ಬೆಳಗುಂಬ : 2 ಕ್ಲಿನಿಕ್‍ಗಳಲ್ಲಿ ಸೆಟರ ಮೀಟಿ ಕಳ್ಳತನ-ಬೆಚ್ಚಿಬಿದ್ದ ಜನತೆ

ತುಮಕೂರು : ತುಮಕೂರು ಸಮೀಪದ ಬೆಳಗುಂಬದ ಎರಡು ಕ್ಲಿನಿಕ್‍ಗಳಲ್ಲಿ ಸೆಟರ್ ಮೀಟಿ ಕಳ್ಳತನ ಮಾಡಲಾಗಿದೆ.
ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಸಿದ್ದಗಂಗಾ ಕ್ಲಿನಿಕ್ ಮತ್ತು ಎಸ್‍ಎನ್ಎಂ ಕ್ಲಿನಿಕ್‍ಗಳ ಸೆಟರ್ ಮೀಟಿ ಕಳ್ಳತನ ಮಾಡಿರುವುದರಿಂದ ಜನತೆ ಭಯಭೀತರಾಗಿದ್ದಾರೆ.

ನಿನ್ನೆ ರಾತ್ರಿ ಕ್ಲಿನಿಕ್‍ಗಳನ್ನು ಬಂದ್ ಮಾಡಿಕೊಂಡು ಹೋದ ನಂತರ ಈ ಕಳ್ಳತನ ಮಾಡಿದ್ದು, ಈ ಕ್ಲಿನಿಕ್ ಗಳು ಮುಖ್ಯರಸ್ತೆಗೆ ಹೊಂದಿಕೊಂಡಂತೆಯೇ ಇದ್ದು, ದೇವರಾಯನದುರ್ಗ, ಊರ್ಡಿಗೆರೆಗೆ ರಾತ್ರಿಯ ವೇಳೆಯಲ್ಲೂ ವಾಹನಗಳು ಓಡಾಡುತ್ತಿದ್ದರೂ, ಕಳ್ಳರು ಸೆಟರ್ ಮೀಟಿ ಕಳ್ಳತನ ಮಾಡಿರುವುದು ಬೆಳಗುಂಬ ಜನರನ್ನು ಬೆಚ್ಚಿಬೀಳಿಸಿದೆ.

ಇತ್ತೀಚೆಗೆ ಬೆಳಗುಂಬವು ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ನಾಮದಚಿಲುಮೆ, ದೇವರಾಯನದುರ್ಗಕ್ಕೆ ತೆರಳುವ ಪ್ರಯಾಣಿಕರು ಬೆಳಗುಂಬದ ಆಸು-ಪಾಸುಗಳಲ್ಲಿ ಟೀ, ತಿಂಡಿ ತಿನ್ನುವರು, ರಸ್ತೆ ಬದಿಗಳಲ್ಲೇ ಹಲವಾರು ಹೋಟೆಲ್, ಅಂಗಡಿಗಳಿದ್ದು ಈ ಕಳ್ಳತನದಿಂದ ವ್ಯಾಪಾರಸ್ಥರು, ಒಂಟಿ ಮನೆಯವರುಗಳು ಭಯ-ಭೀತರಗಿದ್ದಾರೆ.

ಎಸ್‍ಎನ್ಎಂ ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರಿನಲ್ಲಿದ್ದ ನಗದು ಮತ್ತು ಮೈ ಸೋಪುಗಳು ಕಳ್ಳತನವಾಗಿರುವುದು ಕಂಡು ಬಂದಿದ್ದು, ಸಿದ್ಧಗಂಗಾ ಕ್ಲಿನಿಕ್‍ನಲ್ಲಿಟ್ಟಿದ್ದ ಬೆಳ್ಳಿ ವಿಗ್ರಹ ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *