ಒಂದೆರಡು ಕ್ಷೇತ್ರಗಳಲ್ಲಿ ಯಾರೂ ಊಹಿಸದ ಅಚ್ಚರಿಯ ಫಲಿತಾಂಶ…!

ತುಮಕೂರು : ಕತ್ತಲಾಗಿ ಬೆಳಕಾದರೆ ಮತ ಎಣಿಕೆ ನಡೆಯಲಿದೆ ತುಮಕೂರು ಜಿಲ್ಲೆಯ ಒಂದೆರಡು ಕ್ಷೇತ್ರಗಳಲ್ಲಿ ಯಾರೂ ಊಹಿಸದ ಅಚ್ಚರಿಯ ಫಲಿತಾಂಶ ಬರಲಿದೆ ಎಂಬ ಮಾತುಗಳು ಚರ್ಚೆಯಾಗುತ್ತಿವೆ.

ಮತದಾನದ ನಂತರ ಹಲವಾರು ಲೆಕ್ಕಚಾರಗಳು ನಡೆದು ಕೆಲವರು ಗೆದ್ದೇ ಬೀಗಿರುವುದಾಗಿ ತಮ್ಮ ಜಾಲ ತಾಣಗಳಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ, ಅಭಿಮಾನಿಗಳು ಬಹಳ ಸಂಭ್ರಮದಿಂದ ಪಟಾಕಿ ಹಚ್ಚಿ ಜೈಕಾರ ಹಾಕುವುದೊಂದೇ ಬಾಕಿ ಎಂದು ತಮ್ಮ ದೊರೆಗೆ ಕಣ್ಣು ಅಗಲಿಸಿ ಹೇಳುತ್ತಿದ್ದಾರೆ.

ತಮ್ಮ ಹಿಂಬಾಲಕರು, ಸಮೀಕ್ಷೆಗಳು ಹೇಳುವುದನ್ನು ಕೇಳಿ ಅಭ್ಯರ್ಥಿಗಳು ಹಿಗ್ಗಿ ಈರೇಕಾಯಿ ಆಗಿದ್ದಾರೆ, ಆದರೆ ಫಲಿತಾಂಶ ಏನಾಗುತ್ತದೆ ಎಂಬುದು ಇವಿಎಂನ್ನು ಬಿಚ್ಚಿದಾಗಲೇ ತಿಳಿಯುವುದು.

ಈಗಾಗಲೇ ಬೆಟ್ಟಿಂಗ್ ಸಹ ಜೋರಾಗಿ ನಡೆಯುತ್ತಿದ್ದು, ಒಂದೆರಡು ಕ್ಷೇತ್ರದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಅಚ್ಚರಿ ಮತ್ತು ಭಿನ್ನವಾದ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂಬ ಮಾತುಗಳು ಅಲ್ಲಲ್ಲಿ ನಡೆಯುತ್ತಾ ಇವೆ.
ಈ ಕ್ಷೇತ್ರಗಳಲ್ಲಿ ಕ್ಷಣ ಕ್ಷಣಕ್ಕೂ ಎದೆ ಬಡಿತ ಹೆಚ್ಚಿಸುವಂತಹ ಎರಡು ಅಭ್ಯರ್ಥಿಗಳ ಎಣಿಕೆಯಲ್ಲಿ ಮುನ್ನಡೆ ಸಾಧಿಸುತ್ತಾ ಕೊನೆಯಲ್ಲಿ ಅಲ್ಪ ಮತಗಳಿಂದ ಗೆದ್ದಿದ್ದೇವೆ ಎಂದು ಬೀಗುತ್ತಿರುವ ಅಭ್ಯರ್ಥಿಗಳಿಗೆ ಫಿನಿಷ್ ಆದರೂ ಆಗಬಹುದು ಎನ್ನಲಾಗುತ್ತದೆ.

ಇಂತಹ ಫಿನಿಷ್ ಕ್ಷೇತ್ರಗಳ ಹೆಸರು ನಾವೇಕೆ ಬರೆಯಬಾರದು ಎಂದರೆ ಅಲ್ಲಿ ಒಂದಷ್ಟು ಲೆಕ್ಕಚಾರಗಳು ಉಲ್ಟಾ ಆಗಬಹುದು, ಇಂತಹ ಫಿನಿಷ್ ಕ್ಷೇತ್ರಗಳು ಯಾವೆಂದು ಯಾರು ಹೇಳ ಬೇಕಿಲ್ಲ, ಅವು ಈಗಾಗಲೇ ಮತದಾರನಿಗೂ ತಿಳಿದ ಕ್ಷೇತ್ರಗಳೇ ಆಗಿವೆ.

ಕೆಲವರು ಸತ್ಯ ಗೊತ್ತಿದ್ದರೂ ತಮ್ಮ ನಾಯಕರಿಗೆ ಹೇಗೆ ಹೇಳುವುದೆಂದು ಮೇ 13ರ ಮಧ್ಯಾಹ್ನನದವರೆಗೂ ಜೈಕಾರಕ್ಕಾಗಿ ತಯಾರಿ ನಡೆಸುವ ನಟನೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಒಂದು ಮಾಹಿತಿಯ ಪ್ರಕಾರ ಗೆಲ್ಲೇ ಗೆಲ್ಲುತ್ತೇವೆ ಎಂದು ಉತ್ಸಾಹದಿಂದ ಇರುವ ಒಂದೆರಡು ಕ್ಷೇತ್ರಗಳಲ್ಲಿ ಅಚ್ಚರಿ ಫಲಿತಾಂಶ ಬಂದು ಹೀಗೂ ಅಗುವುದುಂಟಾ ಎಂಬ ಉದ್ಘಾರಗಳು ಏಳಬಹುದು.


ಒಟ್ಟಿನಲ್ಲಿ ಮೇ 13ರ ಬೆಳಿಗ್ಗೆ 8ಗಂಟೆಯ ತನಕ ಗೆಲುವಿನ ಕನಸ್ಸನ್ನು ಅಭ್ಯರ್ಥಿಗಳು ಕಾಣಬಹುದು.

Leave a Reply

Your email address will not be published. Required fields are marked *