ತುಮಕೂರು: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತ ಮೃತಪಟ್ಟು ಇನ್ನೊಬ್ಬ ಯುವಕ ಚಿಂತಾ ಜನಕವಾಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಪಾವಗಡ ತಾಲೂಕಿನ ಕಡಮಲಕುಂಟೆ ಗೇಟ್ ಬಳಿ ಘಟನೆ ಸಂಭವಿಸಿದೆ.
ಅಪಘಾತಕ್ಕೆ ಒಳಪಟ್ಟ ಯುವಕರು ಆಂಧ್ರದ ಚನ್ನೆಕೂತ್ತಪಲ್ಲಿ ಗ್ರಾಮದ ವಾಸಿಗಳು ಎಂಬುದಾಗಿ ತಿಳಿದು ಬಂದಿದೆ.
ಯಶಂತ್,ಈಶ್ವರ್ ,ರಾಮೂ ಎಂಬುವ ಮೂರು ಜನ ಯುವಕರು ದ್ವಿಚಕ್ರ ವಾಹನದಲ್ಲಿ ಪಾವಗಡದ ಶನೇಶ್ವರನ ದರ್ಶನಕ್ಕೆ ಆಂಧ್ರದಿಂದ ಬರುವ ವೇಳೆ ಬಲೇರೂ ವಾಹನ ಡಿಕ್ಕಿ ಹೂಡೆದು ಸ್ಥಳದಲ್ಲಿಯೇ ಇಬ್ಬರು ಯುವಕರು ಮೃತಪಟ್ಟರಿದ್ದಾರೆ.ಒಬ್ಬ ಯುವಕ ಹೆಚ್ಚನ ಚಿಕಿತ್ಸೆಗಾಗಿ ಆಂದ್ರದ ಅನಂತಪುರಕ್ಕೆ ರವಾನೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಬಲೇರೂ ವಾಹನ ಯುವಕರ ಮೇಲೆ ಹರಿದು ಅಲ್ಲಿಂದ ವಾಹನ ಸಮೆತ ಪಾರಾರಿಯಾಗಿದ್ದಾನೆ.ವ್ಯಕ್ತಿಯನ್ನು ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ಸಾರ್ವಜನಿಕರು ಹಿಡಿದು ಪೋಲಿಸರಿಗೆ ಒಪ್ಪಿಸಿರುತ್ತಾರೆ.
ಪಾವಗಡ ಪೋಲಿಸರು ಸ್ಥಳಕ್ಕೆ ದಾವಿಸಿ ಪ್ರಕರಣ ದಾಖಲಿಕೂಂಡಿದ್ದಾರೆ.