ತುಮಕೂರು: ತುಮಕೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರನ ಮೇಲೆ ಹಲ್ಲೆ ನಡೆಸಿರುಸಿದ್ದಾರೆಂದು ದೂರು ನೀಡಿ, ಸಿಇಓರವರ ಮೇಲೆ ಕಾನೂನು ಕ್ರಮ ಕೈಗೋಂಡು ರಕ್ಷಣೆ ನೀಡುವಂತೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ರವಿಕುಮಾರ್ ಎ.ಬಿ. ಎಂಬುವವರು ದೂರು ನೀಡಿದ್ದಾರೆ.

2024 ಸೆಪ್ಟಂಬರ್ 12ರಂದು ಜಿ.ಪಂ. ಸಿಇಓ ಪ್ರಭು.ಜಿ.ರವರು ಹಲ್ಲೆ ನಡೆಸಿದ್ದಾರೆಂದು ಜಿಲ್ಲಾ ಪಂಚಾಯಿತಿಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಐ.ಇ.ಸಿ. ಜಿಲ್ಲಾ ಸಮಾಲೋಚಕ ರವಿಕುಮಾರ್ ಎಂ.ಬಿ., ಎಂಬುವರು ತಿಲಕ್ ಪಾರ್ಕ್ ಸಿಪಿಐರವರಿಗೆ ದೂರು ನೀಡಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿಕುಮಾರ್
ತುಮಕೂರಿನ ಜಿಲ್ಲಾ ಪಂಚಾಯಿತಿಯಲ್ಲಿ ಕಳೆದ 13 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿಯಲ್ಲಿ ಜಿಲ್ಲಾ ಐಇಸಿ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿರುತ್ತೇನೆ. 2023ನೇ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಾಗಿನಿAದ ಜಿಲ್ಲಾ ಪಂಚಾಯತಿ ಸಿಇಓರವರು ನನ್ನನ್ನು ವೈಯಕ್ತಿ ದ್ವೇಷದಿಂದ ಪ್ರತಿ ಸಭೆಯಲ್ಲೂ ತೇಜೋವಧೆ ಮಾಡುತ್ತಿದ್ದರು, ಇದರ ಬಗ್ಗ ತಲೆ ಕೆಡಿಸಿಕೊಳ್ಳದೆ ನನ್ನ ಕೆಲಸವನ್ನು ನಾನು ಮಾಡಿಕೊಂಡು ಬರುತ್ತಿದ್ದೆನು, ಈ ಮಧ್ಯೆ ‘ನೈರ್ಮಲ್ಯ ಆರೋಗ್ಯವರ್ಧಕ ಮನಸ್ಸುಗಳ ದಿಕ್ಸೂಚಿ’ ಎಂಬ ಪುಸ್ತಕವನ್ನು ನಾನು ಬರೆದಿದ್ದು, ಮುನ್ನುಡಿ ಬರೆದಿರುವ ನನ್ನ ಗುರುಗಳ ಜೊತೆ ಸಿಇಓರವರನ್ನು ಭೇಟಿ ಮಾಡಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬರಬೇಕೆಂದು ಕರೆದಾಗ ನನ್ನ ಗುರುಗಳಿಗೆ ನೀವು ಒಬ್ಬ ಪ್ರೊಪೆಸರ್ ಆಗಿ ಈ ತರಹ ಪುಸ್ತಕ ಬರೆದುಕೊಂಡು ಓಡಾಡಲು ನಿಮ್ಮ ಶಿಷ್ಯನಿಗೆ ಹೇಳಿ ಕೊಟ್ಟಿದ್ದೀರ, ಇಂತಹವನ ವಕಾಲತ್ತು ವಹಿಸಿಕೊಂಡು ಬಂದಿದ್ದೀರ ಹೋಗಿ ಎದ್ದು ಆಚೆ ಎಂದು ನಿಂದಿಸಿದರು.
ನಿನ್ನನ್ನು ಕರ್ತವ್ಯದಿಂದ ಬಿಡಿಗಡೆ ಮಾಡುತ್ತೇನೆಂದು ಒಂದಲ್ಲ ಒಂದು ರೀತಿಯಲ್ಲಿ ನನಗೆ ನಿಂದಿಸುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದರು, 2024 ಸೆಪ್ಟಂಬರ್ 12ರಂದು ಮಧ್ಯಾಹ್ನ 1.30ರಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಅಯೋಜನೆಯಾಗಿದ್ದ ಸ್ವಚ್ಚತಾ ಇ-ಸೇವಾ ಆಂದೋಲನ ಅನುಷ್ಠಾನ ಜಿ.ಪಂ.ನಲ್ಲಿ ಏರ್ಪಡಿಸಿದ್ದ ವಿಡಿಯೋ ಸಂವಾದದಲ್ಲಿ ನಾನು, ನನ್ನ ಸಹದ್ಯೋಗಿಗಳು ಹಾಗೂ ಮುಖ್ಯ ಯೋಜನಾಧಿಕಾರಿ ಹಾಗೂ ಜಿಲ್ಲಾ ನೋಡಲ್ ಆಧಿಕಾರಿಗಳು ಭಾಗವಹಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಿಇಓರವರು ಮುಖ್ಯ ಯೋಜನಾಧಿಕಾರಿಗಳಿಗೆ ರವಿಕುಮಾರ್ ವಿರುದ್ಧ ಕ್ರಮ ಕೈಗೊಂಡ ಕಡತವನ್ನು ಯಾಕೆ ಸಲ್ಲಿಸಿಲ್ಲ ಎಂದು ನಿಂದಿಸಿ, ವ್ಯವಸ್ಥಾಪಕರಾದ ಚಂದ್ರಕಲಾರವರಿಗೆ ನಿಮ್ಮನ್ನು ನೇಮಿಸಿರುವುದೇ ಆ ಉದ್ದೇಶಕ್ಕೆ ಎಷ್ಟು ಬಾರಿ ಸೂಚನೆ ನೀಡುವುದು, ಮತ್ತೆ ಎಂಐಎಸ್ ಸಮಾಲೋಚಕಿ ವಿನುತಾ ರವರಿಗೆ ಟಾರ್ಗೆಟ್ ಪಟ್ಟಿ ಮಾಡಿ ಡಮ್ಮಿ ಐಇಸಿ ನೀಡಿ ಎಂದು ತಿಳಿಸಿದರು.
ಮತ್ತೆ ನನ್ನನ್ನು ನಿಂದಿಸಿದಾಗ ನಾನು ಸಿಇಓರವರಿಗೆ ಏಕೆ ನನ್ನನ್ನು ವೈಯಕ್ತಿಕವಾಗಿ ನಿಂದಿಸಿ ದ್ವೇಷ ಸಾಧಿಸುತ್ತಿರ ಎಂದು ಪ್ರಶ್ನಿಸಿದಾಗ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದರು. ಈ ಸಂದರ್ಭದಲ್ಲಿ ನಾನು ಪ್ರಜ್ಞೆ ತಪ್ಪಿದ್ದು, ಎಚ್ಚರವಾದಾಗ ಜನರಲ್ ಆಸ್ಪತ್ರೆಯಲ್ಲಿ (ಸರ್ಕಾರಿ ಆಸ್ಪತ್ರೆ) ಇದ್ದು, ಸಹದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಯಿತು, ಸಿಇಓರವರ ಹಲ್ಲೆಯಿಂದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿದ್ದು, ನನ್ನ ಮೇಲೆ ಹಲ್ಲೆ ಮಾಡಿರುವ ಸಿಇಓರವರ ಮೇಲೆ ಕಾನೂನು ಕ್ರಮ ಕೈಗೊಂಡು ಸೂಕ್ತ ರಕ್ಷಣೆ ನೀಡುವಂತೆ ತಿಲಕ್ ಪಾರ್ಕ್ ಸಿಪಿಐರವರಿಗೆ ಜಿ.ಪಂ. ಗುತ್ತಿಗೆ ನೌಕರ ರವಿಕುಮಾರ್ ಎಂ.ಬಿ. ದೂರು ನೀಡಿದ್ದಾರೆ. (ಸಿಪಿಐ ಕಚೇರಿಯವರು ದೂರ ಪಡೆದು, ದಿನಾಂಕ : 12-09-2024ರಂದು ಅರ್ಜಿದಾರರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯನ್ನು ಪಡೆದು ನೇರ ಅರ್ಜಿ ಸಂಖ್ಯೆ 10/2004ರಂತೆ ಪಡೆದು ವಿಚಾರಣೆ ಬಾಕಿ ಇರುತ್ತದೆ ಎಂದು ಬರೆದು ಶೀಲು ಹಾಕಿ ಸಹಿ ಮಾಡಲಾಗಿದೆೆ.)