ತುಮಕೂರು:ರಾಷ್ಟ್ರದಲ್ಲಿಯೇ 3ನೇ ಅತಿ ದೊಡ್ಡ ಜಾಲವನ್ನು ಹೊಂದಿರುವ ಕೆನರಾ ಬ್ಯಾಂಕ್ ಕರ್ನಾಟಕ ಮೂಲದ್ದು ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದು ತುಮಕೂರು ಮಹಾನಗರಪಾಲಿಕೆಯ ಆಯುಕ್ತರಾದ ಶ್ರೀಮತಿ ಆಶ್ವೀಜ ತಿಳಿಸಿದ್ದಾರೆ.
ನಗರದ ಎಂ.ಜಿ.ರಸ್ತೆಯಲ್ಲಿ ಕೆನರಾ ಬ್ಯಾಂಕಿನ 53ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ನಾನು ಕೂಡ ಕೆನರಾ ಬ್ಯಾಂಕಿನ ಗ್ರಾಹಕಿಯಾಗಿದ್ದು,ವಿದ್ಯಾರ್ಥಿ ದಿಸೆಯಲ್ಲಿಯೇ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು ವ್ಯವಹರಿಸುತ್ತಾ ಬಂದಿದ್ದೇನೆ. ಜನರಿಗೆ ಒಳ್ಳೆಯ ಸೇವೆ ದೊರೆಯುತ್ತಿದೆ ಎಂದರು.
ಕಾಕತಾಳಿಯ ವೆಂಬಂತೆ ತುಮಕೂರಿನ ಮಂಜುನಾಥ ನಗರದಲ್ಲಿ ಕೆನರಾ ಬ್ಯಾಂಕಿನ ಇನ್ನೊಂದು ಶಾಖೆಯನ್ನು ನಾನೇ ಉದ್ಘಾಟಿಸಿದ್ದು,ತುಂಬಾ ಚನ್ನಾಗಿ ಬೆಳೆಯುತ್ತಿದೆ ಎಂದು ಬ್ಯಾಂಕಿನ ಸಿಬ್ಬಂದಿ ಹೇಳಿದನ್ನು ಕೇಳಿ ಸಂತೋಷವಾಯಿತು.ಅದೇ ರೀತಿ ವ್ಯಾಪಾರಸ್ಥರೇ ಹೆಚ್ಚಾಗಿರುವ ಎಂ.ಜಿ.ರಸ್ತೆಯಲ್ಲಿ ಬ್ಯಾಂಕಿನ ಶಾಖೆ ತೆರೆದಿರುವುದರಿಂದ ಹೆಚ್ಚಿನ ಗ್ರಾಹಕರು ದೊರೆಯುವ ನಿರೀಕ್ಷೆಯದೆ.ನಿಮ್ಮಿಂದ ಬೀದಿ ಬದಿ ವ್ಯಾಪಾರಿಗಳು,ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ದೊರೆಯುವಂತಾಗಲಿದೆ ಎಂದು ಶ್ರೀಮತಿ ಅಶ್ವೀಜ ಶುಭ ಹಾರೈಸಿದರು.
ಕೆನರಾ ಬ್ಯಾಂಕ್ ಬೆಂಗಳೂರು ವೃತ್ತದ ಜನರಲ್ ಮ್ಯಾನೇಜರ್ ಮಹೇಶ್ ಎಂ.ಪೈ ಮಾತನಾಡಿ,ತುಮಕೂರು ವಲಯ ಕಚೇರಿಯಲ್ಲಿ ಎಂ.ಜಿ.ರಸ್ತೆಯ ಶಾಖೆಯ 53ನೇಯದು,ಬೆಂಗಳೂರು ವೃತ್ತದಲ್ಲಿ 540 ಶಾಖೆಯಾಗಿದೆ.ಜನರಿಗೆ ಒಳ್ಳೆಯ ಸೇವೆ ದೊರೆಯಬೇಕೆಂಬುದು ನಮ್ಮ ಇಚ್ಚೆಯಾಗಿದೆ.ಜನರು ಹೆಚ್ಚಿನ ರೀತಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ವ್ಯವಹರಿಸಿ ನೀವು ಬೆಳೆಯುವುದರ ಜೊತೆಗೆ, ಬ್ಯಾಂಕ್‍ನ್ನು ಬೆಳೆಸುವಂತೆ ಮನವಿ ಮಾಡಿದರು.
ತುಮಕೂರು ವಲಯ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಂಗೇಶ್ ಗುಂಜಾನ್ ಮಾತನಾಡಿ,ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಎಲ್ಲಾ ರೀತಿಯ ಸೇವೆಗಳು ದೊರೆಯಲಿವೆ.ಎಂ.ಎಸ್.ಎಂ.ಇ ಸೇರಿದಂತೆ ಸರಕಾರದ ಎಲ್ಲಾ ಯೋಜನೆಗಳಿಗೂ ಸಾಲ ಸೌಲಭ್ಯ ಒದಗಿಸಲಾಗುವುದು.ಗ್ರಾಹಕರು ಎಲ್ಲಾ ರೀತಿಯ ವ್ಯವಹಾರ ನಡೆಸುವಂತೆ ಕೋರಿದರು.
ವೇದಿಕೆಯಲ್ಲಿ ಕೆನರಾ ಬ್ಯಾಂಕ್ ಮೂಲಭೂತ ಸೌಕರ್ಯ ವಿಭಾಗದ ಮುಖ್ಯಸ್ಥರಾದ ರಾಕೇಶ್ ಶರ್ಮ,ಮಹಾತ್ಮಗಾಂಧಿ ರಸ್ತೆ ಶಾಖೆಯ ವ್ಯವಸ್ಥಾಪಕರಾದ ಅಂಜಲಿಕುಮಾರಿ,ಕಟ್ಟಡದ ಮಾಲೀಕರಾದ ಸತೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.