ಇಲ್ಲಿನ ಟೌನ್ ಹಾಲ್ ಎದುರು ಇರುವ ಐಎಂಎ ಹಾಲ್ ನಲ್ಲಿ ಆಗಸ್ಟ್ 11 ರಂದು ಭಾನುವಾರ ಬೆಳಗ್ಗೆ 10.30ಕ್ಕೆ ರಂಗನಿರ್ದೇಶಕ ನಟರಾಜï ಹೊನ್ನವಳ್ಳಿ ಅವರು ಅನುವಾದಿಸಿರುವ ಆ ಲಯ ಈ ಲಯ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಆಫ್ರಿಕಾದ ನಾಟಕಕಾರ ಲೂಯಿ ನಕೂಸಿ ಅವರ ಮೂಲ ಕೃತಿಯ ಅನುವಾದ ಪುಸ್ತಕವನ್ನು ಕವಿ, ನಾಟಕಕಾರ ಪ್ರೊ. ಹೆಚ್.ಎಸ್. ಶಿವಪ್ರಕಾಶ್ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ರಂಗನಿರ್ದೇಶಕ ಮತ್ತು ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕ ಸಿ. ಬಸವಲಿಂಗಯ್ಯ, ರಂಗನಿರ್ದೇಶಕಿ ಹೆಚ್.ಕೆ. ಶ್ವೇತಾರಾಣಿ ಆಗಮಿಸಲಿದ್ದಾರೆ.
ಕೃತಿಯ ಕುರಿತು ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಮಾತನಾಡಲಿದ್ದಾರೆ. ಚರಕ ಆಸ್ಪತ್ರೆ ವೈದ್ಯ ಡಾ. ಬಸವರಾಜ್ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಕೆ. ದೊರೈರಾಜು, ಬಿ. ಸುರೇಶ್ ಧರ್ಮೇಂದ್ರ ಅರಸï, ಅಚ್ಯುತಕುರ್ಮಾ, ಎನ್.ಎಸ್. ಗುಂಡೂರ, ಗೋಮಾರದಹಳ್ಳಿ ಮಂಜುನಾಥ್, ಉಗಮ ಶ್ರೀನಿವಾಸ್, ರವಿಕುಮಾ ನೀಹಾ, ಡಾ. ಆರುಂಧರಿ, ಎಂ.ಎಸï. ಪ್ರಕಾಶï ಬಾಬು, ಬಿ.ಎಸ್. ವಿದ್ಯಾರಣ್ಯ, ಡಾ. ಕಿರಣï, ಅನಿಲï ಕುರ್ಮಾ ಚಿಕ್ಕದಾಳವಟ್ಟ, ರವಿಶಂಕರ ರಂಗಾಯಣ ಹಾಜರಿರುವರು ಎಂದು ಅನುವಾದಕ ಹಾಗೂ ರಂಗನಿರ್ದೇಶಕ ನಟರಾಜï ಹೊನ್ನವಳ್ಳಿ ತಿಳಿಸಿದ್ದಾರೆ.