ಅಲ್ಲಿ ಮಂತ್ರಘೋಷವಿಲ್ಲ, ಮಂಗಳವಾದ್ಯವಿಲ್ಲ, ಪುರೋಹಿತರಿಲ್ಲದೆ ಸಂವಿಧಾನದ ಪೀಠಿಕೆ ಓದುವುದರ ಮೂಲಕ ಸರಳವಾಗಿ,ಅರ್ಥಪೂರ್ಣವಾಗಿ ಕಾಡುಗೊಲ್ಲರ ಹುಡುಗಿಯೊಬ್ಬಳು ಕ್ರಾಂತಿಕಾರಕ ಹೆಜ್ಜೆ ಇಟ್ಟು ಸಂವಿಧಾನ ಸಾಕ್ಷಿ ಮದುವೆಯಾಗಿದ್ದು ಎಲ್ಲರನ್ನು ಬೆರಗುಗೊಳಿಸಿತ್ತು.
ಸದಾ ಮೌಢ್ಯ, ಕಂದಾಚಾರ, ಮುಟ್ಟು-ಚಟ್ಟು ಎಂದು ಆಚರಣೆ ಮಾಡುವ ಕಾಡುಗೊಲ್ಲ ಸಮಾಜದಲ್ಲಿ ಜನಿಸಿದ ರವೀಶ್.ಎನ್.ಎ. ಅವರು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲೇ ಪಿ.ಲಂಕೇಶ್ ಮತ್ತು ಪೂರ್ಣಚಂದ್ರತೇಜಸ್ವಿಯವರ ಪ್ರಭಾವದಿಂದ ಪ್ರಗತಿಪರರಾಗಿ ಯೋಚನೆ ಬೆಳೆಸಿಕೊಂಡ ಅವರು, ತಮ್ಮ ಸಮಾಜದ ಸಂಪ್ರಾದಾಯಗಳನ್ನು ಬದಿಗೊತ್ತುತ್ತಾ ಬಂದ ಅವರು, ತಮ್ಮ ಮಗಳಾದ ಮೇಘನಾ. ಆರ್. ಅವರನ್ನು ಪ್ರಗತಿಪರ ಚಿಂತನೆಯಡಿಯಲ್ಲಿ ಬೆಳಸಿದರು.
ಚಿಕ್ಕ ವಯಸ್ಸಿನಲ್ಲೇ ಬುದ್ಧ, ಅಂಬೇಡ್ಕರ್, ಗಾಂಧಿ ಪ್ರಭಾವಕ್ಕೆ ಒಳಗಾದ ಮೇಘನಾ.ಆರ್. ಮಾಕ್ರ್ವಿಸ್ಟ್ ಚಿಂತನೆಗಳನ್ನು ಅಳವಡಿಸಿಕೊಂಡು ನಂತರ ಅಂಬೇಡ್ಕರ್ ಚಿಂತನೆಗಳಿಗೆ ಪ್ರಭಾವಕ್ಕೆ ಒಳಗಾದವರು, ರವೀಶ್ ಅವರು ಕಾಡುಗೊಲ್ಲ ಸಮಾಜದಲ್ಲಿ ಹುಟ್ಟಿದ್ದರು, ಪ್ರಗತಿಪರರಾದ ಬಂಜಗೆರೆ ಜಯಪ್ರಕಾಶ್, ಡಾ.ಸಿ.ಜೆ.ಲಕ್ಷ್ಮೀಪತಿ ಒಡನಾಡಿಗಳಾಗಿ ಬೆಳೆದಿದ್ದರಿಂದ ಸಮಾಜದ ಕಟ್ಟುಪಾಡುಗಳಿಗೆ ಮಾರು ಹೋಗದೆ ತಮ್ಮ ಪತ್ನಿ ಅನ್ನಪೂರ್ಣರವರನ್ನು ತಮ್ಮ ಪ್ರಗತಿಪರ ಚಿಂತನೆಗಳಲ್ಲಿ ಆಲೋಚಿಸುವಂತೆ ಮಾಡಿದ ರವೀಶ್ ಅವರು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದಲ್ಲಿ ಶಿರಸ್ತೇದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂತಹ ಕುಟುಂಬ ಮತ್ತು ಕಾಡುಗೊಲ್ಲ ಸಮಾಜದಲ್ಲಿ ಹುಟ್ಟಿದ ಮೇಘನಾ.ಆರ್. ತಮ್ಮ ಪ್ರಕರ ಚಿಂತನೆಗಳಿಂದ ಬುದ್ಧ, ಅಂಬೇಡ್ಮರ್ ಪ್ರಭಾವಕ್ಕೆ ಒಳಗಾಗಿ ಆ ಚಿಂತನೆಗಳಲ್ಲೆ ಕಾರ್ಯನಿರ್ವಹಿಸುತ್ತಿರುವ ಅವರು ವೈಜ್ಞಾನಿಕ ಚಿಂತನೆಗಳನ್ನು ಬೆಳಸಿಕೊಂಡವರು.
ಸಿ.ಜಿ,ಅನ್ನಪೂರ್ಣ, ರವೀಶ್.ಎನ್.ಎ. ರವರ ಮಗಳಾದ ಮೇಘನಾ.ಆರ್. ಅವರು ತಮ್ಮ ಸಹದ್ಯೋಗಿಯಾಗಿರುವ ರಾಕೇಶ್.ಹೆಚ್.ಎಸ್. ಅವರನ್ನು 2025ರ 11ನೇ ಭಾನುವಾರ ಚಿತ್ರದುರ್ಗದ ಮೆದೇಹಳ್ಳಿಯ ವೈಭವ ಗಾರ್ಡನ್‍ನಲ್ಲಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ‘ಸಂವಿಧಾನ ಸಾಕ್ಷಿ’ ಮದುವೆಯಾಗುವ ಮೂಕ ಕಾಡುಗೊಲ್ಲ ಹಟ್ಟಿಗಳಲ್ಲಿರುವ ಸಂಪ್ರದಾಯಗಳನ್ನು ಅದೂ ಅಂತರ್ಜಾತಿ ವಿವಾಹವಾಗುವ ಮೂಲಕ ಹೋಗಲಾಡಿಸಬೇಕೆಂಬ ಸಂದೇಶವನ್ನು ಸಾರಿದರು.
ಮೇಘನಾ ಅವರ ಬಾಳಸಂಗಾತಿಯಾದ ರಾಕೇಶ್‍ರವರ ತಂದೆ-ತಾಯಿ ಸುರೇಶ್, ವಿನೋದ ಅವರು ಕೃಷಿಕರಾಗಿ ಅಂತರ್ಜಾತಿ ವಿವಾಹ ಮತ್ತು ಸಂವಿಧಾನ ಸಾಕ್ಷಿ ಮದುವೆಗೆ ತಮ್ಮ ಮಗನಿಗೆ ಪ್ರೋತ್ಸಾಹ ನೀಡುವುದರ ಮೂಲಕ ಹಳ್ಳಿಯ ಸಂಪ್ರದಾಯಗಳನ್ನು ಬದಿಗೊತ್ತಿದ್ದಾರೆ.
ಇದಕ್ಕೆ ವಿನೋದ ಮತ್ತು ಸುರೇಶ್ ಅವರನ್ನು ಅಭಿನಂದಿಸಲೇ ಬೇಕು, ಕೆ.ಆರ್.ಪೇಟೆ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿಯವರಾದ ಇವರು ತಮ್ಮ ಮಗ ಅಂತರ್ಜಾತಿ ವಿವಾಹದ ಜೊತೆಗೆ ಸಮಾಜದ ಕಟ್ಟುಪಾಡುಗಳ ಮದುವೆಯಾದ ಶಾಸ್ತ್ರ, ಮಂತ್ರಘೋಷ, ವಾದ್ಯ, ಚಪ್ಪರ, ಸಂಪ್ರದಾಯ ಪದ್ದತಿಗಳಿಲ್ಲದ ಮದುವೆಗೆ ಒಪ್ಪಿ ಸಂವಿಧಾನ ಸಾಕ್ಷಿಯಡಿ ಯಾವುದೇ ಪ್ರಗತಿ ಪರ ಚಿಂತನೆಗಳಿಲ್ಲದ ಈ ದಂಪತಿಗಳು ನೆರವೇರಿಸಿದ್ದು ಮೆಚ್ಚವಂತಹವುದು.
ಅಯ್ಯೋ ಚಪ್ಪರವಿಲ್ಲವಂತೆ, ಶಾಸ್ತ್ರವಿಲ್ಲವಂತೆ, ಪುರೋಹಿತರು ಇಲ್ಲ, ಲಗ್ನ ಕಟ್ಟಿಸದೆ ಮೇಘನಾ ಮತ್ತು ರಾಕೇಶ್ ಅವರು ಯಾವುದೇ ಮಹೂರ್ತವನ್ನು ನೋಡದೆ ರಾಹುಕಾಲ, ಗುಳಿಕ ಕಾಲ, ಯಮಗಂಡ ಕಾಲ ನೋಡಲಿಲ್ಲವಂತೆ ಎಂದು ಜರಿಯುವ, ಸಂಪ್ರದಾಯ ವಿಲ್ಲದೆ ಒಂದು ಹೆಜ್ಜೆಯನ್ನೂ ಇಡದಂತಹ ಕಾಲದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆಯನ್ನು ಓದಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಮದುವೆಯೊಂದು ಒಂದು ಹೊಸ ರೀತಿಯಲ್ಲಿ ಆಗಿದ್ದನ್ನು ಕಂಡ ಅಲ್ಲಿ ಸೇರಿದ್ದ ಜನ ಕರತಾಂಡನ ಮಾಡಿ ಹುಡುಗ-ಹುಡುಗಿಯನ್ನು ಹಾರೈಸಿದರು.
ಸಂವಿಧಾನ ಸಾಕ್ಷಿ ಮದುವೆಯನ್ನು ನೇವೇರಿಸಿ ಕೊಟ್ಟ ಕವಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದ ರಾಜ್ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರುವಂತ ಇಂತಹ ಸರಳ, ಅಂತರ್ಜಾತಿ ವಿವಾಹಕ್ಕೆ ನಾವμÉ್ಟೀ ಸಾಕ್ಷಿಯಾಗಿಲ್ಲ. ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು, ಮಹಾತ್ಮ ಗಾಂಧಿ ಮೊದಲಾದ ಮಹಾನ್ ನಾಯಕರು ಸಾಕ್ಷಿಯಾಗಿ ಅತ್ಯಂತ ಸರಳ, ಸಂಭ್ರಮದಿಂದ ಕೂಡಿದ ಮದುವೆ ಇದಾಗಿದೆ ಎಂದರು.

ಸಂವಿಧಾನ ಕಾರಣಕ್ಕಾಗಿಯೇ ನಾವೆಲ್ಲ ಇಂದು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಸಂವಿಧಾನ ಮಾಡಿರುವ ಮಹಾ ಪವಾಡದಿಂದಾಗಿ ಕಾರು, ಬೈಕ್ ಗಳಲ್ಲಿ ಓಡಾಡುತ್ತಿದ್ದೇವೆ. ಬೃಹತ್ ಕಟ್ಟಡಗಳನ್ನು ಕಟ್ಟಿ ಜೀವನ ಮಾಡುತ್ತಿದ್ದೇವೆ. ಅಡಿಕೆ. ಎಲೆಗಳ ಗೋಜಿಲ್ಲದ ಸರಳವಾಗಿ ಮದುವೆ ಆಗಿದೆ. ಒಂದು ಚೆಂಬು, ಕಳಸ ಕಂಬಳಿ, ನೀರಿಲ್ಲ ಎಂದು ಎμÉ್ಟೂೀ ಮದುವೆಗಳು ಮುರಿದು ಬಿದ್ದಿವೆ. ಸಂಪ್ರದಾಯದಿಂದ ಕೂಡಿದ ಮದುವೆಗಳಿಂದ ಏನೂ ಪ್ರಯೋಜನವಿಲ್ಲ, ಜೀವನದಲ್ಲಿ ದುಡಿಮೆಯ ಶೇ.60ರಷ್ಟು ಹಣವನ್ನು ಆಡಂಬರ, ಮದುವೆ, ನಾಮಕರಣ, ಗೃಹಪ್ರವೇಶ, ಶಾಸ್ತ್ರ, ಸಂಬಂಧ ಎಂದು ಖರ್ಚು ಮಾಡುವುದಕ್ಕಿಂತ ಈ ರೀತಿಯ ಸರಳ ವಿವಾಹಗಳು ಸಮಾಜದಲ್ಲಿ ನಡೆಯಬೇಕಿದೆ , 12ನೇ ಶತಮಾನದಲ್ಲಿ ಬಸವಣ್ಣನವರು ಹರಳಯ್ಯನಿಗೆ ಬ್ರಾಹ್ಮಣರ ಯುವತಿಯನ್ನು ಮದುವೆ ಮಾಡಿಸಿದ್ದರು ಎಂದು ಹೇಳಿದರು.
ರಾಷ್ಟ್ರ ಕವಿ ಕುವೆಂಪು ಅವರು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಮದುವೆಯನ್ನ ಮಂತ್ರ ಮಾಂಗಲ್ಯದ ಪರಿಕಲ್ಪನೆ ಮೂಲಕ ಮಾಡಿದ್ದಾರೆ ಗಂಡು, ಹೆಣ್ಣು, ಮೇಲು ಕೀಳಲ್ಲ. ಜಾತಿ ಧರ್ಮದ ಗೊಡದೆಗಳಿಲ್ಲದೆ ಅವರು ಮದುವೆ ಮಾಡಿದ್ದರು ಎಂದು ಮುಕಂದರಾಜ್ ತಿಳಿಸಿದರು.
ಹೆಣ್ಣು ಮತ್ತು ಗಂಡಿನ ಎರಡು ಕುಟುಂಬಗಳು ವೈಜ್ಞಾನಿಕವಾಗಿ ಯೋಚನೆ ಮಾಡಿ ಸ್ನೇಹಿತರಂತೆ ವೇದಿಕೆಯಲ್ಲಿ ಕೂತ ಸಂಭ್ರಮದಿಂದ ಸಂವಿಧಾನ ಸಾಕ್ಷಿ ಮದುವೆಗೆ ಸಾಕ್ಷಿಯಾಗಿದ್ದಾರೆ ಎಂದು ಅವರು ತಿಳಿಸಿದರು
ಕವಿ, ಸಂಸ್ಕøತಿ ಚಿಂತಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮೇಘನಾ ಮತ್ತು ರಾಕೇಶ್ ಅಂತರ್ಜಾತಿ ವಿವಾಹ ಆಗುವುದಲ್ಲದೆ ಸರಳವಾಗಿ ಸಂವಿಧಾನ ಸಾಕ್ಷಿ ಮದುವೆಯಾಗಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಅಂತರ್ಜಾತಿ ವಿವಾಹ ಆಗುತ್ತೀರಾ ಎನ್ನುವ ನಂಬಿಕೆ ಇದೆ, ಅಂತರ್ಜಾತಿ ವಿವಾಹದ ಜೊತೆಗೆ ಸರಳ ರೀತಿಯ ಮದುವೆ ಮಾಡಿಕೊಳ್ಳಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಮೌಢ್ಯ, ಕಂದಾಚಾರಗಳಿಗೆ ಬಲಿಯಾಗಬೇಡಿ, ಆ ಶಾಸ್ತ್ರ ಮಾಡಬೇಕಿತ್ತು. ಈ ಶಾಸ್ತ್ರ ಮಾಡಬೇಕಿತ್ತು ಎನ್ನುವ ತಪ್ಪು ಕಲ್ಪನೆಗಳಿಂದ ದೂರವಾಗುವಂತೆ ಅವರು ಕರೆ ನೀಡಿದರು.
ಪೂರ್ಣಚಂದ್ರ ತೇಜಸ್ವಿ ಅವರ ಮದುವೆಯನ್ನು ಕುವೆಂಪು ಅವರು ಅತ್ಯಂತ ಸರಳವಾಗಿ ಮಾಡಿ, ಕೇವಲ ಒಂದು ಕಾರ್ಡ್ ಮೂಲಕ ಬರೆದು ನಿಮಗೆ ಸಮಯ ಸಿಕ್ಕಾಗ ಅಶೀರ್ವದಿಸಿ ಆತಿಥ್ಯ ಸ್ವೀಕರಿಸಿ ಬರುವಂತೆ ಪತ್ರ ಬರೆಯುತ್ತಾರೆ. ಅದೇ ರೀತಿ ಇಂದು ಮೇಘನಾ ಮತ್ತು ರಾಕೇಶ್ ಅವರು ಸರಳ ರೀತಿಯಲ್ಲಿ ವಿವಾಹ ಮಾಡಿಕೊಂಡು ಆದರ್ಶವಾದಿಗಳಾಗಿ ವೈಚಾರಿಕ, ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾನತೆಯಿಂದ ಕೂಡಿ ಬಾಳಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಮೇಘನಾ ಅವರ ತಾಯಿ-ತಂದೆ ಅನ್ನಪೂರ್ಣ-ರವೀಶ್, ರಾಕೇಶ್‍ರವರ ತಾಯಿ-ತಂದೆ ವಿನೋದ-ಸುರೇಶ್, ಸುನೀತ, ಸಿ.ಜಿ.ರವಿಶಂಕರ್., ಡಾ.ಸಿ.ಜಿ. ಲಕ್ಷಿಪತಿ, ಪಾಪಣ್ಣ ಮತ್ತು ರೇಣುಕಾ ಮತ್ತಿತರರು ಇದ್ದರು.
ಜೋತಿ ಸಂವಿಧಾನ ಪ್ರಸ್ತಾವನೆ ಓದಿದರು. ಹೇಮಂತ್ ರಾಜ್, ತ್ರಿವೇಣಿ ಅವರ ತಂಡದಿಂದ ವಚನಗಳು, ಕ್ರಾಂತಿ ಗೀತೆಗಳನ್ನು ಹಾಡಲಾಯಿತು.
‘ಸಂವಿಧಾನ ಸಾಕ್ಷಿ’ ಸಾಂಗತ್ಯ :
ಮೇಘನಾ, ರಾಕೇಶ್ ಆದ ನಾವು ಸಂಗಾತಿಗಳಾಗಲು ಮನಸಾ ಒಪ್ಪಿ ಬಾಳನ್ನು ಮತ್ತಷ್ಟು ಸದೃಢ,ಸ್ವಾವಲಂಬಿ, ಸಾರ್ಥಕ ಮತ್ತು ಸಂಘ ಜೀವನ ನಡೆಸಲು ಸುಖ-ದುಖ, ನೋವು-ನಲಿವು, ಬಡತನ-ಸಿರಿತನದಂತಹ ಎಲ್ಲಾ ಕಾಲದಲ್ಲಿಯೂ ಬುದ್ಧ ಬಸವ ಅಂಬೇಡ್ಕರ್ ಅವರ ತಾತ್ವಿಕತೆ ಮತ್ತು ಜೀವನ ಶೈಲಿಯನ್ನು ಅನುಸರಣೆ ಮಾಡುತ್ತಾ, ಪರಸ್ಪರ ವೈಜ್ಞಾನಿಕವಾಗಿ ಚಿಂತಿಸಲು ಹಾಗೂ ತಾರ್ಕಿಕವಾಗಿ ಯೋಚಿಸಲು ಪ್ರೋತ್ಸಹಿಸುತ್ತೇವೆ. ಇಬ್ಬರ ಕುಟುಂಬ ವರ್ಗ, ಸ್ನೇಹ ಬಳಗ, ಸಮುದಾಯ ಮತ್ತು ಸಮಸ್ತ ದುಡಿಯುವ ವರ್ಗದ ಹಿತೈಷಿಗಳಿಗೆ, ಅವರ ಕರುಣೆ, ಪ್ರೀತಿಯನ್ನು ಸಮಾನವಾಗಿ ಹಂಚುತ್ತಾ, ಅವರಿಗಾಗಿ ನಾವು, ನಮಗಾಗಿ ಅವರು ಎನ್ನುವ ಹಾಗೇ ಜೀವಿಸಲು ಮುಂದಾಗಿ, ಯಾವುದೇ ಗಳಿಗೆಯಲ್ಲಿ ಅಪನಂಬಿಕೆ, ಅನುಮಾನ, ಅತಿರೇಕಕ್ಕೆ ಅಸ್ಪದ ಕೊಡದೇ ಮೈತ್ರಿಭಾವದಿಂದ ಎಲ್ಲವನ್ನೂ ಸರಿದೂಗಿಸಿಕೊಳ್ಳುತ್ತ, ಪರಸ್ಪರರ ಅಭಿಪ್ರಾಯವನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಸಮಾನತೆಯ ಕುಟುಂಬವನ್ನಾಗಿಸಿಕೊಳ್ಳಲು ಸಂಕಲ್ಪ ಮಾಡಿ, 2025ನೇ ವರ್ಷ ಮೇ ತಿಂಗಳ 11ನೇ ತಾರೀಖಿನಂದು ಈ ‘ಬಾಳ ಸಂವಿಧಾನ’ವನ್ನು ನಮಗೆ ನಾವೇ ಅರ್ಪಿಸಿಕೊಂಡು,ಅಂಗೀಕರಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಬಾಳ ಶಾಸನವಾಗಿ ಜಾರಿಗೊಳಿಸಿಕೊಳ್ಳುತ್ತಾ , ಜೀವನದುದ್ದಕ್ಕೂ ಭಾರತ ರತ್ನ ಡಾ. ಬಿ. ಆರ್ ಅಂಬೇಡ್ಕರ್ ಅವರಿಂದ ರಚಿತವಾದ ಭಾರತ ಸಂವಿಧಾನದ ಆಶಯದಂತೆ ಬಾಳ್ವೆ ಮಾಡಲು ಪಣ ತೊಟ್ಟಿದ್ದೇವೆ.
-ಮೇಘನಾ.ಆರ್
ರಾಕೇಶ್.ಹೆಚ್.ಎಸ್.