ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಪ್ರತಿಭಟನೆ

ತುಮಕೂರು : ಸಿದ್ದರಾಮಯ್ಯನವರು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಬಿಜೆಪಿ ಒತ್ತಾಯಿಸಿತು

ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಿಟ್ ಅರ್ಜಿಯನ್ನ ವಜಾ ಮಾಡಿ, ತನಿಖೆಗೆ ಆದೇಶಿಸಿದ್ದ ರಾಜ್ಯಪಾಲರ ಆದೇಶವನ್ನ ಘನ ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದ್ದು, ಇಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾದ ರವಿ ಹೆಬ್ಬಾಕ ರವರ ನೇತೃತ್ವದಲ್ಲಿ ಪ್ರತಿಭಟನೆಯನ್ನ ನಡೆಸಲಾಯಿತು.

ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ ಯಾವಾಗಲೂ ನೈತಿಕತೆಯ ಮತ್ತು ಸಮಾಜ ವಾದದ ಪಾಠವನ್ನ ಇಡೀ ರಾಜ್ಯಕ್ಕೆ ಬೋಧಿಸುತ್ತಿದ್ದ ಸಿದ್ದರಾಮಯ್ಯನವರು, ಇಂದು ಅವರ ಬೋದನೆಗೆ ಅನುಗುಣವಾಗಿ ತಾವೇ ನಡೆದುಕೊಳ್ಳುವಂತ ಪರಿಸ್ಥಿತಿ ಉದ್ಭವವಾಗಿದೆ. ಮೂಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘನ ಉಚ್ಛ ನ್ಯಾಯಾಲಯವು ಸಿದ್ದರಾಮಯ್ಯನವರ ತನಿಖೆಗೆ ಆದೇಶಿಸಿರುವುದರಿಂದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ಪಾರದರ್ಶಕ ತನಿಖೆಗೆ ಅನುವು ಮಾಡಿಕೊಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದರು.

ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶ್‌ಗೌಡ ಮಾತನಾಡಿ ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಶುಭ್ರವಾಗಿದ್ದೇನೆ, ಒಂದು ಸಣ್ಣ ಕಪ್ಪು ಚುಕ್ಕಿಯು ಸಹ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ಸಿದ್ದರಾಮಯ್ಯನವರ ಮುಖ ಇಂದು ಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ರಾಜ್ಯದ ಜನತೆಯ ದಾರಿ ತಪ್ಪಿಸಿ ಅಭಿವೃದ್ಧಿಯನ್ನ ಹಳ್ಳಕ್ಕೆ ತಳ್ಳಿ ದಲಿತರ ಪರಿಶಿಷ್ಟ ವರ್ಗದವರ, ರೈತರ ಹಾಗೂ ದೀನರ ಹಣವನ್ನ ಲೂಠಿ ಮಾಡುತ್ತಾ ಈ ಭ್ರಷ್ಟ ಸಿದ್ದರಾಮಯ್ಯನವರ ಸರ್ಕಾರ ಕಪ್ಪು ಹಣ ನಿರ್ಮಾಣದ ಕಾರ್ಖಾನೆಯಾಗಿದೆ. ಈ ಬಂಡತನವನ್ನು ಬಿಟ್ಟು ಈ ಪ್ರತಿಭಟನೆಯಲ್ಲಿ ವಿವಿಧ ಮೋರ್ಚಾಗಳ ಮುಖಂಡರು ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು, ನಗರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *