ತುಮಕೂರು: ವೆಬ್ ಮಾಧ್ಯಮ ಬೇರೆಲ್ಲ ಮಾಧ್ಯಮ ಕ್ಷೇತ್ರಗಳಿಗಿಂತ ಭಿನ್ನವಾಗಿದ್ದು, ಈ ಮಾಧ್ಯಮದಲ್ಲಿ ಕ್ರಿಯಾಶೀಲತೆ ಪ್ರಮುಖ ಪಾತ್ರ ವಹಿಸುತ್ತದೆ. ಜನಸಾಮಾನ್ಯರ ಹಿತಾಸಕ್ತಿಗಳ ಅನುಗುಣವಾಗಿ ಸುದ್ದಿಗಳನ್ನು ಮಾಡಬೇಕು.ಕಡಿಮೆ ಪದಗಳೊಂದಿಗೆ ಸರಳವಾಗಿ ಸುದ್ದಿಯನ್ನು ಜನಸಾಮಾನ್ಯರಿಗೆ ತಿಳಿಸುವುದು ವೆಬ್ ಬರವಣಿಗೆಯಲ್ಲಿ ಮುಖ್ಯವಾಗಿರುತ್ತದೆ ಎಂದು ಈ ದಿನ ಡಾಟ್ ಕಾಮ್‍ನ ಜಿಲ್ಲಾ ವರದಿಗಾರರಾದ ಚಂದನ್ ಅವರು ಅಭಿಪ್ರಾಯಪಟ್ಟರು.
ನಗರದ ಎಸ್‍ಎಸ್‍ಐಟಿಯಲ್ಲಿರುವ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ‘ವೆಬ್ ಬರವಣಿಗೆ’ ವಿಷಯ ಕುರಿತು ಮಾತನಾಡಿದ ಅವರು, ಮಾನವ ಮೂಲತಃ ಹುಟ್ಟಿನಿಂದಲೇ ಪತ್ರಕರ್ತನಾಗಿರುತ್ತಾನೆ. ಅವನಿಗೆ ಅನಿಸಿದ ವಿಷಯ ಅಥವಾ ಅಭಿಪ್ರಾಯಗಳನ್ನು ಬೇರೊಬ್ಬರಿಗೆ ತಿಳಿಸಲು ಬಯಸುತ್ತಾನೆ. ಅಂತಹ ಸಂದರ್ಭದಲ್ಲಿ ಮಾಧ್ಯಮಗಳ ಅವಶ್ಯಕತೆ ಅವನಿಗಿರುತ್ತದೆ. ಮೌಖಿಕ ಸಂವಹನಗಳಿಂದ ಹಿಡಿದು ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳಂತಹ ಸಂವಹನ ಮಾಧ್ಯಮವಾಗಿ ಬಳಸಲಾಗುತ್ತಿದ್ದು ಪ್ರಸ್ತುತವಾಗಿ ಡಿಜಿಟಲ್ ಮಾಧ್ಯಮ ಹೆಚ್ಚು ವ್ಯಾಪಕವಾಗಿ ಹರಡಿದೆ ಎಂದರು.
ವೆಬ್ ಮಾಧ್ಯಮ ಬೇರೆ ಎಲ್ಲ ಮಾಧ್ಯಮ ಕ್ಷೇತ್ರಗಳಿಗಿಂತ ಭಿನ್ನವಾಗಿದ್ದು, ವೆಬ್ ಮಾಧ್ಯಮದಲ್ಲಿ ಕ್ರಿಯಾಶೀಲತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಜನಸಾಮಾನ್ಯರ ಹಿತಾಸಕ್ತಿಗಳ ಅನುಗುಣವಾಗಿ ಸುದ್ದಿಗಳನ್ನು ಮಾಡಬೇಕು.ಕಡಿಮೆ ಪದಗಳೊಂದಿಗೆ ಸರಳವಾಗಿ ಸುದ್ದಿಯನ್ನು ಜನಸಾಮಾನ್ಯರಿಗೆ ತಿಳಿಸುವುದು ವೆಬ್ ಬರವಣಿಗೆಯಲ್ಲಿ ಮುಖ್ಯವಾಗಿರುತ್ತದೆ ಎಂದು ಚಂದನ್ ಹೇಳಿದರು.
ಬೇರೆ ಮಾಧ್ಯಮಗಳಿಗಿಂತ ವೆಬ್ ಮಾಧ್ಯಮದಲ್ಲಿ ಅತಿ ಸಮಯದಲ್ಲಿ ವೇಗವಾಗಿ ಕ್ಷಣಮಾತ್ರದಲ್ಲೇ ಸುದ್ದಿಯನ್ನು ತಲುಪಿಸುವಂತಹ ಕ್ಷೇತ್ರ ಡಿಜಿಟಲ್ ಮಾಧ್ಯಮ. ಇಂತಹ ಸಂದರ್ಭದಲ್ಲಿ ವೆಬ್ ಬರಹಗಾರ ತನ್ನ ಚಾಣಾಕ್ಷತನದಿಂದ ನೈಜ ಘಟನೆಗಳನ್ನು ನೈಜ ಸುದ್ದಿಗಳಾಗಿ ಜನರನ್ನ ತಲುಪುವ ಕೆಲಸವನ್ನು ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ಬೆಳವಣಿಗೆಯಿಂದ ಜನಸಂಪರ್ಕ ಸುಲಭವಾಗಿದೆ. ಮಾಧ್ಯಮ ವಿದ್ಯಾರ್ಥಿಗಳಿಗೆ ಸಂವಹನ ನಡೆಸುವ ಹಲವು ವೇದಿಕೆಗಳಿದ್ದು, ಜೊತೆಗೆ ಜನಸಂಪರ್ಕ ಕಲ್ಪಿಸುವ ಸಾಮಾಜಿಕ ಜಾಲತಾಣ, ಬ್ಲಾಗ್, ವೆಬ್ಸೈಟ್ ನಂತಹ ಮಾಧ್ಯಮಗಳಲ್ಲಿ ತಮ್ಮದೆ ಖಾತೆಗಳನ್ನು ಹೊಂದಿರುವುದು ಬಹಳ ಅತ್ಯವಶ್ಯಕ ಎಂದು ಚಂದನ್ ಅವರು ಮಾಧ್ಯಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ.ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಶ್ವೇತಾ ಎಂ. ಪಿ, ಶ್ರೀ ಕಿರಣ್ ಸಿ.ಎನ್. ರವಿಕುಮಾರ್ ಸಿ.ಹೆಚ್ ರೇಡಿಯೋ ಸಿದ್ಧಾರ್ಥದ ಗೌತಮ್.ವಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿಗಳಾದ ವರ್ಷಿತಾ ಮತ್ತು ಅನುಷಾ ಅವರು ಕಾರ್ಯಕ್ರಮ ನಿರೂಪಿಸಿ, ನಿರ್ವಹಣೆ ಮಾಡಿದರು.