆ ಪತ್ರಕರ್ತ ಸ್ನೇಹಿತರೊಂದಿಗೆ ಹಂಚಿಕೊAಡಿದ್ದರು. ಆದರೆ ಇಷ್ಟು ಬೇಗ ಸಾವು ಅವರನ್ನು ಅಪ್ಪಿಕೊಳ್ಳತ್ತದೆ ಎಂಬುದನ್ನು ಊಹಿಸಿರಲಿಲ್ಲ. ಈ ಹಿಂದಿನ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ ಮಂಜುನಾಥ್ ರವರೂ ಸಹ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ವಾರ್ತಾ ಇಲಾಖೆಗೆ ಗ್ರಹಣ ಹಿಡಿದಂತಾಗಿದೆ ಎಂದು ನುಡಿದರು.

ಈ ವೇಳೆ ಸಂತಾಪ ಸೂಚಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಎಸ್.ನಾಗಣ್ಣ ಅವರು ವಾರ್ತಾ ಇಲಾಖೆ ಅಧಿಕಾರಿಗಳು ಜಿಲ್ಲಾ ಡಳಿತ ಮಾಧ್ಯಮ ದ ನಡುವಿನ ಸಂಪರ್ಕ ಕೊಂಡಿ. ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳು ಅತ್ಯಂತ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸಿಬ್ಬಂದಿ ಕೊರತೆ ಯು ಇದಕ್ಕೆ ಕಾರಣ ವಾಗಿದೆ. . ಪರಿಸ್ಥಿತಿ ಯನ್ನು ಅರ್ಥೈಸಿಕೊಂಡು ಮಾಧ್ಯಮ ದವರು ಸಲಹೆ ರೂಪದಲ್ಲಿ ಅಧಿಕಾರಿಗಳೊಡನೆ ಸಂವಹನ ಸಾಧಿಸಬೇಕು ಎಂದು ತಿಳಿಸಿ, ಮಮತಾ ಹಾಗೂ ಮಂಜುನಾಥ್ ಈ ಇಬ್ಬರು ಅಧಿಕಾರಿಗಳ ನಿಧನ ತುಂಬಲಾರದ ನಷ್ಟ ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಮೋಹನ್ ಕುಮಾರ್ ಅವರು ಮಮತಾ ರವರು ಚುರುಕಿನಿಂದ ಕಾರ್ಯನಿರ್ವಹಿಸುತ್ತಿದ್ದರು, ಆದರೆ ಅವರ ಅನಾರೋಗ್ಯ ಅವರನ್ನು ಕರ್ತವ್ಯ ನಿರ್ವಹಿಸಲು ಅನುಮತಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಶ್ರದ್ಧಾಂಜಲಿ ಅರ್ಪಿಸಿದ ಕಲಾಶ್ರೀ ಡಾ.ಲಕ್ಷ್ಮಣ್ ದಾಸ್ ಮೃತರ ಗುಣಗಾನ ಮಾಡಿ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ತಿಳಿಸಿದರು.

ಸಭೆಯಲ್ಲಿ ಗೃಹಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ನಾಗಣ್ಣ ಅವರು ಮಾತನಾಡಿ ಸರ್ಕಾರ ಮತ್ತು ಮಾಧ್ಯಮಗಳ ನಡುವಿನ ಸಂವಹನ ಕಾರರಾಗಿದ್ದ ಮಮತಾ ಅವರ ನಿಧನ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರು ನುಡಿನಮನ ಸಲ್ಲಿಸಿ ಮಾತನಾಡಿ ಜಿಲ್ಲಾಡಳಿತ ದ ಹಲವು ಸಭೆಗಳಲ್ಲಿ ಅವರೊಂದಿಗೆ ಭಾಗಿಯಾಗಿದ್ದೆ. ಸಭೆಗಳಲ್ಲಿ ಮೌನಿಯಾಗಿದ್ದರೂ ಕರಾರುವಕ್ಕಾಗಿ ಸುದ್ದಿ ಗಳನ್ನು ಮಾಧ್ಯಮ ಮಿತ್ರರಿಗೆ ತಲುಪಿಸುತ್ತಿದ್ದರು. ಸಂದಭ9ದಲ್ಲಿ ಒತ್ತಡ ದಲ್ಲಿ ಇರುತ್ತಿದ್ದುದನ್ನು ಗಮನಿಸಿದ್ದೆ. ವಿಧಿಯಾಟಕ್ಕೆ ಬಲಿಯಾಗಿದ್ದು ದುರಂತ ಎಂದು ಸ್ಮರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಂ,ಹರೀಶ್ ಆಚಾರ್ಯ, ನುಡಿನಮನ ಸಲ್ಲಿಸಿದರು. ರಾಷ್ಟ್ರೀಯ ಮಂಡಳಿ ಸದಸ್ಯ ಅನು ಶಾಂತರಾಜು, ನಿರ್ದೇಶಕರುಗಳಾದ ಜಯಣ್ಣ, ಶಂಕರ್, ಚಿಕ್ಕಣ್ಣ, ರೇಣುಕಾ ಪ್ರಸಾದ್ ಕಾಗ್ಗೆರೆ ಸುರೇಶ್, ಮಾಜಿ ನಿರ್ದೇಶಕ ಕೊಂತಿಹಳ್ಳಿ ರಂಗನಾಥ್ , ನರಸಿಂಹ, ಸುರೇಶ್, ವೀರಪ್ಪ, ರವಿ, ಕಸಾಪದ ಚಿಕ್ಕ ಬೆಳ್ಳಾವಿ ಶಿವಕುಮಾರ್, ಕನ್ನಡ ಸಂಸ್ಕೃತಿ ಇಲಾಖೆ ಯ ಸುರೇಶ್ ಸೇರಿದಂತೆ ಹಿರಿಯ, ಯುವ ಪತ್ರಕರ್ತರು ಉಪಸ್ಥಿತರಿದ್ದರು.ಎರಡು ನಿಮಿಷ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.

Leave a Reply

Your email address will not be published. Required fields are marked *