ತುಮಕೂರಿನ ಮರಳೂರು ಕೆರೆ ಸಮೀಪವಿರುವ ಗುಬ್ಬಿ ಬಿಜೆಪಿ ಮುಖಂಡ ದಿಲೀಪ್‍ಕುಮಾರ್ ಅವರ ನಿವಾಸಕ್ಕೆ ಮಾಜಿ ಸಚಿವ ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.
ಸೋಮಣ್ಣನವರಿಂದ ದಿಲೀಪ್‍ಕುಮಾರ್ ಅಂತರ ಕಾಯ್ದುಕೊಂಡಿದ್ದರಿಂದ ಇಂದು ವಿ.ಸೋಮಣ್ಣ ದಿಲೀಪ್‍ಕುಮಾರ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಜಿ.ಎಸ್.ಬಸವರಾಜು ಕಾರಣ ಎಂದು, ಜಿಎಸ್‍ಬಿ ಬೆಂಬಲಿತ ಅಭ್ಯರ್ಥಿಯೆಂದು ವಿ.ಸೋಮಣ್ಣನವರಿಂದ ಅಂತರ ಕಾಯ್ದುಕೊಂಡೇ ದಿಲೀಪ್‍ಕುಮಾರ್ ಬಂದಿದ್ದರು.
ಶಾಸಕ ಬಿ. ಸುರೇಶ್‍ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಉಪಾಧ್ಯಕ್ಷ ವಿಜಯಕುಮಾರ್, ರಾಜಪ್ಪ ಮತ್ತಿತರರು ಚಿತ್ರದಲ್ಲಿದ್ದಾರೆ.