ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ದನಗಳು ಹಾಗೂ ಹಸುಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಬೀಡಾಡಿ ದನಗಳನ್ನು ಹಿಡಿದು ಹೊರ ಸಾಗಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.
ಬೀಡಾಡಿ ದನಗಳಿಂದ ಅಪಘಾತ ಮತ್ತಿತರ ಅವಘಡಗಳಿಗೆ ಕಾರಣವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಬೀಡಾಡಿ ದನಗಳ ಮಾಲೀಕರು ತಾವು ಸಾಕಿರುವ ಹಸು ಮತ್ತು ದನಗಳನ್ನು ರಸ್ತೆಗಳಲ್ಲಿ ಬಿಡದೆ ತಮ್ಮ ಆವರಣದಲ್ಲಿ ಇಟ್ಟುಕೊಳ್ಳಬೇಕು. ಈ ಪ್ರಕಟಣೆ ಹೊರಡಿಸಿದ 3 ದಿನಗಳ ತರುವಾಯ ಕಾರ್ಯಾಚರಣೆ ನಡೆಸಿ ಹೊರಸಾಗಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗುವ ಯಾವುದೇ ರೀತಿಯ ಕಷ್ಟ-ನಷ್ಟಗಳಿಗೆ ಪಾಲಿಕೆ ಜವಾಬ್ದಾರಿಯಾಗುವುದಿಲ್ಲವೆಂದು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ವೀರೇಶ್ ಕಲ್ಮಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.