ಕಣತಿ (ಚಿಕ್ಕಮಗಳೂರು ಜಿಲ್ಲೆ) : ಚಿಕ್ಕಮಗಳೂರು ತಾಲ್ಲೂಕು ಕಣತಿ ಪ್ರಾಥಮಿಕ ಪಾಠ ಶಾಲೆಯಲ್ಲಿ 27 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ ವರ್ಗಾವಣೆಗೊಂಡ ಶಿಕ್ಷಕಿ ಪಿ.ಸಿ.ರಾಧಮಣಿಯವರನ್ನು ಶಾಲೆಯ ಹಳೆ ವಿದ್ಯಾರ್ಥಿಗಳು ಹೃದಯಸ್ಪರ್ಶಿ ಬೀಳ್ಕೊಡಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಮಣಿ ಪಿ.ಸಿ. ಅವರು, ಮಕ್ಕಳಿಗೆ ಮನಸ್ಸು ಚರುಕು ಮತ್ತು ಏಕಾಗ್ರತೆ ಸಾಧಿಸಲು ದೈಹಿಕ ವ್ಯಾಯಾಮ ಅತ್ಯಗತ್ಯ ಎಂದು ಹೇಳಿದರು.
ಮಕ್ಕಳು ಯಾವುದೇ ಸಾಧನೆ ಮಾಡಬೇಕಾದರೆ ದೈಹಿಕ ಸಾಮಥ್ರ್ಯವಿರಬೇಕು, ದೈಹಿಕ ಸಾಮಥ್ರ್ರ್ಯ ಚೆನ್ನಾಗಿದ್ದಲ್ಲಿ ಮನಸ್ಸು ಏನನ್ನು ಬೇಕಾದರೂ ಸಾಧಸಲು ಮುಂದಾಗಿರುತ್ತದೆ, ಆದ್ದರಿಂದಲೇ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಶಾಲಾ ಮಕ್ಕಳಿಗೆ ಆಟೋಟ ಚಟುವಟಿಕೆಗಳನ್ನು ಚಿಕ್ಕ ವಯಸ್ಸಿನಲ್ಲೇ ಬೆÀಳೆಸಿದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳು ಆಗಬಹುದು, ಈ ಹಿನ್ನಲೆಯಲ್ಲಿಯೇ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಿಸಿ ಮಕ್ಕಳ ದೈಹಿಕ ಸಾಮಥ್ರ್ಯ ಸಧೃಡವಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಕ್ಕಳ ಪ್ರೀತಿ ತಂದೆ ತಾಯಿಗಳ ನಂತರ ಶಾಲಾ ಶಿಕ್ಷಕರಿಗೆ ಮಾತ್ರ ಸಿಗುವಂತಹವುದು, ಮಕ್ಕಳು ಶಿಕ್ಷಕರನ್ನೇ ದೇವರು ಎಂಬ ಭಾವನೆಯಲ್ಲಿ ನೋಡುವುದರಿಂದ ಮಕ್ಕಳನ್ನು ಸರಿ ದಾರಿಯಲ್ಲಿ ನಡೆಯುವಂತೆ ಮಾಡುವ ಜವಾಬ್ದಾರಿ ನಮ್ಮಂತಹ ಶಿಕ್ಷಕರ ಮೇಲಿದೆ, ಕಣತಿ ಶಾಲೆಯ ಮಕ್ಕಳು ನನಗೆ ತೋರಿಸಿದ ಪ್ರೀತಿಯು ಎಂದೂ ಮರೆಯಲಾರದಂತಹವುದು, ಮಕ್ಕಳು ಉತ್ತಮ ಹುದ್ದೆ ಮತ್ತು ಉನ್ನತ ಸ್ಥಾನಗಳಿಗೆ ಹೋದಾಗ ಶಿಕ್ಷಕರಿಗೆ ಅದೇ ನೋಬಲ್ ಬಹುಮಾನ ಅಂತಹ ನೋಬಲ್ ಬಹುಮಾನವನ್ನು ಶಿಕ್ಷಕರು ತಮ್ಮ ಶಿಷ್ಯರಿಂದ ಮಾತ್ರ ಪಡೆಯಲು ಸಾಧ್ಯ ಎಂದು ಹೇಳಿದರು.
ನಿಮ್ಮ ಈ ಸನ್ಮಾನ, ಪ್ರೀತಿ ಚಿರಕಾಲ ನೆನಪಿನಲ್ಲಿರುವಂತಹವುದು, ನಾನು ಬದುಕಿರುವಷ್ಟು ಕಾಲ ನಿಮ್ಮೆಲ್ಲರ ಪ್ರೀತಿ ನನ್ನ ನೆನಪಿನಲ್ಲಿ ಉಳಿಯಲಿದೆ, ನಿಮ್ಮ ಈ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಹೇಳಿದರು.