ತುಮಕೂರು : 2018ರಂತೆಯೇ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಅತಂತ್ರವಾಗಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷಗಳು ಹೇಳಿವೆ.
ರಿಪಬ್ಲಿಕ್ ಟಿವಿಯ ಪ್ರಕಾರ ಕಾಂಗ್ರೆಸ್ 94 ರಿಂದ 108 ಸ್ಥಾನಗಳನ್ನು ಪಡೆಯಲಿದೆ. ಬಿಜೆಪಿ ಪಕ್ಷ 85 ರಿಂದ 105 ಸ್ಥಾನಗಳನ್ನು ಗಳಿಸಲಿದೆ. ಜೆಡಿಎಸ್ 24 ರಿಂದ 32 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.
ಎಬಿಪಿ ನ್ಯೂಸ್ ಪ್ರಕಾರ, ಕಾಂಗ್ರೆಸ್ 81 ರಿಂದ 101 ಸ್ಥಾನ ಪಡೆದರೆ, ಬಿಜೆಪಿ ಪಕ್ಷ 66 ರಿಂದ 86 ಸ್ಥಾನಗಳನ್ನು, ಜೆಡಿಎಸ್ 20 ರಿಂದ 27 ಸ್ಥಾನ ಪಡೆಯಲಿದೆ.
ಸಿ-ವೋಟರ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 100 ರಿಂದ 112 ಸ್ಥಾನಗಳನ್ನು, ಬಿಜೆಪಿ 83 ರಿಂದ 95 ಸ್ಥಾನ ಮತ್ತು ಜೆಡಿಎಸ್ 21 ರಿಂದ 29 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ.
ಜೀ ನ್ಯೂಸ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 103 ರಿಂದ 118, ಬಿಜೆಪಿ ಪಕ್ಷ 79-94 ಹಾಗೂ ಜೆಡಿಎಸ್ 25 ರಿಂದ 33 ಸ್ಥಾನ ಪಡೆಯಲಿದೆ ಎಂದು ತಿಳಿಸಿದೆ.
ಪೆÇೀಲ್ ಸ್ಟ್ರಾಟ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 99-109 ಸ್ಥಾನ, ಬಿಜೆಪಿ 88 ರಿಂದ 98 ಹಾಗು ಜೆಡಿಎಸ್ 21 ರಿಂದ 26 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದೆ.
ಜನ್ ಕಿ ಬಾತ್ ಸಮೀಕ್ಷೆಯಂತೆ ಕಾಂಗ್ರೆಸ್ 91-106, ಬಿಜೆಪಿ 94 ರಿಂದ 117 ಹಾಗೂ ಜೆಡಿಎಸ್ 14 ರಿಂದ 24 ಸ್ಥಾನಗಳನ್ನು ಪಡೆಯಲಿವೆ ಎಂದು ತಿಳಿಸಿದೆ.
ಟಿವಿ-9 ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 100 ರಿಂದ 112, ಬಿಜೆಪಿಗೆ 83 ರಿಂದ 95, ಜೆಡಿಎಸ್ 21 ರಿಂದ 26 ಸ್ಥಾನಗಳು ಲಭಿಸಲಿವೆ ಎಂದು ಹೇಳಿದೆ.