ತುಮಕೂರು: ದಕ್ಷಿಣ ಭಾರತದಲ್ಲಿ ಅನೇಕ ಕಾಯಿಲೆಗಳಿಗೆ ಗುಣಪಡಿಸುವಂತಹ ಅತ್ಯಾಧುನಿಕ ತಂತ್ರಜ್ಞಾನ, ನುರಿತ ತಜ್ಞ ವೈದ್ಯರ ತಂಡದೊಂದಿಗೆ ಹೊಸ ಹೊಸ ಆವಿμÁ್ಕರಗಳಿಗೆ ಕಾರಣವಾಗಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಚಲಿಸಿದಾರ್ಥ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಹತ್ತು ಹಲವು ಆರೋಗ್ಯ ಕಾರ್ಯಕ್ರಮ ಕುರಿತಂತೆ ಕಾರ್ಯಗಾರಗಳನ್ನ ರೂಪಿಸಿದ್ದು ಮಾನವನ ಜೀವನಶೈಲಿ ಬದಲಾದಂತೆ ಕಾಯಿಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನ ಹೊರವಲಯದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಎಲ್ಲಾ ವಯಸ್ಕರಲ್ಲಿ ಕಾಡುತ್ತಿರುವ ಉಚಿತವಾಗಿ ಹರ್ನಿಯಾ ಕಾಯಿಲೆ ಕುರಿತಾದ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್ ಪ್ರಭಾಕರ್ ಅವರು ತಿಳಿಸಿದ್ದಾರೆ.
ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು ಹಾಸ್ಪಿಟಲ್ ಅಸೋಸಿಯೇಷನ್ ಆಫ್ ಸರ್ಜನ್ ಆಫ್ ಇಂಡಿಯಾ ತುಮಕೂರು ಸಿಟಿ ಬ್ರಾಂಚ್ ಇವರ ಸಹಯೋಗದೊಂದಿಗೆ ಏ. 23ರಂದು ಮೆಡಿಕಲ್ ಕಾಲೇಜಿನ ನಾಗಾರ್ಜುನ ಹಾಲ್ ನಲ್ಲಿ ಬೆ.9 ಗಂಟೆಗೆ ಅರ್ನಿಯಾ ಸರ್ಜರಿ ಕುರಿತಾದ ಕಾರ್ಯಾಗಾರದಲ್ಲಿ ಮಾಡ್ರನ್ ಹರ್ನಿಯಾ ಸರ್ಜರಿ ಟೆಕ್ನಿಕ್ಸ್ ಕುರಿತಂತೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಡಾ.ಮುರುಳಿಧರ್ ಎಸ್ ಕತ್ತಲಗೇರಿ, ಸಿದ್ದಗಂಗಾ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಪೆÇ್ರಫೆಸರ್ ಡಾ. ಚಂದ್ರಶೇಖರ್ ಎಂ ಇವರುಗಳು ಹರ್ನಿಯಾ ಕಾಯಿಲೆ ಕುರಿತಾದ ಇತ್ತೀಚಿನ ಸಂಶೋಧನಾತ್ಮಕ ಬೆಳವಣಿಗೆ ಹಾಗೂ ಹೊಸ ರೀತಿಯ ಚಿಕಿತ್ಸ ವಿಧಾನಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಈ ಕಾರ್ಯದಲ್ಲಿ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಾಯೇ ವಿವಿಯ ಉಪಕುಲಪತಿಗಳಾದ ಡಾ.ಕೆ.ಬಿ. ಲಿಂಗೇಗೌಡ, ಕುಲಸಚಿವರಾದ ಡಾ ಅಶೋಕ್ ಮೆಹ್ತಾ, ಪರೀಕ್ಷಾಂಗ ನಿಯಂತ್ರಕರಾದ ಡಾ.ಗುರು ಶಂಕರ್ ಜಿ, ಕುಲಾಧಿಪತಿಗಳ ಆಡಳಿತ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ ಲ, ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಎಂ ಬಿ ಸಾನಿಕೊಪ್ಪ, ಡಾ.ವೆಂಕಟೇಶ್, ಡಾ.ರಾಜೇಶ್ವರಿ ದೇವಿ, ಕಿರಣ್ ಕುಮಾರ್, ಪ್ರಶಾಂತ್, ಚೇತನ್ ಸೇರಿದಂತೆ ವಿವಿಧ ಆಸ್ಪತ್ರೆಯ ನುರಿತ ವೈದ್ಯರುಗಳು ಕಾರ್ಯಗಾರದಲ್ಲಿ ಭಾಗವಹಿಸಲಿದ್ದು ಉಚಿತ ಹರ್ನಿಯಾ ಕಾಯಿಲೆ ಕುರಿತಾದ ಚಿಕಿತ್ಸಾ ವಿಧಾನ ಮತ್ತು ಚಿಕಿತ್ಸೆಗೆ ಬೇಕಾಗುವ ಮಾಹಿತಿ ನೀಡಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ ಎಂದು ಉಪ ಪ್ರಾಂಶುಪಾಲರಾದ ಡಾ.ಜಿ ಎನ್ ಪ್ರಭಾಕರ್ ತಿಳಿಸಿದ್ದಾರೆ.