ರೋಟರಿಯಿಂದ ಕ್ಯಾನ್ಸರ್‍ಗೆ ವಾಕ್ಸಿನ್

ತುಮಕೂರು:ಹೆಣ್ಣು ಮಕ್ಕಳೇ ಮಾರಕ ಖಾಯಿಲೆ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದಾರೆ.ಕ್ಯಾನ್ಸರ್ ತಡೆಗಟ್ಟಲು ವ್ಯಾಕ್ಸಿನ್ ನೀಡಲು ರೋಟರಿ ಕ್ಲಬ್ ಮುಂದಾಗಿದೆ.ಎಲ್ಲಾ ರೋಟೇರಿಯನ್‍ಗಳು ಇದಕ್ಕೆ ತಮ್ಮ ಕೈಲಾದ ಸಹಾಯ ನೀಡಬೇಕೆಂದು ರೋಟರಿ ಕ್ಲಬ್ 3192 ಜಿಲ್ಲಾ ರಾಜ್ಯಪಾಲ ಮಹದೇವಪ್ರಸಾದ್.ಎ.ಎಸ್. ತಿಳಿಸಿದ್ದಾರೆ.

ನಗರದ ಬಿರ್ಲಾ ಆಡಿಟೋರಿಯಂನಲ್ಲಿ ರೋಟರಿ-3192ನ ಪದಗ್ರಹಣ ಸಮಾರಂಭದಲ್ಲಿ ರೋಟರಿ-3192ನ 2024-25ನೇ ಸಾಲಿನ ಅಧ್ಯಕ್ಷರಾದ ರಾಜೇಶ್ವರಿ ರುದ್ರಪ್ಪ ಅವರಿಗೆ ಪದವಿ ಹಸ್ತಾಂತರಿಸಿ ಮಾತನಾಡುತಿದ್ದ ಅವರು,ಚಿಕ್ಕ ಮತ್ತು ಹದಿ ಹರೆಯದ ಮಕ್ಕಳು ಸರ್ವೆಕಲ್ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದು,ಪೊಲೀಯೊ ರೀತಿಯಲ್ಲಿಯೇ ಇದನ್ನು ನಿಮೂರ್ಲನೆ ಮಾಡಬೇಕೆಂಬ ಪಣವನ್ನು ರೋಟರಿ ಹೊಂದಿದೆ. ಹಾಗಾಗಿ ಎಲ್ಲ ಕ್ಲಬ್‍ಗಳ ಸಹಕಾರ ಮುಖ್ಯ ಎಂದರು.

ದೆಹಲಿ ಪಬ್ಲಿಕ್ ಇಂಟನ್ರ್ಯಾಷನಲ್ ಸ್ಕೂಲ್ ಸ್ಥಾಪಕ ಅಧ್ಯಕ್ಷರಾದ ಸುನಿತಾಗೌಡ ಮಾತನಾಡಿ, ರೋಟರಿ ಸೇವೆಗೆ ಹೆಸರಾದ ಸಂಸ್ಥೆ, ಮೊದಲ ಬಾರಿಗೆ ಮಹಿಳೆಯರೊಬ್ಬರು ಈ ಸಂಸ್ಥೆಯ ಅಧ್ಯಕ್ಷರಾಗಿರುವುದು ಸಂತೋಷವಾಗಿದೆ. ಅಗತ್ಯವೆನಿಸಿದರೆ ಅವರ ಎಲ್ಲಾ ಸೇವಾ ಕಾರ್ಯಗಳಿಗೆ ನೆರವಾಗುವುದಾಗಿ ಭರವಸೆ ನೀಡಿದರು.

ರೋಟರಿ ಕಬ್ಲ್ 3192 67ನೇ ಅಧ್ಯಕ್ಷರಾಗಿ, ಪ್ರಥಮ ಮಹಿಳಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಾಜೇಶ್ವರಿ ರುದ್ರಪ್ಪ ಮಾತನಾಡಿ,ರೋಟರಿ ಸದಸ್ಯೆಯಾದ ದಿನದಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಹನುಮಂತಪುರದಲ್ಲಿರುವ ಶ್ರೀಶಾರದ ಪ್ರೌಢಶಾಲೆಯಲ್ಲಿ ದತ್ತು ಪಡೆದು,ಕಳೆದ 6 ವರ್ಷಗಳಿಂದ ಅಲ್ಲಿನ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಿ, ಶಾಲೆಯ ಅಭಿವೃದ್ದಿಗೆ ಶ್ರಮಿಸುತ್ತಿದೇನೆ. ರೋಟರಿಯ ಎಲ್ಲಾ ಕಾರ್ಯಕ್ರಮಗಳ ಜೊತೆಗೆ, ಈ ಬಾರಿ ಸರ್ವೆಕಲ್ ಕ್ಯಾನ್ಸರ್ ತೆಡೆಯಲು ಹೆಚ್ಚು ಒತ್ತು ನೀಡುತ್ತಿದ್ದು, ನಮ್ಮ ಕ್ಲಬ್‍ನಿಂದ ಸುಮಾರು 1000 ಜನ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿಸಲಾಗುವುದು ಎಂದು ಭರವಸೆ ನೀಡಿದರು.

ರೋಟರಿ ಕ್ಲಬ್ ತುಮಕೂರು ಬಡವರಿಗಾಗಿ ಕಾಮಧೇನು ಪ್ರಾಜೆಕ್ಟ್,ರಕ್ತಧಾನ ಶಿಬಿರ,ಪ್ರತಿ ಭಾನುವಾರ ಮಧುಮೇಹ ತಪಾಸಣಾ ಶಿಬಿರ,ನೀರು ಉಳಿಸಿ, ಮರಬೆಳೆಸಿ ಆಂದೋಲನ,ವಿಕಲಾಂಗರಿಗೆ ವ್ಹೀಲ್ ಚೇರ್ ವಿತರಣೆ, ದಂತ ತಪಾಸಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಅಲ್ಲದೆ ರೋಟರಿ ವತಿಯಿಂದ ರಾಜ್ಯದ 7 ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದಲ್ಲಿ ಉಚಿತ ಹೃದ್ರೋಗ ಚಿಕಿತ್ಸೆ ಯೋಜನೆ ಹಮ್ಮಿಕೊಳ್ಳಲಾಗಿದ್ದು,ಇದುವರೆಗೂ 350ಕ್ಕೂ ಹೆಚ್ಚು ಜನರ ಇದರ ಲಾಭ ಪಡೆದುಕೊಂಡಿದ್ದಾರೆ.ಜಿಲ್ಲಾಡಳಿತ ರೋಟರಿಗೆ ಕೆಸರುಮಡು ರಸ್ತೆಯಲ್ಲಿ ಸಿ.ಎ.ನಿವೇಶನ ನೀಡಿದ್ದು,ಸ್ವಂತ ಕಟ್ಟಡ ಹೊಂದುವ ಕೆಲಸ ಆರಂಭವಾಗಿದೆ.ಮುಂದಿನ ದಿನಗಳಲ್ಲಿ ಅಲ್ಲಿಂದಲೇ ಜನರಿಗೆ ಆರೋಗ್ಯದ ಜೊತೆಗೆ ಇನ್ನಿತರ ಸೇವೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದರು.

ಬಿರ್ಲಾ ಅಡಿಟೋರಿಯಂನಲ್ಲಿ ನಡೆದ 2024-25 ಸಾಲಿನ ರೋಟರಿ ಪದಗ್ರಹಣ ಸಮಾರಂಭಲ್ಲಿ ಅಧ್ಯಕ್ಷರಾದ ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ನಾಗಮಣಿ ಶಿವಕುಮಾರ್,ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್,ವಲಯ ಗೌರ್ನರ್ ಪ್ರಕಾಶ್.ಎಂ.ಎಸ್,ಸಹಾಯಕ ಗೌರ್ನರ್ ಪ್ರಮೀಳಾ ಶಿವಕುಮಾರ್,ರೋಟರಿ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಶಿವಶಂಕರ ಕಾಡದೇವರಮಠ್,ಎಂ.ಎಸ್.ಉಮೇಶ್2023-24ನೇ ಸಾಲಿನ ಅಧ್ಯಕ್ಷರಾದ ನಾಗರಾಜ್.ಸಿ,ಕಾರ್ಯದರ್ಶಿ ಶಿವಕುಮಾರಸ್ವಾಮಿ ಎ.ಎಸ್.ಆವರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *