ತುಮಕೂರು : ಶವ ಸಾಗಿಸಲು ಅಂಬ್ಯುಲೆನ್ಸ್ ಸಿಗದ ಕಾರಣ ಮಕ್ಕಳೇ ತಂದೆಯ ಶವವನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳರಿಸಿಕೊಂಡು ತೆಗೆದುಕೊಂಡು ಹೋದ ವಿದ್ರಾವಕ ಘಟನೆ ಪಾವಗಡ ತಾಲ್ಲೂಕಿನಲ್ಲಿ ನಡೆದಿದೆ.
ಇಷ್ಟು ದಿನ ಉತ್ತರ ಭಾರತದಲ್ಲಿ ಶವ ಸಾಗಿಸಲು ವಾಹನ ಸೌಲಭ್ಯ ದೊರೆಯದೆ ಅಥವಾ ಬಡತನದಿಂದಲೋ ಶವಗಳನ್ನು ಹೆಗಲ ಮೇಲೆ ಹೊತ್ತು ಸಾಗಿದ ಮನ ಕಲಕುವ ಸುದ್ದಿಗಳನ್ನು ಜಾಲ ತಾಣದಲ್ಲಿ ನೋಡಿದ್ದೆವು, ಆದರೆ ಇದೀಗ ತುಮಕೂರು ಜಿಲ್ಲೆಯಲ್ಲಿಯೇ ಇಂತಹವುದೊAದು ಘಟನೆ ನಡೆದಿದ್ದು, ಅಭಿವೃದ್ಧಿ ರಾಜ್ಯ, ರಾಜ್ಯದ ಅಭಿವೃದ್ಧಿ ಜಿಲ್ಲೆ ಎನ್ನಿಸಿಕೊಂಡಿರುವ ತುಮಕೂರು ಜಿಲ್ಲೆಯಲ್ಲಿಯೇ ಶವ ಸಾಗಿಸಲು ಅಂಬ್ಯುಲೆನ್ಸ್ ಅಥವಾ ವಾಹನ ಸಿಗದೆ ಬೈಕಿನಲ್ಲಿ ಮಕ್ಕಳು ತಂದೆಯ ಶವವನ್ನು ಸಾಗಿಸಿದ್ದಾದರೆ.
ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೆಪ್ಟಂಬರ್ 18ರ ಬುಧವಾರ ಮಧ್ಯಾಹ್ನ ನಡೆದಿದೆ. ಪಾವಗಡ ತಾಲ್ಲೂಕಿನ ದಳವಾಯಿಹಳ್ಳಿ ಗ್ರಾಮದ ಹೊನ್ನೂರಪ್ಪ(80 ವರ್ಷ) ಎಂಬುವರು ವಯೋ ಸಹಜ ಕಾಯಲೆಯಿಂದ ಬಳಲುತ್ತಿದ್ದರಿಂದ ವೈ.ಎನ್.ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಹೊನ್ನೂರಪ್ಪ ಮೃತಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಅಂಬ್ಯುಲೆನ್ಸ್ ಸಿಗದ ಕಾರಣ ತಮ್ಮ ಬೈಕ್‌ನಲ್ಲಿಯೇ ಶವವಸನ್ನು ಊರಿಗೆ ತೆಗೆದುಕೊಂಡು ಹೋಗಿದ್ದಾರೆ, ತುಮಕೂರು ಜಿಲ್ಲೆಯಲ್ಲಿ ಇಂತಹವುದೊAದು ಘಟನೆ ನಡೆದಿರುವುದು ತುಂಬಾ ನೋವಿನ ಸಂಗತಿ ಎನ್ನಲಾಗುತ್ತಿದ್ದು, ಶವ ಸಾಗಿಸಲೂ ಅಂಬ್ಯುಲೆನ್ಸ್ ಸಿಗದಂತಹ ಪರಿಸ್ಥಿತಿ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಇದೆಯೇ?
ಮಾನವೀಯ ನೆಲೆಯಿಂದಾದರೂ ಮನುಷ್ಯ ಮೃತಪಟ್ಟಾಗಲಾದರೂ ಗೌರವ ಸಿಗದಂತಹ ಪರಿಸ್ಥಿತಿ ತುಮಕೂರು ಜಿಲ್ಲೆ ಬಂದಿದೆಯೇ? ಆನ ಪ್ರತಿನಿಧಿಗಳು ಇದಕ್ಕೆ ಏನು ಉತ್ತರ ನೀಡ ಬಲ್ಲರು, ಅವರ ಬಳಿ ಹಣ ಇರಲಿಲ್ಲ, ಅವರು ಕೇಳಲಿಲ್ಲ, ಆರೋಗ್ಯ ಇಲಾಖೆಯ ತಪ್ಪಿಲ್ಲ ಎಂದಷ್ಟೇ ಹೇಳಬಲ್ಲರು! ಜನ ಪ್ರತಿನಿಧಿಗಳು ಸತ್ತಾಗ ಅಬ್ಬಬ್ಬಾ ಅವರಿಗೆ ಅಂಬಾರಿಯAತಹ ವಾಹನ, ಹೂವಿನ ತೋರಣ. ಈಗಲಾದರೂ ಜಿಲ್ಲಾಢಳಿತ, ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ.