2024-25ನೇ ಶೈಕ್ಷಣಿಕ ಸಾಲಿನ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳ ಪ್ರವೇಶಾತಿಯ ಮೊದಲ ಹಂತವು ಪೂರ್ಣಗೊಂಡಿದ್ದು, ಕೆಲವು ವಿಭಾಗಗಳಲ್ಲಿ ಸೀಟುಗಳು ಬಾಕಿ ಇವೆ. ಆಸಕ್ತ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ವಿಭಾಗಗಳಿಗೆ ಅಕ್ಟೋಬರ್ 16ರ ಒಳಗೆ ಭೇಟಿ ನೀಡಿ ನೇರವಾಗಿ ಅರ್ಜಿಯನ್ನು ಸಲ್ಲಿಸುವುದು. ಅಕ್ಟೋಬರ್ 18ರಂದು ಆಯಾ ವಿಭಾಗಗಳಲ್ಲಿಯೇ ಕೌನ್ಸಿಲಿಂಗ್ ನಡೆಸಿ ಪ್ರವೇಶಾತಿ ನೀಡಲಾಗುವುದು ಎಂದು ವಿ.ವಿ.ಪ್ರಕಟಣೆ ತಿಳಿಸಿದೆ.