ವಿಶ್ವಕ್ಕೆ ಶಾಂತಿ ಕೊಟ್ಟಿದ್ದು ಬುದ್ಧ-ಡಾ.ಜಿ.ಪರಮೇಶ್ವರ್

ತುಮಕೂರು : ವಿಶ್ವಕ್ಕೆ ಶಾಂತಿ ಹಾಗೂ ನೆಮ್ಮದಿಯನ್ನ ತಂದು ಕೊಟ್ಟಿದ್ದು ಭಗವಾನ್ ಬುದ್ಧ, ಗೌತಮ ಬುದ್ಧನ ತತ್ವಗಳನ್ನು ನಾವು ನಮ್ಮ ಜೀವನಲ್ಲಿ ಅಳವಡಿಸಿಕೊಂಡರೆ ಯಶಸ್ಸು ದೊರೆಯುವುದು ಕಂಡಿತ, ಆತನ ತತ್ವ ಹಾಗೂ ಆದರ್ಶಗಳಿಂದ ಲಾಭವೇ ಒರತು ನಷ್ಟವಿಲ್ಲ. ಪ್ರಪಂಚದ ಇತಿಹಾಸದಲ್ಲಿ ಮನುಕುಲ ನೆರವಿಗೆ ಸಂಭಂದಿಸಿದ ಯಾವುದಾದರು ಘಟನೆಗಳು ನಡೆದಿವೆ ಎಂದರೆ ಅದು ಬುದ್ಧನಿಂದ ಮಾತ್ರ. ಇಡೀ ವಿಶ್ವವೇ ಸ್ಮರಿಸುವ ಘಟನೆಗಳು ನಡೆದಿರುವುದು ಮನುಕುಲಕ್ಕೆ ಮಾದರಿಯಾಗಿವೆ. ಇನ್ನ 35 ನೇ ವಯಸ್ಸಿನಲ್ಲಿ ಜ್ಞಾನೋದಯವಾಗಿ ಮನುಕುಲದ ಒಳಿತಿಗಾಗಿ ನಡೆದ ಬುದ್ಧನ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕುಲಾಧಿಪತಿಗಳಾದ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ಪಟ್ಟರು.

ನಗರದ ಹೋರಹೊಲಯದ ಸಿದ್ಧಾರ್ಥ ನಗರದಲ್ಲಿನ ಶ್ರಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ 2568ನೇಯ ಬುದ್ಧ ಪೂರ್ಣಿಮೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಕೂಡ ಬುದ್ಧ ತತ್ವಗಳ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತಿದೆ ಎಂದರು.

ನನ್ನ ತಂದೆಯವರಾದ ಎಚ್.ಎಂ.ಗಂಗಾಧರಯ್ಯ ಅವರು ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಬುದ್ಧನ ಕುರಿತ ಪುಸ್ತಕಗಳನ್ನು ಓದುತ್ತಿದ್ದರು. ಇದರ ಫಲವಾಗಿಯೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ರೂಪುಗೊಂಡಿತು. ಬುದ್ಧನ ತತ್ವಗಳನ್ನು ಅರ್ಥ ಮಾಡಿಕೊಂಡು, ಅದರ ಆಧಾರದ ಮೇಲೆ ಸಂಸ್ಥೆ ನಡೆಯಬೇಕು ಎಂಬುದು ಅವರ ಆಶಯ. ಬುದ್ಧನ ತತ್ವಗಳ ಮಾರ್ಗದಲ್ಲಿಯೇ ನಡೆಯುವಂತೆ ನಮಗೆ ಹೇಳಿದ್ದಾರೆ ಎಂದು ಅವರು ಹೇಳಿದರು.

ಬೀದರ್ ಚಾಂದಿಯಾ ಬಂತಜೀ ಸ್ವಾಮೀಜಿ ಮಾತನಾಡಿ, ರಾಜನ ಮಗನಾಗಿದ್ದ ಗೌತಮ ತನ್ನ ಸಂಪತ್ತನ್ನು ತ್ಯಜಿಸಿ ಹೊರನಡೆದು ಶಾಂತಿಯ ಕಡೆಗೆ ಹೇಗೆ ನಡೆದನೋ ಅದೆ ರೀತಿ ನಾವುಗಳು ಕೂಡ ಯಾವುದಕ್ಕೂ ಆಸೆ ಪಡದೆ ಇರುವುದರಲ್ಲಿ ತೃಪ್ತಿ ಪಟ್ಟಾಗ ಮಾತ್ರ ನಮ್ಮ ಜೀವಸವೂ ಸುಖಮಯವಾಗಿರುತ್ತದೆ. ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ ತಿಳಿಸಿಕೊಟ್ಟಿದ್ದಾನೆ ಎಂದ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಸಾಹೇ ವಿವಿಯ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ, ರಿಜಿಸ್ಟ್ರಾರ್ ಎಂ . ಝಡ್ ಕುರಿಯನ್, ಕುಲಪತಿಗಳ ಸಲಹೆಗಾರ ಡಾ. ವಿವೇಕ್ ವೀರಯ್ಯ, ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಡಪ್ಪ , ಸಿದ್ದಾರ್ಥ ಮೆಡಿಕಲ್ ಕಾಲೇಜು, ಡೆಂಟಲ್, ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು,ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *