ತುಮಕೂರು: ಬೆಂಗಳೂರು ವಿಭಾಗೀಯ ರೈಲ್ವೆ ಮಂಡಳಿ ನಿರ್ದೇಶಕರಾಗಿ ಇತ್ತೀಚೆಗೆ ನೇಮಕವಾದ ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಪಿ.ಮಲ್ಲಸಂದ್ರ ಶಿವಣ್ಣ ಅವರನ್ನು ಜಿಲ್ಲಾ ಸಂಘದ ಮುಖಂಡರು ಅಭಿನಂದಿಸಿ ಶುಭಕೋರಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಲ್ಲಸಂದ್ರ ಶಿವಣ್ಣ, ಜಿಲ್ಲೆಯಲ್ಲಿ ಈಡಿಗ ಸಮಾಜದಂತಹ ಕಡಿಮೆ ಜನಸಂಖ್ಯೆ ಇರುವ ಸಮಾಜದವರು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಿ ಗೆಲುವು ಪಡೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರ. ಹೀಗಿರುವಾಗ ಸರ್ಕಾರಗಳು ಸಣ್ಣ ಸಮಾಜಗಳ ಮುಖಂಡರನ್ನು ಗುರುತಿಸಿ ವಿವಿಧ ಸ್ಥಾನಮಾನಗಳಿಗೆ ನೇಮಕ ಮಾಡಿ ಅಧಿಕಾರ ನೀಡಿ ನೆರವಾಗಬೇಕು ಎಂದು ಹೇಳಿದರು.

ಜಿಲ್ಲಾ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಅಜಯ್ಕುಮಾರ್, ಅಧ್ಯಕ್ಷ ಎಂ.ನಾಗರಾಜು, ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ನರಸಿಂಹಮೂರ್ತಿ, ಚಂದ್ರಕಲಾ ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಖಜಾಂಚಿ ಹೆಚ್.ಎಂ.ಕುಮಾರ್, ಜಂಟಿ ಕಾರ್ಯದರ್ಶಿ ಎಲ್ಐಸಿ ನಾರಾಯಣ್, ನಾರಾಯಣಗುರು ಸಮಾಜಂ ಉಪಾಧ್ಯಕ್ಷ ಯೋಗಾ ರಾಜನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಸೇರಿದಂತೆ ವಿವಿಧ ತಾಲ್ಲೂಕು ಸಂಘಗಳ ಪದಾಧಿಕಾರಿಗಳು, ಸಮಾಜದ ಪ್ರಮುಖರು ಹಾಜರಿದ್ದರು.