ಶಾಲೆಯ ಗೋಡೆಯ ಮೇಲೆ ರಂಗು ರಂಗಿನ ಚಿತ್ತಾರ

ತುಮಕೂರು- ತಾಲ್ಲೂಕಿನ ಬ್ರಹ್ಮಸಂದ್ರ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಶಾಲೆಯ ಗೋಡೆಯ ಮೇಲೆ ರಂಗು ರಂಗಿನ ಚಿತ್ತಾರವನ್ನು ಮೂಡಿಸುವ ಮೂಲಕ ಶಾಲೆಗೆ ಹೊಸ ಕಳೆ ತರಲಾಯಿತು.

ತುಮಕೂರಿನ ಸಹಕಾರ್ ಸಂಸ್ಥೆಯ ವತಿಯಿಂದ ಸಂಸ್ಥೆಯ ಸದಸ್ಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ರವೀಂದ್ರ ಕಲಾನಿಕೇತನದ ಚಿತ್ರಕಲಾಕಾರರು ಮತ್ತು ಹಲವಾರು ಸ್ವಯಂ ಸೇವಕರು ಗೋಡೆಗಳ ಮೇಲೆ ರಂಗು ರಂಗಿನ ಚಿತ್ತಾರ ಬಿಡಿಸುವ ಮೂಲಕ ಶಾಲೆಗೆ ಹೊಸ ಕಳೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಮಹಾಲಿಂಗಪ್ಪ ಅವರು, ವಿಜ್ಞಾನ ವಸ್ತುಪ್ರದರ್ಶನ, ನಿತ್ಯ ಮನೆಪಾಠ, ಸ್ವಚ್ಚತಾ ಅಭಿಯಾನ, ಸೈಕ್ಲೋಥಾನ್ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು 2018 ರಿಂದ ನಡೆಸಿಕೊಂಡು ಬಂದಿರುವ ಸಹಕಾರ್ ಸಂಸ್ಥೆಯು ‘ಸಹಕಾರ್ ಸೆ ಶಿಕ್ಷಾ’ ಎಂಬ ಯೋಜನೆಯ ಅಡಿಯಲ್ಲಿ ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳಿಗೆ ಉತ್ಸಾಹ ಮೂಡಿಸುವ, ಕಲಿಕೆಯಲ್ಲಿ ಆಸಕ್ತಿ ಬೆಳೆಸುವ, ದಾಖಲಾತಿ ಹೆಚ್ಚಿಸುವ ಸಲುವಾಗಿ ಕೈಗೊಂಡ ಈ ಕಾರ್ಯವೂ ಕೂಡ ಇದೇ ಯೋಜನೆಯ ಭಾಗವಾಗಿದೆ.

ಸಹಕಾರ್ ಸಂಸ್ಥೆಯ ಅಧ್ಯಕ್ಷರಾದ ಅಕ್ಷಯ್ ಭಟ್ ಮಾತನಾಡಿ, ಯುವಕರು ಸಮಾಜದ ಬಗ್ಗೆ ಕಳಕಳಿ ಹೊಂದಬೇಕು. ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಗೋಕುಲ್ ಮಾತನಾಡಿ, ಶಿಕ್ಷಣವಷ್ಟೇ ಎಲ್ಲರ ಹಕ್ಕಲ್ಲ, ಗುಣಮಟ್ಟದ ಶಿಕ್ಷಣ ಎಲ್ಲರ ಹಕ್ಕು. ಅದನ್ನು ಅವಶ್ಯಕತೆ ಇರುವ ಕಡೆ ತಲುಪಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *