ತುಮಕೂರು : ನಿರ್ದಿಗಂತ ಮತ್ತು ಜಂಗಮ ಸಂಸ್ಥೆಗಳ ವತಿಯಿಂದ ಆಗಸ್ಟ್ 31ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ ಗುಬ್ಬಿ ವೀರಣ ಕಲಾಕ್ಷೇತ್ರದಲ್ಲಿ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಉದ್ಘಾಟಿಸುವರು. ಲೇಖಕಿ ಮಲ್ಲಿಕಾ ಬಸವರಾಜ್ ಅಧ್ಯಕ್ಷತೆ ವಹಿಸುವರು.
ಜನಪರ ಚಿಂತಕ ಕೆ.ದೊರೈರಾಜ್, ಬೂದಾಳ್ ನಟರಾಜ್, ತುಂಬಾಡಿ ರಾಮಣ್ಣ, ಕುಂದೂರು ತಿಮ್ಮಯ್ಯ, ಅಗ್ರಹಾರ ಕೃಷ್ಣಮೂರ್ತಿ, ಎಚ್.ಶಿವಶಂಕರ್, ಪತ್ರಕರ್ತ ಎಸ್.ನಾಗಣ್ಣ, ಉದ್ಯಮಿ ಡಿ.ಟಿ.ವೆಂಕಟೇಶ್, ನಟರಾಜ್ ಹೊನ್ನವಳ್ಳಿ, ಡಾ.ಅರುಂಧತಿ ರಂಗಸ್ವಾಮಿ, ಎಸ್.ಕೃಷ್ಣಪ್ಪ, ಲಕ್ಷ್ಮಣ್ ದಾಸ್, ಉಗಮ ಶ್ರೀನಿವಾಸ್, ಎಚ್.ಮಾರುತಿ ಪ್ರಸಾದ್ ಭಾಗವಹಿಸುವರು.
ಪಠ್ಯ ಆಕರ ಕವಿ ಎನ್.ಕೆ.ಹನುಮಂತಯ್ಯ, ಕೆ.ಚಂದ್ರಶೇಖರ್ ಅವರದ್ದಾಗಿದ್ದು, ಕೆ.ಪಿ.ಲಕ್ಷ್ಮಣ್ ರಚನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ವಿ.ಎಲ್.ನರಸಿಂಹಮೂರ್ತಿ ಡ್ರಮಟರ್ಗ್ ಮಾಡಿದ್ದಾರೆ.
ಪ್ರದರ್ಶನ ಪಠ್ಯ ವಿನ್ಯಾಸ, ನಟನೆಯನ್ನು ಮರಿಯಮ್ಮ ಚೂಡಿ, ಕೆ. ಚಂದ್ರಶೇಖರ್, ಎಚ್.ಕೆ.ಶ್ವೇತಾರಾಣಿ, ಭರತ್ ಡಿಂಗ್ರಿ ಅಭಿನಯಿಸಿದ್ದಾರೆ. ಬೆಳಕು ಮಂಜು ನಾರಾಯಣ್, ಸಚಿನ್ ಅವರದ್ದಾಗಿದೆ.