ತುಮಕೂರು : ನಗರದ ಬಿ.ಹೆಚ್.ರಸ್ತೆಯ ತೋಟಗಾರಿಕೆ ಇಲಾಖೆ ರಸ್ತೆಯಲ್ಲಿರುವ ಜಿಲ್ಲಾ ಬಲಿಜ ಸಂಘದ ವತಿಯಿಂದ ಜುಲೈ 27 ರಂದು ನಡೆಯುವ ಶ್ರೀ ಯೋಗಿ ನಾರೇಯಣ ಯತೀಂದ್ರರ 190ನೇ ವರ್ಷದ ಜೀವ ಸಮಾಧಿ ಮಹೋತ್ಸವದ ಅಂಗವಾಗಿ ಬಲಿಜ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2024-25 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಡಿಪೆÇ್ಲೀಮ, ಪದವಿ ಹಾಗೂ ಬಿ.ಇ., ಎಂ.ಬಿ.ಬಿ.ಎಸ್. ಸೇರಿದಂತೆ ಇತರೆ ಉನ್ನತ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೇ. 80 ಕ್ಕೂ ಹೆಚ್ಚು ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.85 ಕ್ಕೂ ಹೆಚ್ಚು ಅಂಕ ಪಡೆದ ಬಲಿಜ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪತ್ರ, ಆಧಾರ್ ಕಾರ್ಡ್ ಮತ್ತು ತಾಲೂಕು ಬಲಿಜ ಸಂಘದ ಅಧ್ಯಕ್ಷರಿಂದ ದೃಢೀಕರಿಸಿದ ಅರ್ಜಿಗಳನ್ನು ಜುಲೈ 20ರ ಒಳಗಾಗಿ ತುಮಕೂರು ಜಿಲ್ಲಾ ಬಲಿಜ ಸಂಘದ ಕಚೇರಿಗೆ ತಲುಪಿಸಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಮಧುಗಿರಿ ಜಯರಾಮ್ ಮೊ: 9741669937 ಹಾಗೂ ಕೆ. ಶ್ರೀನಿವಾಸ್ ಮೊ : 9964231713 ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಹೆಚ್. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.