ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಉಚಿತ ನೀರಿನ ಬಟ್ಟಲುಗಳ ಅಭಿಯಾನ

ತುಮಕೂರು : ಎಸ್.ಐ.ಟಿ ಕಾಲೇಜಿನಲ್ಲಿ ಏಪ್ರಿಲ್ 17ರಂದು ವಾಟರ ಫಾರ್ ವಾಯ್ಸ್ ಲೆಸ್ ಸಂಸ್ಥೆಯ ವತಿಯಿಂದ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ಬಟ್ಟಲುಗಳ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಐ.ಟಿ. ಪ್ರಾಂಶುಪಾಲರಾದ ಪ್ರೊ. ಎಸ್.ವಿ.ದಿನೇಶ್ ರವರು ಮಾನವ ಸಮಾಜದಲ್ಲಿ ಸಕಲ ಪ್ರಾಣಿ-ಪಕ್ಷಿಗಳಿಗು ಜೀವಿಸುವ ಹಕ್ಕನ್ನು ಪ್ರತಿಪಾದಿಸಿ, ಎಲ್ಲಾ ಜೀವಿಗಳಿಗು ನೀರಿನ ಸೌಲಭ್ಯತೆ ಯನ್ನು ಒದಗಿಸುವ ಅಭೂತಪೂರ್ವ ಅಭಿಯಾನ ಇದಾಗಿದೆ ಎಂದು ಹೇಳಿದರು.

ವಾಟರ ಫಾರ್ ವಾಯ್ಸ್ ಲೆಸ್ ಸಂಸ್ಥೆಯ ಸಂಸ್ಥಾಪಕರಾದ ಜೈನ್ ಸನ್ನಿ ಹಸ್ತಿಮಲ್ ಇವರು ಮಾತನಾಡಿ ಸುಮಾರು ಐವತ್ತಕ್ಕೂ ಹೆಚ್ಚು ನೀರಿನ ಬಟ್ಟಲುಗಳನ್ನು ಕಾಲೇಜಿನ ಕ್ಯಾಂಪಸ್ ನಲ್ಲಿ ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲ ವಾಗುವಂತೆ ನೀರಿನ ಬಟ್ಟಲುಗಳನ್ನು ಉಚಿತವಾಗಿ ನೀಡಿದರು.

ಕಾರ್ಯಕ್ರಮಕ್ಕೆ ವಾಟರ ಫಾರ್ ವಾಯ್ಸ್ ಲೆಸ್ ಸಂಸ್ಥೆಯ ಸಂಸ್ಥಾಪಕರಾದ ಜೈನ್ ಸನ್ನಿ ಹಸ್ತಿಮಲ್, ಹಾಗು ಪ್ರಪುಲ್ ಮೌನ್, ಪ್ರಾಂಶುಪಾಲರಾದ ಪ್ರೊ.ಎಸ್.ವಿ.ದಿನೇಶ್, ಎನ್.ಎಸ್.ಎಸ್.ಘಟಕದ ಸಂಯೋಜಕರು ಆದ ಡಾ// ಆರುಣ್ ಎಸ್.ಬಿ ಹಾಗು ವಿದ್ಯಾರ್ಥಿಗಳು ಸೇರಿ ಕಾಲೇಜಿನ ಕ್ಯಾಂಪಸ್ ನಲ್ಲಿ ನೀರಿನ ಬಟ್ಟಲುಗಳಿಗೆ ನೀರನ್ನು ಹಾಕುವುದರ ಮೂಲಕ ಚಾಲನೆ ನೀಡಿದರು.

Leave a Reply

Your email address will not be published. Required fields are marked *