ತುಮಕೂರು : ಬಂದಕುಂಟೆ ನಾಗರಾಜ್ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವವನ್ನು ಹೊಂದಿದ್ದಂಥವರು. ಅವರನ್ನು ನಾವು ಮಿಲಿಟೆಂಟ್ ಪರ್ಸನ್ ಅಂತ ಕರೆಯುತ್ತಿದ್ದೆವು. ಆಂಗ್ರಿ ಎಂಗ್ಮನ್ ಅಂತ ಕರೆಯುತ್ತಿದ್ದೆವು ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ತುಮಕೂರು ಮತ್ತು ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಿಧನರಾದ ಹೋರಾಟದ ಒಡನಾಡಿ, ದಲಿತ ಮುಖಂಡ ಬಂದಕುಂಟೆ ನಾಗರಾಜಯ್ಯ ಅವರಿಗೆ ತುಮಕೂರಿನ ಟೌನ್ ಹಾಲ್ ಸರ್ಕಲ್ ನಲ್ಲಿರುವ ಐಎಂಎ ಹಾಲ್ ನಲ್ಲಿ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದಲಿತ ಸಂಘರ್ಷ ಸಮಿತಿಗೆ ರಂಗಸ್ವಾಮಣ್ಣ ನಾವೆಲ್ಲ ಸೇರಿ ಮಾತನಾಡಿ, ಜಿಲ್ಲಾ ಸಂಚಾಲಕರನ್ನಾಗಿ ಮಾಡಿದೆವು. ನಾಗರಾಜ್ ಅμÉ್ಟೀ ಧೈರ್ಯಶಾಲಿ, ಅವರ ಫಿಜಿಕಲ್ ಮಿಲಿಟೆನ್ಸಿ, ಸಂಘಟನೆ ಹೋರಾಟದ ಕೆಚ್ಚು ಒಂದು ತಾತ್ವಿಕ ತಳಹದಿ ಇರಲಿ ಅಂತ ಹೇಳಿ ಅವರನ್ನು ಕರೆದುಕೊಂಡು ಹೊನ್ನಾಪುರಕ್ಕೆ ಶಿಬಿರಕ್ಕೆ ಕರೆದುಕೊಂಡು ಹೋದೆವು. ಶಿಬಿರದ ಮೂಲಕ ತಾತ್ವಿಕ ತಳಹದಿಯನ್ನು ಕಲಿಸಿಕೊಟ್ಟೆವು. ಫಿಜಿಕಲಿ ಮಿಲಿಟೆಂಟ್, ಮೆಂಟಲಿ ಮಿಲಿಟೆಂಟ್, ಧೈರ್ಯಶಾಲಿ ಹೋರಾಟಗಾರರಾಗಿದ್ದರು. ಜಿಲ್ಲೆಯಲ್ಲಿ ಬಹಳಷ್ಟು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಅವರನ್ನು ನಾವು ನೆನಪುಮಾಡಿಕೊಳ್ಳಬೇಕು ಎಂದು ಹೇಳಿದರು.
ಹೋರಾಟಗಾರರನ್ನು ಕಳೆದುಕೊಂಡಾಗ ಬಹಳ ಮಾತನಾಡುತ್ತೇವೆ. ಅವರು ಮಾಡಿದ ಹೋರಾಟಗಳನ್ನು ನೆನಪು ಮಾಡಿಕೊಂಡು ನಮ್ಮ ಪಾಡಿಗೆ ನಾವು ಮನೆಗೆ ಹೋಗುತ್ತೇವೆ. ಆದರೆ ನಿಜಕ್ಕೂ ಹೋರಾಟಗಾರನಿಗೆ ಗೌರವ ಕೊಡಬೇಕು ಅಂತ ಅಂದ್ರೆ ಆ ಹೋರಾಟಗಳನ್ನು ನಾವು ಮುಂದುವರೆಸಬೇಕು. ಆಗ ಮಾತ್ರ ನಾವು ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ. ಆ ಕೆಲಸವನ್ನು ನಾವು, ನೀವು ಎಲ್ಲಾ ಮಾಡಬೇಕು. ಹೋರಾಟವನ್ನು ಮುಂದುವರೆಸುವುದರ ಬಗ್ಗೆ ನಾಯಕರಲ್ಲಿ ಒಂದು ಮನವಿ ಮಾಡುತ್ತೇನೆ. ನಾವು ಹೋರಾಟ ಪ್ರಾರಂಭ ಮಾಡಿದಾಗ ಇದ್ದಂತಹ ಜನಗಳ ಮನಸ್ಸು ಮತ್ತು ಮನಸ್ಥಿತಿ ಮತ್ತು ಅವರ ಸ್ಥಿತಿಗತಿಗಳು ಈಗಿನಂತೆ ಇರಲಿಲ್ಲ. ಅದನ್ನು ನೋಡಿ ನಾವು ಚಳವಳಿಯನ್ನು ಕಟ್ಟಬೇಕು. ಯಾಕೆ ಅಂದ್ರೆ ಈಗ ಯಾವುದೇ ಕಾರ್ಯಕ್ರಮಗಳು ನಡೆದರೂ ಕೆಲವು ನಾಯಕರು ಬರುತ್ತಾರೆ. ಜನ ಬರೋಲ್ಲ, ದಲಿತ ಸಂಘರ್ಷ ಸಮಿತಿ ಪ್ರಾರಂಭ ಮಾಡಿದಾಗ ಲೀಡರ್ ಜೊತೆ ಜನಗಳಿದ್ದರು. ಈಗ ಬರೀ ಲೀಡರ್ಸ್ ಇದಾರೆ, ಹೀಗ್ಯಾಕೆ ಅಂತ ಯೋಚನೆ ಮಾಡಿ ಮತ್ತೆ ಜನಗಳ ಬಳಿ ಹೋಗಿ ನಾವು ಚಳವಳಿಯನ್ನು ಕಟ್ಟಬೇಕು. ಈ ಚಳವಳಿಗೆ 50 ವರ್ಷ ಆಯ್ತು ಅಂತ ಸಂಭ್ರಮಾಚರಣೆಗಳನ್ನು ನಡೆಸಲಾಗುತ್ತಿದೆ. 50 ವರ್ಷದ ಅನುಭವದ ಆಧಾರದ ಮೇಲೆ ವಿಮರ್ಶೆ ಮಾಡಿಕೊಂಡು ಈ ಕಾಲಕ್ಕೆ ತಕ್ಕ ಹಾಗೆ ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಚಳವಳಿಯನ್ನು ಕಟ್ಟಬೇಕು ಎಂದು ಅಭಿಪ್ರಾಯಪಟ್ಟರು.
ಚಳವಳಿಯನ್ನು ಕಟ್ಟುವಾಗ ಒಂದು ತಾತ್ವಿಕ ನೆಲೆ ಇಲ್ಲದೆ ಹೋದರೆ ಅದು ಯಶಸ್ವಿ ಆಗಲ್ಲ. ಚಳವಳಿ ಒಡೆದು ಹೋಯ್ತು ಅಂತೆಲ್ಲ ಮಾತಾಡುತ್ತಾರೆ. ಹೀಗಾಗಿ ನಾವು ಹಿಂದಕ್ಕೆ ನೋಡಬೇಕಾದ ಅಗತ್ಯವಿಲ್ಲ. ನಾವು ಪರಸ್ಪರ ಅಸೂಯೆಗಳನ್ನು ಪರಸ್ಪರ ಹೊಗಳಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಒಂದು ತಾತ್ವಿಕ ನೆಲೆ ಕಡೆ ಚಳವಳಿ ಕಟ್ಟಬೇಕು. ನಾವು ಪ್ರಾರಂಭ ಮಾಡಿದ್ದು ಮಾಸ್ ಬೇಸ್ಡ್ ಆರ್ಗನೈಜೇಷನ್ (ಸಮೂಹ ಆಧಾರಿತ ಸಂಘಟನೆ), ದಲಿತ ಚಳವಳಿ, ದಲಿತ ಸಂಘರ್ಷ ಸಮಿತಿ ಸಮೂಹ ಆಧಾರಿತ ಸಂಘಟನೆ. ಇದರಿಂದ ಬರುವಂತಹ ಉತ್ಪನ್ನಗಳೇನು ಎಂದರೆ ಅದರಿಂದ ಒಳ್ಳೆಯ ಕೇಡರ್ಸ್ ಬರುತ್ತಾರೆ. ಜಾತಿ ನಾಯಕರು ಬರುತ್ತಾರೆ. ಸುಲಿಗೆ ನಾಯಕರು ಬರುತ್ತಾರೆ. ಇದನ್ನು ತಕ್ಷಣ ಎನ್ ಕ್ಯಾμï ಮಾಡಿಕೊಳ್ಳುವಂತಹ ರಾಜಕೀಯ ಪಟುಗಳು ಬರುತ್ತಾರೆ. ಇದು ಮಾಸ್ ಸಂಘಟನೆಯಿಂದ, ಮಾಸ್ ಹೋರಾಟಗಳಿಂದ ಆಗುವಂತಹ ಉತ್ಪನ್ನಗಳು. ಈ ಉತ್ಪನ್ನಗಳು ಮುಂದೆ ಸಾಗಿದರೆ, ಜನಾಂಗ ಮತ್ತು ಸಮಾಜ ತುಂಬಾ ದುಸ್ಥಿತಿಗೆ ಹೋಗುವಂತಹ ಎಲ್ಲಾ ಆತಂಕಗಳು ಭಯಗಳು ಇದೆ. ಹಾಗಾಗಿ ನಾವು ಇವೆಲ್ಲವನ್ನು ಮೀರಿ ಜನರ ಸ್ಥಿತಿಗತಿಗಳು ಏನಿರುತ್ತದೆ ಅವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. 35 ವರ್ಷಗಳಿಂದ ಒಳ ಮೀಸಲಾತಿಗಾಗಿ ನಡೆದುವ ಹೋರಾಟಗಳು ಕ್ಷೋಭೆಗಳೋ ಈμರ್Éಯ ಸಂಘರ್ಷಗಳೋ ಮತ್ತೆ ಏನೇನು ಬದಲಾವಣೆಗಳು ಆಗಿದೆ ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಶೋಷಿತ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಹೋಗಬೇಕು. ವ್ಯವಸ್ಥೆ ವಿರುದ್ಧ ಇರುವ ಎಲ್ಲಾ ಸಂಘಟನೆಗಳನ್ನ ಜೊತೆಯಲ್ಲಿದ್ದುಕೊಂಡು ನಾವೊಂದು ಮಾನವೀಯ ಸಮಾಜ ಕಟ್ಟುವ ಕಡೆ ಚಳವಳಿಯನ್ನು ಕಟ್ಟಬೇಕು. ಹೀಗಾದಾಗ ಮಾತ್ರ ನಾವು ನಮಗಾಗಿ ದುಡಿದವರಿಗೆ, ಇಡೀ ಸಮಾಜಕ್ಕಾಗಿ ತಮ್ಮ ಜೀವವನ್ನು ಸವೆಸಿ ಪ್ರಾಣ ತೆತ್ತವರಿಗೆ ಗೌರವ ಸಲ್ಲಿಸದಂತೆ ಆಗುತ್ತದೆ. ಆ ದಿಸೆನಲ್ಲಿ ಯೋಚನೆ ಮಾಡಲಿ ಎಂದರು.
ಲೇಖಕಿ ಬಾ.ಹ.ರಮಾಕುಮಾರಿ ಮಾತನಾಡಿ, ಬೆಲ್ಲದಮಡು ರಂಗಸ್ವಾಮಿ ಮತ್ತು ಬಂದಕುಂಟೆ ನಾಗರಾಜಯ್ಯ 80ರ ದಶಕದಿಂದಲೂ ಪರಿಚಯ. ಅವರ ಹೋರಾಟಗಳಲ್ಲಿ ನನ್ನನ್ನೂ ಕೂಡ ತೊಡಗಿಸಿಕೊಳ್ಳುತ್ತಿದ್ದರು.ಆಗ ತುಮಕೂರಿನಲ್ಲಿ ಬೇರೆ ಬೇರೆ ಸಂಘಟನೆಗಳು ಇರಲಿಲ್ಲ. ಇವರು ಚಳವಳಿಯಲ್ಲಿ ಭಾಗವಹಿಸುತ್ತಿದ್ದಾಗ ಚಳವಳಿಯ ಗೀಳನ್ನು ಹಚ್ಚಿಸಿದವರಲ್ಲಿ ಬಂದಕುಂಟೆ ನಾಗರಾಜಯ್ಯ ಕೂಡ ಒಬ್ಬರು. ನಾಗರಾಜಯ್ಯ ನಿಷ್ಟುರವಾದಿಯಾಗಿದ್ದರು ಎಂದು ಹೇಳಿದರು.
ನಾನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಹಿಂದಿನ ಅಧ್ಯಕ್ಷರಾಗಿ ಭಾಸ್ಕರಾಚಾರ್, ಡಿ ಚಂದ್ರಪ್ಪ ಅವರು ಜಿಲ್ಲೆಯ ಕುರಿತು ಒಂದು ಪುಸ್ತಕ ತರಲು ಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವರೊಂದಿಗೆ ಪತ್ರ ವ್ಯವಹಾರವನ್ನು ನಡೆಸಿದ್ದರು. ಕೆಲವು ಪತ್ರಗಳನ್ನು ಸಂಬಂಧಪಟ್ಟವರಿಗೆ ರವಾನಿಸಿರಲಿಲ್ಲ. ಅದರಲ್ಲಿ ಬೆಲ್ಲದಮಡು ರಂಗಸ್ವಾಮಿಯರಿಗೆ ಕಳಿಸಬೇಕಾದ ಪತ್ರವೂ ಇತ್ತು. ಅμÉ್ಟೂತ್ತಿಗೆ ಬೆಲ್ಲದಮಡು ರಂಗಸ್ವಾಮಿ ಅವರು ತೀರಿಕೊಂಡಿದ್ದರು. ಹೀಗಾಗಿ ಬಂದಕುಂಟೆ ನಾಗರಾಜಯ್ಯ ಬರೆಯಲಿ ಎಂದು ಅವರಿಗೆ ಪೆÇೀನು ಮಾಡಿದ್ದೆ. ಅವರೂ ಬರೆದುಕೊಡುವುದಾಗಿ ಹೇಳಿದ್ದರು. ಆದರೆ ಬರೆದುಕೊಡಲಿಲ್ಲ. ಕರೋನ ಬಂದು ಪುಸ್ತಕ ತರುವ ಯೋಜನೆ ಮೂಲೆಗೆ ಬಿತ್ತು. ಅವರು ಬರೆದಿದ್ದರೆ ಪುಸ್ತಕ ಹೊರಬರುತ್ತಿತ್ತು. ಆದರೆ ಅμÉ್ಟೂತ್ತಿಗೆ ನನ್ನ ಅಧಿಕಾರದ ಅವಧಿ ಮುಗಿದಿತ್ತು. ಆದರೂ ಕೂಡ ನಾಗರಾಜಯ್ಯ ಅವರ ಕುರಿತು ಒಂದು ಸಣ್ಣ ಪುಸ್ತಕವನ್ನು ಹೊರತರಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಬಂದಕುಂಟೆ ನಾಗರಾಜಯ್ಯ ಸಮಾಜಕ್ಕಾಗಿ ದುಡಿದವರು. 2004ರಲ್ಲಿ ನಾನು ಮಧುಗಿರಿ ಕ್ಷೇತ್ರದಲ್ಲಿ ಎಂಎಲ್ ಎ ಆಕಾಂಕ್ಷಿಯಾಗಿ ಸ್ಪರ್ಧೆ ಮಾಡಿದಾಗ ಇದಕ್ಕೆ ಪೂರ್ವಭಾವಿಯಾಗಿ ತುಮಕೂರಿನಲ್ಲಿ ಸಭೆ ನಡೆಸಿದೆವು. ಆಗ ನಾಗರಾಜಯ್ಯ ಒಂದು ಪ್ರಶ್ನೆ ಹಾಕಿದರು. ಎಂಎಲ್ಎ ಸ್ಥಾನಕ್ಕೆ ಕಂಟೆಸ್ಟ್ ಮಾಡ್ತೀರಲ್ಲ, ತುಮಕೂರು ಜಿಲ್ಲೆಗೆ ನಿಮ್ ಕೊಡುಗೆ ಏನು ಎಂದು ಪ್ರಶ್ನಿಸಿದರು. ಇದಕ್ಕೆ ತಕ್ಷಣ ಉತ್ತರಿಸಿದೆ. ಇಲ್ಲ ಬಿಗ್ ಜೀರೋ ಅಂದೆ. ಮತ್ತೆ ಯಾಕೆ ಸ್ಪರ್ಧೆ ಮಾಡ್ತೀರ ಅಂದ್ರು. ಅದಕ್ಕೆ ಹೇಳಿದೆ ಅವಕಾಶ ಸಿಕ್ಕಿದೆ. ನಾನು ಸ್ಪರ್ಧೆ ಮಾಡ್ತೇನೆ.ಆಗ ಬೆನ್ನು ತಟ್ಟಿದರು ಎಂದು ಸ್ಮರಿಸಿದರು.
ಎಂ.ಸಿ.ನರಸಿಂಹಮೂರ್ತಿ ನಿರೂಪಿಸಿ, ಅರಣ್ ಮತ್ತು ಸಂಗಡಿಗರು ಹೋರಾಟದ ಹಾಡು ಹಾಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ಎನ್.ಜಿ.ರಾಮಚಂದ್ರ, ಕುಂದೂರು ತಿಮ್ಮಯ್ಯ, ನರಸಿಂಹಯ್ಯ, ವಿರೂಪಾಕ್ಷ ಡ್ಯಾಗೇರಹಳ್ಳಿ, ಎನ್.ಜಿ.ರಾಮಚಂದ್ರ, ಡಾ.ಮುರುಳೀಧರ್, ಕುಂದೂರು ಮುರಳಿ, ಪಿ.ಎನ್.ರಾಮಯ್ಯ, ಕಂಟಲಗೆರೆ ಸಣ್ಣಹೊನ್ನಯ್ಯ, ಡಾ.ಶಿವಣ್ಣ ತಿಮ್ಲಾಪುರ, ನರಸಿಂಹಯ್ಯ, ಎಂ.ಸಿ.ನರಸಿಂಹಮೂರ್ತಿ ಮತ್ತು ಬಂದಕುಂಟೆ ನಾಗರಾಜ್ ಕುಟುಂಬ ವರ್ಗದವರು ಭಾಗವಹಿದ್ದರು.