ತಂದೆಯ ಅಂತ್ಯಕ್ರಿಯೆ ಕ್ರಿಯಾ ವಿಧಾನಗಳನ್ನು ನೆರವೇರಿಸಿದ ಮಗಳು

ತುಮಕೂರು : ತುಮಕೂರು ತಾಲ್ಲೂಕು, ಹಿರೇಹಳ್ಳಿ ಅಂಚೆ, ಪೆಮ್ಮನಹಳ್ಳಿ ಗ್ರಾಮದಲ್ಲಿ 6ನೇ ತರಗತಿ ಓದುತ್ತಿರುವ 11ನೇ ವರ್ಷದ ಮೋನಿಷ ಎಂಬ ಹೆಣ್ಣು ಮಗುವೊಂದು ತನ್ನ ತಂದೆಯ ಅಂತ್ಯಕ್ರಿಯೆಂಯ ಕ್ರಯಾ ವಿಧಾನಗಳನ್ನು ನಡೆಸಿ ನಾಗರೀಕರಿಗೆ ಒಂದು ಮಾದರಿಯಾಗಿದ್ದಾಳೆ.

ಕಳೆದ ಎರಡು ದಿನಗಳ ಹಿಂದೆ ತನ್ನ ತಂದೆಯಾದ ಕೆಂಪರಾಜು ಎಂಬುವವರು (48 ವರ್ಷ) ಕ್ಯಾನ್ಸರ್ ಖಾಯಿಲೆಯಿಂದ ಸಾವನ್ನಪ್ಪಿರುತ್ತಾರೆ, ಮೂಲತಃ ಆಟೋ ಚಾಲಕರಾಗಿದ್ದ ತನ್ನ ತಂದೆ ಬಡತನದಿಂದಲೇ ಜೀವನ ನಡೆಸುತ್ತಿದ್ದರು, ಆತನಿಗೆ ಇಬ್ಬರೂ ಸಹ ಹೆಣ್ಣು ಮಕ್ಕಳಿದ್ದು ಹಿರಿಯ ಮಗಳಾದ ಮೋನಿಷ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನಡೆಸಿ ಗ್ರಾಮಸ್ಥರ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಈಕೆಯ ಕಾರ್ಯಕ್ಕೆ ಗ್ರಾಮಸ್ಥರು ಸಹ ಬೆಂಬಲಿಸಿದ್ದು, ಹಲವಾರು ಜನರಿಗೆ ಮಾದರಿಯಾಗಿದ್ದಾಳೆ, ಇನ್ನು ಈ ಕುಟುಂಬದ ಪೋಷಣೆಯನ್ನು ಮಗುವಿನ ಸಂಬಂಧಿಕರು ನೋಡಿಕೊಳ್ಳಲು ಮುಂದಾಗಿದ್ದಾರೆ. ಹೆಣ್ಣು ಬರೀ ಆರತಿಗೆ ಮಾತ್ರವೇ ಸೀಮಿತವಾಗಿರದೇ ಕೀರ್ತಿಯನ್ನು ತಂದುಕೊಡಲು ಸಹ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ ಎನ್ನುವುದಕ್ಕೆ ಮೋನಿಷ ಸಾಕ್ಷಿಯಾಗಿದ್ದಾಳೆ.

Leave a Reply

Your email address will not be published. Required fields are marked *