ಅವರ್ಯಾರೋ ಹಾಕಿದ್ದಾರೆ, ಕೆಬಿ ಇಲ್ಲದ 5 ವರ್ಷವಾಯಿತೆಂದು
ಛೆ ಮುಂಜಾನೆ ಇಂತಹ ಸಂದೇಶವೇ !
ಜಾಂಬವಂತ ಬಕಾಲಮುನಿಗೆ ಸಾವುಂಟೆ, ಸಾವುಂಟೆ, ಭ್ರಮೆಯಲ್ಲಿ ತೇಲುವವರ ನಾವೇನು ಮಾಡಲಿ.
ಕೆಬಿ ಸಾಯಲಿಲ್ಲ, ನಕ್ಷತ್ರವಾಗಿ ಬಕಾಲ ಮುನಿಯಾಗಿ, ದಕ್ಲಾ ಕಥಾದೇವಿಯಾಗಿ ನೀ ಸೂರ್ಯನಂತೆ ಹೊಳೆಯುವಾಗ ನೀಯೆಲ್ಲಿ
ಇಲ್ಲವಾದೆ ಒಮ್ಮೆ ಕೂಗಿ ಹೇಳು, ಒಮ್ಮೆ ಕೂಗಿ ಹೇಳು.
ಕೆಂಕೇರೆಯಲ್ಲಿ ನಿನ್ನ ಹೆಜ್ಜೆ ತುಮಕೂರಿನಲ್ಲಿ ನಿನ್ನ ಬರಹ, ಕನ್ನಡ ನಾಡಿನದ್ದಕ್ಕೂ ಬಕಾಲನ ಹೆಜ್ಜೆ ಹೆಜ್ಜೆಯನ್ನಿಟ್ಟು ಮೆಲು ಧ್ವನಿಯಲ್ಲಿ ಹೇಳಿದೆ ನನಗಿಲ್ಲ ಸಾವು, ನನಗೆಲ್ಲಿ ಸಾವು .
ಸಾವಿಲ್ಲದೆ ಸಾವಿರಾರು ವರುಷ ನೀ ಬದುಕಬಲ್ಲೆ, ಬುದ್ಧನಿಗೆ ಸಾವುಂಟೇ ಹಾಗೆಯೇ ಬಕಾಲ ಮುನಿಗೆ ಸಾವುಂಟೇ
ಬುದ್ಧ, ಬಸವ ಅಂಬೇಡ್ಕರ್ ಇವರ ಅನುಯಾಯಿ ಬಕಾಲಮುನಿ ಸಾಯಲುಂಟೇ .
ಸಾವಿರಾರು ವರುಷವಾದರೂ ಬಕಾಲಮನಿ ಇರುತ್ತಾರ
ಬಕಾಲ ಕಥಾ ಕಾವ್ಯವಾಗಿ.
ರಕ್ತ ಮಾಂಸ ದೇಹ ಈ ಭೂಮಿಯಲ್ಲಿರುವ ತನಕ ಬಕಾಲಮುನಿ ಬದುಕಿರುತ್ತಾರಲ್ಲ
ಹಾಗಾದರೆ ಕೆ .ಬಿ. ಎಂಬ ಬಕಾಲನಿಗೆ ಸಾವುಂಟೇ
ನಿನ್ನ ನಾವು ಸಾಯಿಸಲಾರೆವು, ನಾವು ಸಾಯಿಸಲಾರೆವು,
ಹೆಂಡ, ಖಂಡಗಳಿರುವ ತನಕ ಬಕಾಲಮುನಿ ಈ ಧರೆಯೊಳಗೆ ದೀವಿಗೆಯಾಗಿ, ಜ್ಯೋತಿಯಾಗಿ ಜ್ಯೋತಿಯಾಗಿ…. ಸಾವಿರಾರು ದಾರಿಗಳು ಕೂಡುವ
ಕೈಮರವಾಗಿ , ಕಾಡೊಳು ಕೋಗಿಲೆ, ನೀರೊಳು ಮೀನಾಗಿ, ಧರೆಯೊಳು ಬಕಾಲನಾಗಿ
ಮನ-ಮನೆಯಲ್ಲೂ ದೀವಿಗೆಯಾಗಿ ಬೆಳಕಾಗಿರುವ ಬಕಾಲ ಮುನಿಗೆ ಸಾವುಂಟೆ
ಸಾಯಿಸುವುದು ಬೇಡ ಜೀವ ಮಿಸುಕಾಡುತ್ತಿದೆ, ಕೇಬಿ ಕಾವ್ಯ ನಕ್ಷತ್ರದಂತೆ ಆಕಾಶ- ಭೂಮಿಯಲ್ಲಿ ಜ್ಯೋತಿಯಾಗಿ ಉರಿಯುತ್ತಿದೆ ಉರಿಯುತ್ತಾ ಇದೆ.
ವೆಂಕಟಾಚಲ. ಹೆಚ್.ವಿ.