ಮನೆಗಳ್ಳನ ಬಂಧನ-ಒಡವೆ ಹಣ ವಶ

ತುಮಕೂರು : ಮನೆಯಲ್ಲಿ ಹಣ ಮತ್ತು ಒಡವೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 7ರಂದು ಶಿರಾ ತಾಲ್ಲೂಕ್ ಪಟ್ಟನಾಯಕನಹಳ್ಳಿ ಪೆÇಲೀಸ್ ಠಾಣಾ ವಾಪ್ತಿಯ ಚಂಗಾವರ ಗ್ರಾಮದ ಸಿದ್ದಲಿಂಗಮ್ಮರವರ ಮನೆಯ ಬೀರುವಿನಲ್ಲಿದ್ದ 20,000/- ರೂ ನಗದು 4 ಗ್ರಾಂನ ಮಾಟಿ, 12 ಗ್ರಾಂನ ಕೊರಳಚೈನ್, ಮಾಂಗಲ್ಯಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆಂದು ಪೊಲೀಸ್ ಠಾನೆಗೆ ದೂರು ನೀಡಲಾಗಿತ್ತು.

ಜಿಲ್ಲಾ ಪೆÇಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲಾ ಹೆಚ್ಚುವರಿ ಪೆÇಲೀಸ್ ಅಧೀಕ್ಷಕರವರುಗಳಾದ ವಿ.ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿದಲ್ಲಿ, ಶಿರಾ ಉಪವಿಭಾಗದ ಉಪಾಧೀಕ್ಷಕರಾದ ಬಿ.ಕೆ ಶೇಖರ್ ಮಾರ್ಗಸೂಚನೆ ಮೇರೆಗೆ, ಶಿರಾ ಗ್ರಾಮಾಂತರ ವೃತ್ತ ನಿರೀಕ್ಷರಾದ ಕೆ.ಆರ್ ರಾಘವೇಂದ್ರ, ಪಟ್ಟನಾಯಕನಹಳ್ಳಿ ಪೆÇಲೀಸ್ ಠಾಣೆಯ ಪಿಎಸ್ ಐ ಭವಿತ.ಎನ್.ಎಂ, ಪಿ.ಎಸ್.ಐ-2 ಸುಹೇಲ್ ಅಹಮದ್ ಸಿಬ್ಬಂದಿಗಳಾದ ಹನುಮಂತಚಾರ್, ಗುಂಡನಾಯ್ಕ, ಗಣೇಶ, ಶ್ರೀನಿವಾಸ.ಆರ್, ಹಾಗೂ ನಟರಾಜ ನಾಯಕ ಮತ್ತು ಶಿರಾ ಪೆÇಲೀಸ್ ಠಾಣೆಯ ಜಗದೀಶ್, ಗೋಪಿನಾಥ ರವರನ್ನೊಳಗೊಂಡ ವಿಶೇಷ ತಂಡವು ಫೆಬ್ರವರಿ 11ರಂದು ಪಾವಗಡ ಕಸಬಾದ ಯರಪಾಳ್ಯದ ಮಗ್ಗದ ಕೆಲಸ ಮಾಡುವ ಆರೋಪಿ ಶ್ರೀನಿವಾಸ.ಜಿ.ಎಂಬುವನನ್ನು ಪತ್ತೆ ಮಾಡಿ, 1,45,000/-ರೂ ಬೆಲೆಬಾಳುವ ಬಂಗಾರದ ಮಾಟಿ, ಕೊರಳಚೈನ್ ಮತ್ತು ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *