ಮನೆಗಳ್ಳರ ಬಂಧನ-49 ಲಕ್ಷ ಮೌಲ್ಯದ ಚಿನ್ನಾಭರಣ ವಶ

ತುಮಕೂರು: ನಗರದಲ್ಲಿ ಜಯನಗರದ ಪೋಲೀಸ್ ಠಾಣೆಯಲ್ಲಿ 15ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣದಲ್ಲಿ ಕಳವಾಗಿದ್ದ 49 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣವನ್ನು ಸುಮಾರು 819 ಗ್ರಾಮ ತೂಕದ ಚಿನ್ನದ ವಡೆವೆಗಳನ್ನು ಮತ್ತು 88000 ಸಾವಿರ ಬೆಲೆಬಳುವ 1.ಕೆಜಿ 300 ಗ್ರಾಮ ತುಕದ ಬೆಳ್ಳಿ ಆಭರಣಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಶೋಕ್ ಕೆ.ವಿ ತಿಳಿಸಿದರು.

ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮನೆಗಳ್ಳತನ ಪ್ರಕರಣದ ಬೆನ್ನೆತ್ತಿದ ಪೊಲೀಸರು ಆರೋಪಿಗಳಾದ ಆಂಧ್ರ ಪ್ರದೇಶದ ಗುಂಟೂರು ಮೂಲದ ಬಂಡಿಕಾಳ ರತ್ನರಾಜು(36), ಮಧುಗಿರಿ ತಾಲ್ಲೂಕು ಹೊಸ ಇಟಕಲೋಟಿಯ ಹೆಚ್.ವಿ.ಶ್ರೀನಿವಾಸ್(30) ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ 15ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ತಿಳಿಸಿದರು.

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ 10 ಪ್ರಕರಣ, ಹೊಸ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ 01, ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ 02 ಪ್ರಕರಣ, ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಒಂದು ಪ್ರಕರಣದಲ್ಲಿ ಕಳವಾಗಿದ್ದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಸರಗಳ್ಳರ ಬಂಧನ : ಮಹಿಳೆಯರ ಮಾಂಗಲ್ಯ ಸರ ಕದ್ದು ಪರಾರಿಯಾಗುತ್ತಿದ್ದ 3 ಆರೋಪಿಗಳನ್ನು ಬಂಧಿಸಿ 5.98.ಲಕ್ಷದ 99 ಗ್ರಾಂ ತೂಕದ 2 ಮಾಂಗಲ್ಯ ಚಿನ್ನದ ಸರಗಳನ್ನು ಮತ್ತು ಕೃತ್ಯಕ್ಕೆ ಬಳಿಸಿದ ಪ್ಯಾಷನ್ ಪ್ರೋ ಬೈಕ್ ಅನ್ನು ವಶಕ್ಕೆ ಪಡೆದು ತನಿಕೆನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ವೆರಿಷ್ಟಧಿಕಾರಿ ಕೆ.ವಿ.ಅಶೋಕ ತಿಳಿಸಿದರು.

ಸರಗಳ್ಳತನದ ಆರೋಪಿಗಳಾದ ಮಂಡ್ಯ ಜಿಲ್ಲೆಯ ನಾಗಮಂಗಲದ ಸಾವಿಯಾದ ಶಶಿಧರ್(37),ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ತಡಕಲೂರು ಗ್ರಾಮದ ಅಭಿಷೇಕ್(21),ಮತ್ತು ಬೆಂಗಳೂರಿನ ದೊಡ್ಡ ಬಿದರಕಲ್ಲಿನ ರೋಹನ್ ಕುಮಾರ್(20) ಎಂಬುವರೆ ಸರಕಳ್ಳತನ ಆರೋಪಿಗಳಾಗಿದ್ದಾರೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧೀಕ್ಷಕ ಚಂದ್ರಶೇಖರ್,ತಿಲಕ್ ಪಾರ್ಕ್ ಸಿಪಿಐ ಪುರುಷೋತಮ್, ಪಿ.ಎಸ್.ಐ.ಹನುಮಂತರಾಯಪ್ಪ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *