ಹಂದಿಗಳನ್ನು ನಗರದಿಂದ ಹೊರ ಸಾಗಿಸಲು ಸೂಚನೆ

ತುಮಕೂರು : ಮಳೆಗಾಲದಲ್ಲಿ ಡೆಂಗ್ಯೂ, ಕಾಲರಾ, ಮಲೇರಿಯಾ, ಚಿಕನ್‌ಗುನ್ಯಾದಂತಹ ಇತರೆ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳನ್ನು ನಗರ ಪ್ರದೇಶದಿಂದ ಹೊರಸಾಗಿಸಬೇಕೆಂದು ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ ಹಂದಿ ಸಾಕಾಣಿಕೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಬೀಡಾಡಿ ಹಂದಿಗಳು ಸಾರ್ವಜನಿಕವಾಗಿ ರಸ್ತೆ, ಖಾಲಿ ನಿವೇಶನ ಸೇರಿ ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ನಗರದ ಅನೈರ್ಮಲ್ಯಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ 3 ದಿನಗಳ ಒಳಗಾಗಿ ಮಾಲೀಕರು / ಸಾಕಾಣಿಕೆದಾರರು ಬೀಡಾಡಿಯಾಗಿ ಓಡಾಡಿಕೊಂಡಿರುವ ತಮ್ಮ ಹಂದಿಗಳನ್ನು ಹಿಡಿದು ನಗರದ ಹೊರ ಪ್ರದೇಶಕ್ಕೆ ಸಾಗಿಸಬೇಕು. ಇಲ್ಲವಾದಲ್ಲಿ ಕುರಿ/ಕೋಳಿ ಸಾಕಾಣಿಕೆದಾರರು ನಿರ್ಮಿಸಿಕೊಂಡಿರುವ ಮಾದರಿಯಲ್ಲಿ ನಗರದ ಹೊರಗಡೆ ಫಾರ್ಮ್ ಹೌಸ್ ನಿರ್ಮಿಸಿಕೊಂಡು ಹಂದಿಗಳನ್ನು ಸಾಕಾಣಿಕೆ ಮಾಡತಕ್ಕದ್ದು.

ನಿಯಮ ಮೀರಿ ಹಂದಿಗಳು ರಸ್ತೆಗೆ ಬಂದಲ್ಲಿ ಪಾಲಿಕೆ ವತಿಯಿಂದ ಸೂಕ್ತ ಕ್ರಮವಹಿಸಲಾಗುವುದು. ಇದರಿಂದಾಗುವ ಯಾವುದೇ ರೀತಿಯ ಕಷ್ಟ-ನಷ್ಟಗಳಿಗೆ ತುಮಕೂರು ಮಹಾನಗರಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲವೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *