ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದಿಂದ ನಡೆದ 18ನೇ ಘಟಿಕೋತ್ಸವದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನರಗನಹಳ್ಳಿ ಗ್ರಾಮದ ಶೋಭ ಎನ್. ಮತ್ತು ರಂಗಸ್ವಾಮಿ ಸಿ.ಎನ್. ದಂಪತಿಯ ಮಗಳು ಜಯಶ್ರೀ ಎನ್.ಆರ್, ಎಂ.ಎಸ್ಸಿ ಪುಡ್ ಅಂಡ್ ನ್ಯೂಟ್ರೀಷನ್ ವಿಷಯದಲಿ ವಿಶ್ವ ವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ಕರ್ನಾಟಕ ರಾಜ್ಯಪಾಲರಾದ ತ್ಯಾವರ್ ಚಂದ್ ಗೆಹಲ್ಲೋಟ್ ರವರಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ತಂದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಗನ ನವಿಲೆ ಸರ್ಕಾರಿ ಆಸ್ಪತ್ರೆಯಲ್ಲಿ ಸಂಕಷ್ಟ ಸ್ಥಿತಿಯಲ್ಲಿರುವ ಜೀವಗಳ ಅತ್ಯಮೂಲ್ಯ ಕ್ಷಣಗಳನ್ನು ತನ್ನ ವೃತ್ತಿ ಬದ್ದತೆಗೆ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತ ಅದೇಷ್ಟೋ ಜೀವಗಳನ್ನು ಪರೋಕ್ಷವಾಗಿ ಕಾಪಾಡುವ ಅಂಬುಲೆನ್ಸ್ ವೃತ್ತಿ ಮಾಡಿಕೊಂಡೆ ತನ್ನ ಮಗಳ ಸುಂದರ ಭವಿಷ್ಯಕ್ಕೆ ಉನ್ನತ ಶಿಕ್ಷಣದ ಕನಸು ಕಂಡ ರಂಗಸ್ವಾಮಿಗೆ ಮಗಳು ಚಿನ್ನದ ಪದಕ ಪಡೆದ ಕ್ಷಣ ನನ್ನ ಜೀವನದ ಸಾರ್ಥಕ ಕ್ಷಣಗಳೆಂದು ಬಾವುಕದಿಂದ ಆನಂದಿಸಿದರು.
ಮೂಲತ: ರೈತ ಕುಟುಂಬದ ಹಿನ್ನೆಲೆ ಹೊಂದಿದ ರಂಗಸ್ವಾಮಿ ಕುಟುಂಟ ಕೃಷಿಯ ಜೊತೆಗೆ ಜೀವಗಳ ಅತ್ಯಮೂಲ್ಯ ಕ್ಷಣಗಳನ್ನು ಉಳಿಸುವ ಕಾಯಕ ಲಭಿಸಿ ಅದರಲ್ಲೇ ನಿಷ್ಟೆಯಿಂದ ಕಾಯಕ ಮಾಡುತ್ತಿದ್ದ ಶೋಭ ರಂಗಸ್ವಾಮಿ ದಂಪತಿಗೆ ಮಗಳ ಸಾಧನೆ ತನ್ನ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ವೃತ್ತಿ ಬದ್ದತೆಗೆ ಸಂದ ಕ್ಷಣವಾಗಿದೆ ಎಂದರು.
ಜಯಶ್ರೀ ಎನ್. ಆರ್. ಪ್ರಾಥಮಿಕ ಶಿಕ್ಷಣವನ್ನು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ನಲ್ಲಿರುವ ಅದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಜಿಲ್ಲೆಯ ಶಿವಾರಗುಡ್ಡದಲ್ಲಿರುವ ಕೇಂದ್ರ ಸರ್ಕಾರದ ಜವಹಾರ ನವೋದಯ ಶಾಲೆಗೆ ಆಯ್ಕೆಯಾಗಿ ಪಿಯುಸಿ ವರೆಗೆ ಶಿಕ್ಷಣ ಮುಗಿಸಿದರು. ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ಮೈಸೂರಿನ ಪ್ರತಿಷ್ಠಿತ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಶಿಕ್ಷಣ ಮುಗಿಸಿದ ಜಯಶ್ರೀ ಉನ್ನತ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಡ್ಡಿದ್ದು ತುಮಕೂರು ವಿಶ್ವ ವಿದ್ಯಾನಿಲಯದ ಎಂ.ಎಸ್ಸಿ ವಿಭಾಗದ ಎಂ.ಎಸ್ಸಿ ಪುಡ್ ಅಂಡ್ ನ್ಯೂಟ್ರೀಷನ್ ವಿಷಯ.
ತುಮಕೂರು ವಿಶ್ವ ವಿದ್ಯಾನಿಲಯದ 18ನೇ ಘಟಕೋತ್ಸವದಲ್ಲಿ ಚಿನ್ನದ ಪದಕ ಪಡೆದ ಜಯಶ್ರೀ ಎನ್. ಆರ್. ಮುಂದೆ ಪ್ರತಿಷ್ಟಿತ ಕಂಪನಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ. ಜಯಶ್ರೀಯ ಈ ಸಾಧನೆಗೆ ಕುಟುಂಬ ಸದಸ್ಯರು, ಗ್ರಾಮಸ್ಥರು. ಹಿರಿಯರು. ಸ್ನೇಹಿತರು ಶುಭ ಹಾರೈಸಿದ್ದಾರೆ.