ರೈತರು-ಕೃಷಿ ವಿಜ್ಞಾನಿಗಳು ಪರಿಶ್ರಮದ ಫಲವಾಗಿ ದೇಶ ಆಹಾರದಲ್ಲಿ ಸ್ವಾವಲಂಭನೆ ಸಾಧಿಸಲು ಸಾಧ್ಯವಾಯಿತು-ಡಾ.ಜಿ.ಪರಮೇಶ್ವರ್

ತುಮಕೂರು:ಭಾರತ 60-70ರ ದಶಕದಲ್ಲಿ ದೇಶದ ಜನರಿಗೆ ಒಂದೊತ್ತಿನ ಊಟ ನೀಡಲು ಕಷ್ಟಪಡುತಿದ್ದ ಕಾಲದಲ್ಲಿ ನಮ್ಮ ನೆರವಿಗೆ ಬಂದಿದ್ದು ರೈತರು ಮತ್ತು ಕೃಷಿ ವಿಜ್ಞಾನಿಗಳು, ಇವರ ಪರಿಶ್ರಮದ ಫಲವಾಗಿ ಕೇವಲ 20 ವರ್ಷಗಳಲ್ಲಿಯೇ ದೇಶ ಆಹಾರದಲ್ಲಿ ಸ್ವಾವಲಂಭನೆ ಸಾಧಿಸಲು ಸಾಧ್ಯವಾಯಿತು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ತೋಟಗಾರಿಕಾ ಇಲಾಖೆ ಹಾಗೂ ತುಮಕೂರು ಜಿಲ್ಲಾ ತೋಟಗಾರಿಕೆ ಸಂಘ(ರಿ) ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಹಸಿರು ಕ್ರಾಂತಿಯ ಫಲವಾಗಿ ಭಾರತದಲ್ಲಿ ಕ್ಷಾಮ ಮತ್ತು ಹಸಿವು ನೀಗಿತು.ಇಂದಿನ ಫಲಪುಷ್ಪ ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆಯ ಜೊತೆಗೆ, ವಿಜ್ಞಾನ, ತಂತ್ರಜ್ಞಾನದ ಅವಿಷ್ಕಾರಗಳನ್ನು ಪ್ರದರ್ಶಿಸುವ ಮೂಲಕ ಜ್ಞಾನ ಮತ್ತು ಅನುಭವದ ಸಮ್ಮೀಲನಕ್ಕೆ ಅವಕಾಶ ಕಲ್ಪಸಲಾಗಿದೆ ಎಂದರು.

ಹಸಿರು ಕ್ರಾಂತಿಯಿಂದ ಭಾರತದ ಜನರ ಹಸಿವು ನೀಗಿದರೆ, ಕ್ಷೀರ ಕ್ರಾಂತಿಯಿಂದ ರೈತರಿಗೆ ಪೂರಕ ಆದಾಯ ಬರಲು ಆರಂಭವಾಯಿತು.ನಾನು ಹುಡುಗನಾಗಿದ್ದಾಗ ಕೇವಲ ದೊಡ್ಡ ಪಟ್ಟಣದ ಅಂಗಡಿಗಳಲ್ಲಿ ನೋಡುತ್ತಿದ್ದ ವಿದೇಶಿ ಹಣ್ಣುಗಳನ್ನು ಇಂದು ನಮ್ಮೂರಿನಲ್ಲಿಯೇ ಬೆಳೆಯಲಾಗುತ್ತಿದೆ. ಇದರಿಂದ ರೈತರ ಆದಾಯವೂ ಹೆಚ್ಚಿದೆ.ತುಮಕೂರು ಜಿಲ್ಲೆಯ ಸುಮಾರು 6.50 ಲಕ್ಷ ವ್ಯವಸಾಯ ಯೋಗ್ಯ ಭೂಮಿಯಲ್ಲಿ ಶೇ50ರಷ್ಟು ತೋಟಗಾರಿಕಾ ಬೆಳೆಗಳೇ ಇವೆ. ಬೆಂಗಳೂರು ಸುತ್ತಮುತ್ತ ಸುಮಾರು 150ಕೆ.ಮಿ.ಸುತ್ತಳತೆಯಲ್ಲಿ ಅನೇಕ ಪೌಲಿ ಹೌಸ್‍ಗಳಲ್ಲಿ ವಿದೇಶಿ, ಹೂವು, ಹಣ್ಣುಗಳನ್ನು ಬೆಳೆದು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ.ಕರ್ನಾಟಕದಲ್ಲಿ 9 ವಿವಿಧ ಬಗೆಯ ಆಗ್ರೋ ಕ್ಲೈಮೆಟ್ ಜ್ಹೋನ್ ಇರುವುದು ವಿಶೇಷ. ಬೇರೆ ಯಾವ ರಾಜ್ಯದಲ್ಲಿಯೂ ಈ ರೀತಿಯ ವಿಶೇಷತೆಗಳಿಲ್ಲ. ಇತ್ತೀಚಿನ ದಿನಗಳಲ್ಲಿ ಟೇರೆಸ್ ಗಾರ್ಡನ್ ಬಹಳ ಪ್ರಚಾರದಲ್ಲಿದೆ.ಇವುಗಳ ಜನರಿಗೆ ಒಂದಷ್ಟು ಪೂರಕ ಆದಾಯ ತಂದುಕೊಡುವಲ್ಲಿ ಸಹಕಾರಿಯಾಗಿವೆ ಎಂದು ಡಾ.ಜಿ.ಪರಮೇಶ್ವರ್ ನುಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿಇಓ ಜಿ.ಪ್ರಭು,ಕೃಷಿಯ ಜೊತೆಗೆ, ನಮ್ಮ ಸಂಸ್ಕøತಿ, ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಸಾಂಸ್ಕøತಿಕ ನಗರಿ ಸಿದ್ದಗೊಂಡಿದೆ. ಶಿಕ್ಷಣ ಕಾಶಿಯತ್ತ ದಾಪುಗಾಲು ಇಡುತ್ತಿರುವ ತುಮಕೂರು ಸಾಂಸ್ಕøತಿಕವಾಗಿ ಬೆಳೆಯಲು ಎಲ್ಲಾ ರೀತಿಯ ಸಹಕಾರವನ್ನು ಸರಕಾರ ನೀಡುತ್ತಿದ್ದು, ಇದರ ದ್ಯೋತಕವಾಗಿ ಇಂದಿನ ತೋಟಗಾರಿಕಾ ಫಲಪುಷ್ಪ ಪ್ರದರ್ಶನ ಕಂಡು ಬಂದಿದೆ.ಕೃಷಿ, ತೋಟಗಾರಿಕೆಯ ಜೊತೆಗೆ, ರೈತರೊಂದಿಗೆ ನೇರ ಸಂಪರ್ಕ ಹೊಂದಿರುವ ರೇಷ್ಮೆ,ಹೈನುಗಾರಿಕೆ,ಪಶುಸಂಗೋಪನೆ,ಮೀನುಗಾರಿಕೆ,ಕೈಮಗ್ಗ ಮತ್ತು ಜವಳಿ ಸೇರಿದಂತೆ ಹಲವಾರು ಇಲಾಖೆಗಳು ತಮ್ಮ ಇಲಾಖೆಯ ಮಳಿಗೆ ತೆರೆದು ಜನರಿಗೆ ದೊರೆಯುವ ಸೌಲಭ್ಯಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.ಇಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿಗಳ ಸಮೀಲನಕ್ಕೆ ಅವಕಾಶ ದೊರೆತಿದೆ. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕೆಂದರು.

ಫಲಪುಷ್ಪ ಪ್ರದರ್ಶನದಲ್ಲಿ ಮಂಧರಗಿರಿ ಮರು ಸೃಷ್ಠಿ, ಸಿರಿಧಾನ್ಯ ಕಲಾಕೃತಿ, ತರಕಾರಿ ಕೆತ್ತನೆಯಲ್ಲಿ ಇಸ್ರೋಗೆ ನಮನ, ಜಾನುರ್ ಕಲೆಯಲ್ಲಿ ಹೊಮ್ಮುವ ರೈತ ಜೀವನ, ಮರಳು ಕಲಾಕೃತಿ, ಆಕರ್ಷಕ ವಿನ್ಯಾಸದ ಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆಯಾಗಿವೆ ಎಂದು ತಿಳಿಸಿದರು.

ಕೃಷಿ ಇಲಾಖೆಯಿಂದ ಪಾರಂಪರಿಕ ಹಾಗೂ ಆಧುನಿಕ ಕೃಷಿ ಸಲಕರಣೆಗಳು ಮತ್ತು ಯಂತ್ರೋಪಕರಣಗಳ ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಆಕರ್ಷಕ ಅಕ್ವೇರಿಯಂ ಪ್ರದರ್ಶನ, ಪಶು ಸಂಗೋಪನೆ ಇಲಾಖೆಯಿಂದ ದೇಶಿ ತಳಿಗಳ ಪರಿಚಯ, ರೇμÉ್ಮ ಇಲಾಖೆಯಿಂದ ರೇμÉ್ಮ ಗೂಡಿನ ಕರಕುಶಲ ವಸ್ತುಗಳ ಪ್ರದರ್ಶನ, ಅರಣ್ಯ ಇಲಾಖೆಯಿಂದ ವನ್ಯ ಜಗತ್ತು ಪರಿಚಯ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿ ಮಾದರಿ ಪ್ರದರ್ಶನ, ಸಾಮಾಜಿಕ ಅಭಿವೃದ್ಧಿಯಿಂದ ವಸತಿ ಶಿಕ್ಷಣ ಸಮುಚ್ಛಯ, ಗಂಗಾ ಕಲ್ಯಾಣ ಯೋಜನೆಗಳ ಅನಾವರಣ, ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನಮ್ಮೂರ ರೇμÉ್ಮ, ಗ್ರಂಥಾಲಯದಿಂದ ಜ್ಞಾನ ಭಂಡಾರ, ಪ್ರವಾಸೋದ್ಯಮ ಇಲಾಖೆಯಿಮದ ಪ್ರವಾಸಿ ತಾಣಗಳ ಛಾಯಚಿತ್ರ ಪ್ರದರ್ಶನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಸೇವೆಗಳ ಪರಿಚಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಮ್ಮೂರ ಅಂಗನವಾಡಿ ಮಾದರಿ, ಶಿಕ್ಷಣ ಇಲಾಖೆಯಿಂದ ವಿಜ್ಞಾನ ಲೋಕ, ಬೆಸ್ಕಾಂ ವತಿಯಿಂದ ಗೃಹ ಜ್ಯೋತಿ ಮಾದರಿ ಪ್ರದರ್ಶನ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಮಳಿಗೆಗಳಿಂದ ಜನರಿಗೆ ಮಾಹಿತಿ ನೀಡುವ ಕೆಲಸ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ವಹಿಸಿದ್ದರು. ಕರ್ನಾಟಕ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ.ಬಿ.ಜಯಚಂದ್ರ ತಾಂತ್ರಿಕ ಮಾಹಿತಿಯನ್ನು ಒಳಗೊಂಡ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.ಶಾಸಕ ಸಿ.ಬಿ.ಸುರೇಶಬಾಬು, ಜಿಲ್ಲಾಧಿಕಾರಿ ಶುಭ ಕಲ್ಯಾಣ್,ಸಿಇಓ ಜಿ.ಪ್ರಭು, ಎಸ್.ಪಿ. ಅಶೋಕ್.ವಿ, ಪಾಲಿಕೆ ಆಯುಕ್ತರಾದ ಅಶ್ವಿಜ,ಐಎಸ್‍ಆರ್‍ಹೆಚ್‍ನ ಡಾ.ತುಷಾರ ಕಾಂತಿ ಬೆಹೆರಾ,ಡಿಎಫ್‍ಓ ಅನುಪಮ,ತೋಟಗಾರಿಕಾ ಉಪನಿರ್ದೇಶಕರಾದ ಶಾರದಮ್ಮ,ಹಿರಿಯ ತೋಟಗಾರಿಕಾ ನಿದೇರ್ಶಕರಾದ ರೂಪ ಎನ್.ಎಸ್,ಜಿಲ್ಲಾ ತೋಟಗಾರಿಕೆ ಸಂಘದ ಪದಾಧಿಕಾರಿಗಳಾದ ಪಿ.ಕೃಷ್ಣಪ್ಪ, ಆರ್.ಕಾಮರಾಜು, ಸ್ನೇಕ ನಂದೀಶ್, ನಿರ್ದೇಶಕರಾದ ಕೆ.ಎನ್.ಶಿವಶಂಕರ್, ಜಯಣ್ಣ, ಟಿ.ಹೆಚ್ ಪ್ರಸನ್ನಕುಮಾರ್, ವೈ.ಕೆ.ನಾಗಭೂಷಣ್,ಜಗಜ್ಯೋತಿ ಸಿದ್ದರಾಮಯ್ಯ, ಹೆಚ್.ಆರ್.ನಾಗೇಶ, ಕೆ.ಎಂ.ವಾಸು, ನವೀನ್‍ಗೌಡ, ಎಂ.ವೆಂಕಟೇಶ್, ಟಿ.ಪಿ.ಶ್ರೀಧರ್, ಗೀತಾಜಿನೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *