ತುಮಕೂರು :- ಪೋಲಿಸ್ ಇಲಾಖೆ ಅವರೊಂದಿಗೆ ಪೊಲೀಸರಂತೆ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರ ಸೇವೆ ಉತ್ತಮವಾಗಿದ್ದು ಇವರ ರಕ್ಷಣೆಯು ನಮ್ಮದೇ ಆಗಿದೆ ಆದ್ದರಿಂದ ಜಿಲ್ಲೆಯ ಗೃಹರಕ್ಷಕರಿಗೆ ಜೀವ ವಿಮೆ ಮಾಡಿಸುವ ಭರವಸೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಕೆ ವಿ ನೀಡಿದರು.
ನಗರದ ಪೊಲೀಸ್ ಚಿಲುಮೆ ಸಮುದಾಯ ಭವನದಲ್ಲಿ ಗುರುವಾರ ತುಮಕೂರು ಜಿಲ್ಲಾ ಗೃಹರಕ್ಷಕ ದಳ ತುಮಕೂರು ಘಟಕ ಏರ್ಪಡಿಸಿದ್ದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ಆದೇಶದಂತೆ ಪೊಲೀಸ್ ಸಿಬ್ಬಂದಿಯ ಕೊರತೆಯನ್ನು ನೀಗಿಸುವಲ್ಲಿ ಗೃಹರಕ್ಷಕರು ನಮ್ಮ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ ಇವರನ್ನು ನೋಡಿಕೊಳ್ಳುವುದು ನಮ್ಮದೇ ಜವಾಬ್ದಾರಿ ಪೊಲೀಸ್ ಇಲಾಖೆ ಹಾಗೂ ಸಮಾಜಕ್ಕೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಇವರು ಕರ್ತವ್ಯದ ಅವಧಿಯಲ್ಲಿ ಪೊಲೀಸ ಇಲಾಖೆಯೊಂದಿಗೆ ಕರ್ತವ್ಯದಲ್ಲಿ ಇಲ್ಲದ ವೇಳೆ ಸಮಾಜದೊಂದಿಗೆ ಇರುತ್ತಾರೆ ಇವರ ಸೇವೆ ಅಗತ್ಯವಾಗಿ ಸಮಾಜಕ್ಕೆ ಬೇಕಾಗಿದ್ದು ಇವರಿಗಾಗಿ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಆರ್ ಟಿ ಓ ಅಧಿಕಾರಿ ಹೆಚ್ ಸದೃಲ್ಲಾ ಶರೀಫ್ ಮಾತನಾಡಿ ಗೃಹರಕ್ಷಕರು ನಮ್ಮೊಂದಿಗೆ ಅಮ್ಮ ಹೆಗಲಿಗೆ ಹೆಗಲು ಕೊಟ್ಟು ಅವರು ಸಹ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ ಯಾವುದೇ ಸಮಯವನ್ನು ಲೆಕ್ಕಿಸದೆ 24 ಗಂಟೆಗಳು ಕರ್ತವ್ಯಕ್ಕೆ ಸಿದ್ದರಿರುತ್ತಾರೆ ನಮ್ಮ ಇಲಾಖೆಯಂತೆ ಬೇರೆ ಎಲ್ಲ ಇಲಾಖೆಗಳಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರನ್ನು ನೋಡಿಕೊಳ್ಳುವುದು ಅವರಿಗೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿ ಅದರಂತೆ ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಚಾಲನಾ ಪರವಾಧಗಿ ಪಡೆಯುವ ಹಾಗೂ ಇನ್ನಿತರ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಟ್ ಆರ್ ಪಾತಣ್ಣ ಮಾತನಾಡಿ ಗೃಹ ರಕ್ಷಕ ದಿನದ ಶುಭಾಶಯ ಗಳನ್ನ ತಿಳಿಸಿದ ಅವರು ಗೃಹರಕ್ಷಕ ಸಿಬ್ಬಂದಿಯವರು ವಿಧಾನಸಭಾ ಚುನಾವಣೆಯಲ್ಲಿ. ಅಂತರ ರಾಜ್ಯದ ಚುನಾವಣೆಗಳಲ್ಲಿ ಉತ್ತಮವ
ಚುನಾವಣೆಯಲ್ಲಿ. ಅಂತರ ರಾಜ್ಯದ ಚುನಾವಣೆಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ರುತ್ತಾರೆ. ಅದರಂತೆ ವೃತ್ತಿಪರ ಕ್ರೀಡಾಕೂಟಗಳಲ್ಲೂ ಭಾಗವಹಿಸಿ ವಲಯ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇನ್ನು ಮುಂದೆಯೂ ನಿಮ್ಮ ಸೇವೆಯು ಅಗತ್ಯವಾಗಿದ್ದು ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಉಪ ಸಮಾಧೇಷ್ಟರಾದ ಲೋಕೇಶ್ ಪ್ರತಿಜ್ಞಾವಿಧಿ ಬೋಧಿಸಿದರು. ಬೋಧಕರಾದ ಶಿವಪ್ರಸಾದ್ ವಾರ್ಷಿಕ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ಕೆ ಪಿ. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಶಶಿಕುಮಾರ್. ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತಿಗೊಂಡ ಗೃಹರಕ್ಷಕರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ದಲ್ಲಿ ರಾಮಚಂದ್ರ ಎಲ್ಲರನ್ನೂ ಸ್ವಾಗತಿಸಿದರೆ ಘಟಕ ಅಧಿಕಾರಿ ಮಂಜುನಾಥ್ ರಾಜ ಅರಸ್ ವಂದಿಸಿದರು ಕಾರ್ಯಕ್ರಮವನ್ನು ಶೃತಿ ನಿರೂಪಿಸಿದರು.