ತುಮಕೂರು: ಯಾವುದೇ ದೈಹಿಕ ನೋವು ಇಲ್ಲದೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಇಚ್ಚೆಪಡುವ ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ಅರವಳಿಕೆ ಚಿಕಿತ್ಸಾ ಒಂದು ಮೈಲಿಗಲ್ಲನ್ನು ಸಾಧಿಸಿದೆ. ವಿಶ್ವದ ಮನುಕುಲದ ನೋವಿನ ನಿವಾರಣೆಗಾಗಿ ಹುಟ್ಟಿದ ಅರಿವಳಿಕೆ(ಅನಸ್ತೇಶಿಯಾ) ಚಿಕಿತ್ಸೆ ವಿಧಾನ ವೈದ್ಯ ವಿಭಾಗದಲ್ಲಿ ವಿಸ್ಮಯ ಸೃಷ್ಠಿಸುತ್ತಿದೆ ಎಂದು ಸಾಹೇ ವಿವಿ ಉಪಕುಲಪತಿಗಳಾದ ಡಾ.ಬಿ.ಕೆ.ಲಿಂಗೇಗೌಡ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅರವಳಿಕೆ ಶಾಸ್ತ್ರ ವಿಭಾಗದದಲ್ಲಿ ಇಂದು (ಬುಧುವಾರ) ಎರ್ಪಡಿಸಲಾಗಿದ್ದ 178ನೇ ವಿಶ್ವ ಅರವಳಿಕೆ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾತನಾಡಿದರು.
ಹೆರಿಗೆ, ಎದೆಭಾಗದ ಶಸ್ತ್ರಚಿಕಿತ್ಸೆಗಳು, ಶ್ವಾಸಕೋಶ, ಮೂಳೆ ಮುರಿತ, ಕಣ್ಣುಗಳು, ಗರ್ಭಕೋಶ ಮತ್ತಿತರ ಅಂಗಗಳ ಮೇಲಿನ ಶಸ್ತ್ರಚಿಕಿತ್ಸೆಯು ನೋವಿಲ್ಲದೆ ನಡೆಯುತ್ತಿದೆ. ಅರಿವಳಿಕೆ ತಜ್ಞ ವೈದ್ಯರು ಕೇವಲ ಅರಿವಳಿಕೆ ಶಾಸ್ತ್ರವಲ್ಲದೇ ತುರ್ತುಚಿಕಿತ್ಸೆ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ, ಕೃತಕ ಉಸಿರಾಟ ತರಬೇತಿ, ಬೇಸಿಕ್ ಲೈಫ್ ಸಪೆÇೀರ್ಟ್ ಹಾಗೂ ಅಡ್ವಾನ್ಸ್‍ಡ್ ಕಾರ್ಡಿಯಾಕ್ ಲೈಫ್ ಸಪೆÇೀರ್ಟ್‍ಗಳ ತರಬೇತಿ ನೀಡುತ್ತಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಪ್ರಗತಿಯನ್ನು ಗುರುತಿಸಲು ರೋಗಿಗಳ ಆರೋಗ್ಯ ರಕ್ಷಣೆಯಲ್ಲಿ ಅವರು ವಹಿಸುವ ಪಾತ್ರವನ್ನು ಸ್ಮರಿಸುವ ದಿನವನ್ನು ವಿಶ್ವ ಅರಿವಳಿಕೆ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
178 ವರ್ಷಗಳಿಂದ ಈತರ್ ಉಪಯೋಗಿಸಿಕೊಂಡ ಅರವಳಿಕೆ ಚಿಕಿತ್ಸಾ ವಿಧಾನ ಇಂದು ಬಹಳಷ್ಟು ಸುಧಾರಣೆಗೊಂಡಿದ್ದು, ಮನುಷ್ಯನಿಗೆ ದೇಹದ ಯಾವುದೇ ಭಾಗದಲ್ಲಿ ತೊಂದರೆಯುಂಟಾದಾಗ ಐವಿ ಅನಸ್ತೇಷಿಯಾ, ಇನಲೇಷನ್ ಅನಸ್ತೇಷಿಯಾ ಸೇರಿದಂತೆ ಇತರೆ ವಿಧಾಣಗಳನ್ನು ಬಳಸಿಕೊಂಡು ಪ್ರಪಂಚದ ಎಲ್ಲಾ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಲಭ್ಯವಿರುವಂತೆ ನಮ್ಮ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ಈ ಚಿಕಿತ್ಸಾ ವಿಧಾನಗಳನ್ನ ಅಳವಡಿಸಿಕೊಳ್ಳಲಾಗಿದೆ ಎಂದು ಡಾ.ಬಿ.ಕೆ.ಲಿಂಗೇಗೌಡ ನುಡಿದರು.
ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅರವಳಿಕೆ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಬಿ. ಗಂಗಾಧರ್ ಅವರು ಮಾತನಾಡಿ ಅರವಳಿಕೆ ಶಾಸ್ತ್ರ ಇಂದು ಅನೇಕ ಮಹತ್ವ ಸಾಧನೆಗಳನ್ನು ಮಾಡಿದೆ. ಎಂತಹದ್ದೇ ಶಸ್ತ್ರ ಚಿಕಿತ್ಸೆಯಾಗಲಿ ಇಂದು ಅನಸ್ತೇಷಿಯಾ ರಾಮಬಾಣವಾಗಿದೆ. ಇದ್ದರಿಂದ ಶಸ್ತ್ರಚಿಕಿತ್ಸಾ ತಜ್ಞರಿಗೆ ವರದಾನವಾಗಿದೆ ಎಂದರು.
ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ ಪರಮೇಶ್ ಅವರು ಮಾತನಾಡಿ, ಅರಿವಳಿಕೆ ತಜ್ಞರು ಜೀವವನ್ನೆ ಒತ್ತೆಯಾಗಿಟ್ಟು ರೋಗಿಗಳನ್ನು ಉಳಿಸಿರುವುದನ್ನು ಕಾಣಬಹುದು. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಅರಿವಳಿಕೆ ಶಾಸ್ತ್ರ ತಾನೂ ಬೆಳೆಯುವುದಲ್ಲದೆ ಎಲ್ಲಾ ಶಸ್ತ್ರಚಿಕಿತ್ಸಾ ವಿಭಾಗಗಳನ್ನು ಬೆಳೆಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಾಹೇ ವಿವಿಯ ರಿಜಿಸ್ಟ್ರಾರ್ ಡಾ.ಎಂ.ಝೆಡ್.ಕುರಿಯನ್, ಪರೀಕ್ಷಾ ನಿಯಂತ್ರಕರರಾದ ಡಾ.ಗುರುಶಂಕರ್ ಜಿ, ಸಿದ್ದಾರ್ಥ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ.ಸಾಣಿಕೊಪ್ಪ, ವೈದ್ಯಕೀಯ ಅಧೀಕ್ಷಕರಾದ ಡಾ.ಎನ್.ಎಸ್. ವೆಂಕಟೇಶ್, ಮುಖ್ಯ ಆಡಾಳಿತಾಧಿಕಾರಿ ಡಾ.ಕಿರಣ್ ಕುಮಾರ್, ಅರವಳಿಕೆ ವಿಭಾಗದ ತಜ್ಞರಾದ ಡಾ.ಸಿ. ಸುರೇಶ್, ಐಎಸ್‍ಎ ತುಮಕೂರು ಚಾಪ್ಟರ್‍ನ ಡಾ.ಸಿ.ವಿ.ಸ್ವಾಮಿ, ತುಮಕೂರು ನಗರ ಜಿಲ್ಲಾ ಆಸ್ಪತ್ರೆಯ ಹಿರಿಯ ಅರವಳಿಕೆ ತಜ್ಞರಾದ ಡಾ.ಚಂದ್ರಶೇಖರ್ ಎಸ್, ಎಸ್‍ಐಎಂಎಸ್‍ನ ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಕಾವ್ಯಶ್ರೀ ಸೇರಿದಂತೆ ನುರಿತ ವೈದ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಂಡಿಯನ್ ಸೊಸೈಟಿ ಆಫ್ ಅನಸ್ತೀಸಿಯೋಜಿಸ್ಟ್ಸ್ ತುಮಕೂರು ಚಾಪ್ಟರ್, ಟಿ.ಬೇಗೂರಿನ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅರವಳಿಕೆ ವಿಭಾಗ, ತುಮಕೂರು ನಗರ ಜಿಲ್ಲಾ ಆಸ್ಪತ್ರೆಯ ಅರವಳಿಕೆ ವಿಭಾಗ, ಶ್ರೀದೇವಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನೆಯ ಅರವಳಿಕೆ ವಿಭಾಗ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅರವಳಿಕೆ ವಿಭಾಗಗಳ ಜಂಟಿ ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅರವಳಿಕೆ ದಿನಾಚರಣೆ ಅಂಗವಾಗಿ ಅರವಳಿಕೆ ಶಾಸ್ತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಹ್ವಾನಿತ ಮಾತುಕತೆಗಳು, ಚರ್ಚೆಗಳು, ವೈಜ್ಞಾನಿಕ ವಿಷಯ ಮಂಡನೆಗಳು, ಆಹ್ವಾನಿತ ಮಾತುಕತೆಗಳು, ಚರ್ಚೆಗಳು, ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಇದೇ ವೇಳೆ 178 ಕೆ,ಜಿ, ತೂಕದ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ವಿಶ್ವ ಅರವಳಿಕೆ ದಿನಾಚರಣೆಯ ಶುಭಾಶಯಗಳ ವಿನಿಮಯ ಮಾಡಿಕೊಳ್ಳಲಾಯಿತು.