4 ಲಕ್ಷ ಒಡವೆ ಹಿಂತಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ

ತುಮಕೂರು – ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಆಟೋ ಚಾಲಕರೊಬ್ಬರು ವಾರಸುದಾರರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ನಗರದ ಹನುಮಂತಪುರ ನಿವಾಸಿ ರವಿಕುಮಾರ್ ಎಂಬುವರೇ ವಾರಸುದಾರರಿಗೆ ಚಿನ್ನದ ಒಡವೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ.

ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗಾಯತ್ರಿ ಎಂಬುವರು 4 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನದ ಒಡವೆಗಳಿದ್ದ ಬ್ಯಾಗ್‍ನ್ನು ಬಿಟ್ಟು ಹೋಗಿದ್ದರು. ಈ ಚಿನ್ನದ ಒಡವೆಗಳಿದ್ದ ಬ್ಯಾಗ್‍ನ್ನು ಆಟೋ ಚಾಲಕ ರವಿಕುಮಾರ್ ಅವರು ಗಾಯತ್ರಿರವರಿಗೆ ವಾಪಸ್ ನೀಡಿದ್ದು, ಆಟೋ ಚಾಲಕ ರವಿಕುಮಾರ್‍ರವರಿಗೆ ಗಾಯತ್ರಿ ರವರು ಧನ್ಯವಾದ ತಿಳಿಸಿದ್ದಾರೆ.

ಗಾಯತ್ರಿ ಅವರು ಕುಂದೂರು ಗ್ರಾಮದಲ್ಲಿ ತಮ್ಮ ಸಂಬಂಧಿಕರೊಬ್ಬರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ದರು. ಸೀಮಂತ ಮುಗಿದ ಮೇಲೆ ಮೂವರು ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು.

ಆಟೋದಿಂದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಮಹಿಳೆ ಚಿನ್ನದ ಆಭರಣಗಳು ಇರುವ ಬ್ಯಾಗ್ ಮರೆತು ಹೋಗಿದ್ದರು. ಬಳಿಕ ಸ್ವಲ್ಪ ದೂರ ಹೋದ ಮೇಲೆ ನೆನಪು ಮಾಡಿಕೊಂಡು ವಾಪಸ್ ಬಂದು ಆಟೋಗಾಗಿ ಹುಡುಕಾಡಿದ್ದಾರೆ. ಇತ್ತ ಆಟೋ ಚಾಲಕ ಕೂಡ ಆಕೆಗಾಗಿ ಹುಡುಕಾಡಿದ್ದಾರೆ.

ಆಟೋ ಸಿಗದಿದ್ದಕ್ಕೆ ಮಹಿಳೆ ಪೆÇಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದರು. ಇತ್ತ ಚಾಲಕ ಕೂಡ ಮಹಿಳೆ ಕಾಣದಿದ್ದಕ್ಕೆ ಬ್ಯಾಗ್ ವಾಪಸ್ ಕೊಡಬೇಕು ಎಂದು ಪೆÇಲೀಸ್ ಠಾಣೆಗೆ ಬಂದಿದ್ದಾರೆ. ಠಾಣೆಯಲ್ಲಿ ಚಾಲಕನ್ನು ನೋಡಿದ ಮಹಿಳೆ ಫುಲ್ ಖುಷಿಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

ಬ್ಯಾಗ್‍ನಲ್ಲಿ ಸುಮಾರು 4 ಲಕ್ಷ ರೂಪಾಯಿಯ ಬೆಲೆ ಬಾಳುವ 52 ಗ್ರಾಂ ನಷ್ಟು ಚಿನ್ನಾಭರಣ ತಮ್ಮ ಕೈಸೇರಿದ್ದಕ್ಕೆ ಗಾಯತ್ರಿಯವರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *