ಬಿಜೆಪಿ ಜನರ ಜೀವನ ಮಟ್ಟ ಸುಧಾರಿಸುವ ಯೋಜನೆಗಳನ್ನು ತಂದಿದೆ-ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತುಮಕೂರು:ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಾರಿ ಬದಲಾವಣೆ ಕಾಣುತ್ತಿದ್ದು,ಸ್ಮಾರ್ಟ್ ಸಿಟಿಯ ಮೂಲಕ ತುಮಕೂರು ಸಹ ಪ್ರಗತಿಯ ಹಾದಿಯಲ್ಲಿದೆ ಎಂದು ಮಧ್ಯಪ್ರದೇಶದ ಶಾಸಕ ಹಾಗು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯ್ ಬರ್ಜಿಯ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಬಾಜಪ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸ್ಮಾರ್ಟ್ ಸಿಟಿಗಳ ಜೊತೆಗೆ ಸ್ಮಾರ್ಟ್ ವಿಲೇಜ್ಗಳ ನಿರ್ಮಾಣಕ್ಕು ಬಿಜೆಪಿ ಒತ್ತು ನೀಡಿದ್ದು, ಇದೇ ವೇಗದಲ್ಲಿ ವಿಕಾಸ ಮುಂದುವರೆದರೆ 2047 ಕ್ಕೆ ಅಂದರೆ ಸ್ವಾತಂತ್ರ್ಯ ಬಂದ ನೂರನೇ ವರ್ಷಕ್ಕೆ ಭಾರತ ಪ್ರಪಂಚದ ನಂ.1 ರಾಷ್ಟವಾಗಲಿದೆ ಎಂದರು.

ಕೇಂದ್ರ ದಲ್ಲಿ ಮೋದಿ ಅಧಿಕಾರಕ್ಕೆ ದ ನಂತರ ರಾಷ್ಟ್ರೀಯ ಹೆದ್ದಾರಿ ಗಳ ನಿರ್ಮಾಣ ಕಾರ್ಯದಲ್ಲಿ ಸಾಕಷ್ಟು ವೇಗ ಪಡೆದುಕೊಂಡಿದೆ.ಇದರ ಫಲವಾಗಿ ಜನರಿಗೆ ಸಮಯದ ಜೊತೆಗೆ ಇಂಧನದ ಉಳಿತಾಯ ಸಹ ಆಗುತ್ತಿದೆ.ಅಮೇರಿಕಾದಂತಹ ಅರ್ಥಿಕತೆಯೇ ಕುಸಿದು ಜನರು ತತ್ತರಿಸುತ್ತಿರುವ ಕಾಲದಲ್ಲಿ, ಭಾರತದ ಅರ್ಥಿಕತೆ ಅತ್ಯಂತ ಸ್ಥಿರವಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಸಧೃಡ ಅಡಳಿತ.ಡಬಲ್ ಇಂಜಿನ್ ಸರಕಾರ ಎಲ್ಲಾ ರೀತಿಯಿಂದ ದೇಶದ ವಿಕಾಸವನ್ನು ಬಯಸುತ್ತಾ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದ ಕೈಲಾಸ್ ವಿಜಯ್ ಬರ್ಜಿಯ ನುಡಿದರು.

ಕರ್ನಾಟಕ ದಲ್ಲಿ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸಾಕಷ್ಟು ಕೆಲಸ ಮಾಡಿದೆ. ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯವಿರುವ ಎಲ್ಲಾ ರೀತಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ.ಜನರು ಬಿಜೆಪಿ ಕೆಲಸಗಳನ್ನು ಮೆಚ್ಚಿಕೊಂಡಿದ್ದು,ಈ ಬಾರಿಯೂ ಅಧಿಕಾರಕ್ಕೆ ತರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಬಿ.ಜೋತಿಗಣೇಶ್ ಸಜ್ಜನ ರಾಜಕಾರಣಿಯಾಗಿದ್ದು,ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಿದ್ದಾರೆ.ಮುಂದೆಯೂ ಈ ಕ್ಷೇತ್ರ ಅಭಿವೃದ್ಧಿ ಹೊಂದಬೇಕೆಂದರೆ ಬಿಜೆಪಿಗೆ ಕ್ಷೇತ್ರದ ಮತದಾರರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಚುನಾವಣೆಯ ಸಂದರ್ಭದಲ್ಲಿ ಅವಕಾಶ ವಂಚಿತರು ಮತ್ತೊಂದು ಪಕ್ಷದತ್ತ ಮುಖ ಮಾಡುವುದು ಸಹಜ .ಅದೇ ರೀತಿಯಲ್ಲಿ ಜಗದೀಶ್ ಶೆಟ್ಟರ್,ಲಕ್ಷ್ಮಣ ಸವದಿ ಸೇರಿದಂತೆ ಹಲವರು ಹೋಗಿದ್ದಾರೆ.ಅವರ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ.ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ,ತುಮಕೂರು ನಗರ ಅಭ್ಯರ್ಥಿ ಜೋತಿಗಣೇಶ್, ಚುನಾವಣಾ ಉಸ್ತುವಾರಿ, ಎಂ.ಎಲ್.ಸಿ. ಚಿದಾನಂದಗೌಡ,ಟಿ.ಎಸ್.ನಿರಂಜನ್,ಟಿ.ಆರ್.ಸದಾಶಿವಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *