ಏ.14ರ ಮಧ್ಯ ರಾತ್ರಿಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ

ತುಮಕೂರು- ಡಿಸೇಲ್ ಮೇಲಿನ ಸೆಸ್ ಕಡಿತ, ಅಂತರರಾಜ್ಯ ಆರ್.ಟಿ.ಓ.ಚೆಕ್ ಪೋಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ್ ಮುಚ್ಚುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.14ರ ಮಧ್ಯ ರಾತ್ರಿಯಿಂದ ರಾಜ್ಯದಾದ್ಯಂತ ಲಾರಿ ಮಾಲೀಕರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ಕೈಗೊಳಲಿದ್ದಾರೆ ಎಂದ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಎಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಲಾರಿ ಮಾಲೀಕರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಐದು ರೂ ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಇಂದಿನ ಪೈಪೆಪೋಟಿಯಲ್‍ಇಲಿ ನಾವು ತಕ್ಷಣವೇ ಬಾಡಿಗೆ ರೂಪದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ.ರಾಜ್ಯ ಸರಕಾರದ ನೀತಿಗಳಿಂದ ಸುಮಾರು ಆರು ಲಕ್ಷ ಲಾರಿಗಳ ಮಾಲೀಕರು ಮತ್ತು ಅವರ ಅವಲಂಬಿತರು ಬೀದಿಗೆ ಬೀಳುವುದು ಖಚಿತವಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಗಳಲ್ಲದೇ ,ರಾಜ್ಯ ಹೆದ್ದಾರಿಗಳಲ್ಲಿ ಸುಮಾರು 18 ಕಡೆಗಳಲ್ಲಿ ಟೋಲ್ ಕಟ್ಟಬೇಕಾಗಿದೆ. ಇದರಿಂದ ರೈತರು ಮತ್ತು ಲಾರಿ ಮಾಲೀಕರಿಗೆ ತೀವ್ರ ತೊಂದರೆಯಾಗಿದೆ.ದುಡಿಮೆಯ ಶೇ 40 ತೆರಿಗೆ,ಟೋಲ್ ರೂಪದಲ್ಲಿ ಕಟ್ಟಿ ಉಳಿದ ಹಣದಲ್ಲಿ ಗಾಡಿ ಕರ್ಚು, ವಾಹನದ ಬೀಡಿ ಭಾಗಗಳು, ಡ್ರೈವರ್,ಕ್ಲೀನರ್ ಸಂಬಳ ಇವುಗಳನ್ನು ಕೊಟ್ಟು ಮನೆಗೆ ಏನು ತೆಗೆದುಕೊಂಡು ಹೋಗುವುದು.ರಾಜ್ಯ ಹೆದ್ದಾರಿಗಳಲ್ಲಿ ಕೆಲವು ಕಡೆ ಇರುವ ರಸ್ತೆಗೆ ಬಣ್ಣ ಹೊಡೆದು ಟೋಲ್ ಕಟ್ಟಿಸಿಕೊಳ್ಳುತ್ತಿದ್ದಾರೆ.ನಾವು ಕಟ್ಟುವ ರೋಡ್ ಟ್ಯಾಕ್ಸ್ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು.

ಇಂದು ಲಾರಿ ಸೇರಿದಂತೆ ಎಲ್ಲಾ ವಾಹನಗಳ ದಾಖಲಾತಿ ಡಿಜಿಟಲ್ ಆಗಿದೆ.ಕುಳಿತಲ್ಲಿಯೇ ಒಂದು ವಾಹನದ ಸಂಪೂರ್ಣ ಮಾಹಿತಿ ಸಿಗುತ್ತದೆ. ಈಗಿದ್ದೂ ಅಂತರರಾಜ್ಯ ಗಡಿಗಳಲ್ಲಿ ಆರ್.ಟಿ.ಓ.ಚೆಕ್ ಪೆÇೀಸ್ಟ್ ಅಗತ್ಯವಿದೆಯೇ, 1928ರಲ್ಲಿ ಇದ್ದ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್ ತೆರವು ಮಾಡಲಾಗಿದೆ.ಹಲವು ಬಾರಿ ಮನವಿ ಮಾಡಿದರು ಸರಕಾರ ಅಂತರ ರಾಜ್ಯ ಆರ್.ಟಿ.ಓ ಚೆಕ್ ಪೋಸ್ಟ್ ತೆರವು ಮಾಡಿಲ್ಲ. ಇದರಿಂದ ಲಾರಿ ಸೇರಿದಂತೆ ಇತರೆ ವಾಣಿಜ್ಯ ವಾಹನಗಳ ಮಾಲೀಕರು ಮತ್ತು ಚಾಲಕರು ಸಾಕಷ್ಟು ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು.ಹಾಗೆಯೇ ಮೈಕ್ರೋ ಫೈನಾನ್ಸ್ ಗಳ ಹಾವಳಿ ಹೆಚ್ಚಾಗಿದ್ದು,ಇವರ ಕಿರುಕುಳದಿಂದ ಮೈಸೂರು ಹಾಗು ನಂಜನಗೂಡು ಎರಡು ಕಡೆ ಲಾರಿ ಮಾಲೀಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೂಡಲೇ ಸರಕಾರ ಮಧ್ಯಪ್ರವೇಶ ಮಾಡಿ ನಮ್ಮನ್ನು ರಕ್ಷಿಸಬೇಕು ಎಂದು ಜಿ.ಆರ್.ಷಣ್ಮಗಪ್ಪ ಒತ್ತಾಯಿಸಿದರು.

ಕರ್ನಾಟಕದ ಸಾರಿಗೆ ಇಲಾಖೆಯಿಂದ 9 ವರ್ಷದಿಂದ 13 ವರ್ಷ ತುಂಬಿದ ವಾಹನಗಳ ಎಫ್ ಸಿ ಗೆ 15 ಸಾವಿರ ಶುಶುಲ್ಕ ವಿಧಿಸುತ್ತಿರುವ ಪರಿಣಾಮ ಸಾಕಷ್ಟು ತೊಂದರೆಯಾಗುತ್ತಿದೆ.ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಸರಕಾರಕ್ಕೆ ಏಪ್ರಿಲ್ 14 ರ ಮಧ್ಯರಾತ್ರಿ ವರೆಗೆ ಸಮಯ ನೀಡುತ್ತಿದ್ದು, ಸರಕಾರ ಸ್ಪಂದಿಸದಿದ್ದರೆ. ಏಪ್ರಿಲ್ 15 ರ ಬೆಳಗ್ಗೆಯಿಂದ ಆರು ಲಕ್ಷ ಲಾರಿಗಳನ್ನು ರಸ್ತೆ ಗೆ ಇಳಿಸದೆ ಮುಷ್ಕರ ಪ್ರಾರಂಭಿಸುತ್ತೇವೆ.ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿ.ಆರ್.ಷಣ್ಮುಗಪ್ಪ ಮನವಿ ಮಾಡಿದರು.

ಕೇಂದ್ರ ಸರಕಾರದ ನೀತಿಗಳು ಗಬ್ಬೆದ್ದು ಹೋಗಿವೆ. 3 ಸಾವಿರ ಕೋಟಿ ರೂ ಹೂಡಿಕೆ ಮಾಡಿ ನಿರ್ಮಿಸಿದ ರಸ್ಯೆಗೆ 12 ಸಾವಿರ ಕೋಟಿ ಟೋಲ್ ಸಂಗ್ರಹಿಸಿದ್ದರು ಟೋಲ್ ತೆಗೆದಿಲ್ಲ.2008 ರಲ್ಲಿ ಕೇಂದ್ರದ ಕಾಯ್ದೆ ಪ್ರಕಾರ, ಒಮ್ಮೆ ಟೋಲ್ ಸಂಗ್ರಹ ಪೂರ್ಣಗೊಂಡ ನಂತರ ಕೇವಲ ನಿರ್ವಹಣಾ ವೆಚ್ಚವಾಗಿ ಶೇ 40 ರಷ್ಟು ಶುಲ್ಕ ಮಾತ್ರಪಡೆಯಬೇಕು.ಆದರೆ ಇದುವರೆಗೂ ದೇಶದಲ್ಲಿ ಜಾರಿಗೆ ಬಂದಿಲ್ಲ. ದೇಶದಲ್ಲಿ 996 ಟೋಲ್ ಗಳಿಂದ ಸಾವಿರಾರು ಹಣ ಕಟ್ಟಬೇಕಾಗಿದೆ. ಒಂದು ಕಿ.ಮಿ.6 ರೂ ಶುಲ್ಕ ಕಟ್ಟಬೇಕು. ಇದು ಬಾರಿ ಹೊಡೆತ ನೀಡಿದೆ ಎಚಿದರು.

ಟ್ರಕ್ ಚಾಲಕರು ಮಾಲೀಕರ ನಿರಂತರ ಪ್ರಯತ್ನದ ಭಾಗವಾಗಿಯೇ ರಾಜ್ಯ ಸರಕಾರ ಚಾಲಕರ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿದೆ.ಆದರೆ ಅನುದಾನ ನೀಡಿಲ್ಲ. ಇದಕ್ಕಾಗಿ ಶೇ 3 ರ ಸೆಸ್ ಸಂಗ್ರಹಿಸಿದ್ದು,ಆದು ಮೂರು ನೂರು ಕೋಟಿ ರೂಪಾಯಿಗಳು ಇದೆ. ಇದರ ಜೊತೆಗೆ ಇಎಸ್ ಐ ಮತ್ತು ಪಿಎಫ್ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ.ಇಂತಹ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಸಹ 2016 ರಿಂದ ಇದುವರೆಗೆ ನಾವು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿಲ್ಲ. ಆದರೆ ಸರಕಾರ ನಮ್ಮ ಕಷ್ಟ ಆರ್ಥ ಮಾಡಿಕೊಳ್ಳುತ್ತಿಲ್ಲ.ಹಾಗಾಗಿ ಮುಷ್ಕರಕ್ಕೆ ಮುಂದಾಗಿದ್ದೇವೆ. ಸರಕಾರಕ್ಕೆ ಏಪ್ರಿಲ್ 14 ಕೊನೆಯ ಗಡುವು ಆಗಿದೆ. ಅಷ್ಟರೊಳಗೆ ಬಗೆಹರಿಸದಿದ್ದರೆ, ಮುಷ್ಕರ ಅನಿವಾರ್ಯ . ಈಗಾಗಲೇ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.ಎರ್ ಪೆÇೀರ್ಟ್ ಟ್ತಾಕ್ಸಿ ಸಂಘ ಸಹ ನಮ್ಮ ಬೆಂಬಲಕ್ಕೆ ಬಂದಿದೆ ಎಂದು ಫೆಡರೇಷನ್ ಅಫ್ ಕರ್ನಾಟಕ ಸ್ಟೇಟ್ ಲಾರಿ ಮಾಲೀಕರು ಮತ್ತು ಎಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದರು.

ಅಲ್ ಇಂಡಿಯಾ ಕಾಂಗ್ರೆಸ್ ಲಾರಿ ಅಅಸೋಸಯೇಷನ್ ಅಧ್ಯಕ್ಷ ಮುಜಾಮಿಲ್ ಪಾಷ ಮಾತನಾಡಿ ಕರ್ನಾಟಕದಲ್ಲಿ ಡಿಸೇಲ್ ಬೆಲೆ ಹೆಚ್ಚಳದಿಂದ ಲಾರಿ ಮಾಲೀಕರು ಮತ್ತು ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ.ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಹಾಗಾಗಿಯೇ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ.ನುಗಧಿತ ಅವಧಿಯೊಳಗೆ ಸರಕಾರ ಕರೆದು ಮಾತುಕತೆ ನಡೆಸಿ, ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಅನಿವಾರ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳಾದ ಅಹಮದ್ ಖಾನ್, ಚಂದ್ರಣ್ಣ, ಪರ್ವೀಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *